Tuesday, October 22, 2024

Latest Posts

Health Tips: ಕ್ಯಾನ್ಸರ್ ಎಂದರೇನು..? ಈ ರೋಗಕ್ಕೆ ಪರಿಹಾರವೇ ಇಲ್ಲವಾ..?

- Advertisement -

Health Tips: ಕ್ಯಾನ್ಸರ್‌ನಂಥ ಮಾರಕ ರೋಗ ಈಗ ಕಾಮನ್ ಅಂತಾ ಆಗಿ ಬಿಟ್ಟಿದೆ. ಇದಕ್ಕೆ ಕಾರಣ ನಮ್ಮ ಜೀವನಶೈಲಿ. ನಾವು ಸೇವಿಸುವ ಆಹಾರ, ಬಳಸುವ ವಸ್ತುಗಳು, ಮೇಕಪ್ ಸಾಧನಗಳು, ಬಾಟಲಿಗಳು, ಪಾಾತ್ರೆಗಳು. ಇವೆಲ್ಲವೂ ನನಮಗೆ ಕ್ಯಾನ್ಸರ್ ಬರಲು ಕಾರಣವಾಗುತ್ತದೆ. ಕೆಟ್ಟ ಚಟಗಳಿಲ್ಲದೇ, ಹಳ್ಳಿಯಲ್ಲಿ ಆರೋಗ್ಯಕರ ಆಹಾರ, ಶುದ್ಧ ಗಾಳಿ ಸೇವಿಸಿಕೊಂಡು ಬದುಕುವವರಿಗೂ ಕ್ಯಾನ್ಸರ್ ಒಕ್ಕರಿಸುತ್ತಿದೆ ಎಂಬುದು, ಆತಂಕಕರ ಸಂಗತಿ. ಹಾಗಾದ್ರೆ ಕ್ಯಾನ್ಸರ್ ಎಂದರೇನು..? ಇದಕ್ಕೆ ಏನು ಪರಿಹಾರ ಅನ್ನೋ ಬಗ್ಗೆ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರು ವಿವರಿಸಿದ್ದಾರೆ.

ಕ್ಯಾನ್ಸರ್‌ನ್ನು ಕನ್ನಡದಲ್ಲಿ ಅರ್ಬುದ ಖಾಯಿಲೆ ಎಂದು ಕರೆಯಲಾಗುತ್ತದೆ. ಯಾವ ಅಂಗಕ್ಕೆ ಕ್ಯಾನ್ಸರ್ ಬರುತ್ತದೆಯೋ, ಆ ಅಂಗ ಕೊಳೆಯುತ್ತ ಹೋಗುತ್ತದೆ. ಕಾಾರ್ಯನಿರ್‌ವಹಿಸುವುದನ್ನು ನಿಲ್ಲಿಸುತ್ತದೆ. ಹಾಗಾದ್ರೆ ಯಾಕೆ ನಾವು ಬದುಕಿದ್ದಾಗಲೇ, ಕ್ಯಾನ್ಸರ್ ಬಂದು ನಮ್ಮ ಅಂಗ ಕೊಳೆಯುತ್ತದೆ ಎಂದರೆ, ನಾನು ಆ ಅಂಗಕ್ಕೆ ಬೇಕಾದ ಪೌಷ್ಟಿಕಾಂಶವನ್ನು ಕೊಡುವುದನ್ನು ಬಿಟ್ಟಿರುತ್ತೇವೆ. ಆ ಭಾಗದಲ್ಲಿ ತ್ಯಾಜ್ಯ ಉಳಿದಾಗ, ಅದನ್ನು ಆರೋಗ್ಯಕರ ಆಹಾರ ಸೇವನೆಯ ಮೂಲಕ, ಶುದ್ಧ ನೀರಿನ ಸೇವನೆಯ ಮೂಲಕ ಆ ತ್ಯಾಜ್ಯವನ್ನು ಹೊರಹಾಕಬೇಕಾಗುತ್ತದೆ.

ಆದರೆ ನಾವು ಆರೋಗ್ಯಕರ ಆಹಾರ ಸೇವನೆಯ ಬದಲು, ಅನಾರೋಗ್ಯಕರ ಆಹಾರ ಸೇವನೆ ಮಾಡಿದಾಗ, ಆ ಅಂಗದಿಂದ  ಆ ತ್ಯಾಜ್ಯ ಹೊರಹೋಗುವ ಬದಲು, ಇನ್ನೂ ಹೆಚ್ಚಿನ ತ್ಯಾಜ್ಯ ಅಲ್ಲೇ ಉಳಿದುಕೊಳ್ಳುತ್ತದೆ. ಆಗಲೇ ಕ್ಯಾನ್ಸರ್‌ನಂಥ ಮಾರಕ ಖಾಯಿಲೆ ಬರುವುದು.

ಎಲ್ಲಕ್ಕಿಂತ ಮುಖ್ಯವಾಗಿ ನಾವು ರಕ್ತವನ್ನು ಶುದ್ಧವಾಗಿ ಇರಿಸಿಕೊಳ್ಳಬೇಕು. ಅದಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸಬೇಕು. ಆಗ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ರಕ್ತ ಶುದ್ಧವಾಗಿದ್ದು, ರಕ್ತ ಸಂಚಾರ ಸರಿಯಾಗಿ ಇದ್ದರೆ, ನಮ್ಮ ದೇಹದಲ್ಲಿರುವ ಜೀವಕೋಶಗಳು ಆರೋಗ್ಯವಾಗಿರುತ್ತದೆ. ಆದರೆ ರಕ್ತದಲ್ಲಿ ಕಲ್ಮಶವಿದ್ದರೆ, ಆ ರಕ್ತಗಳು ಜೀವಕೋಶಗಳಿಗೂ ಅಶುದ್ಧ ರಕ್ತವನ್ನೇ ಸರಬರಾಜು ಮಾಡುತ್ತದೆ. ಆಗ ನಮಗೆ ಕ್ಯಾನ್ಸರ್‌ನಂಥ ಮಾರಕ ಖಾಯಿಲೆ ಬರಲು ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

- Advertisement -

Latest Posts

Don't Miss