Health Tips: ಫಿಟ್ಸ್ ಅನ್ನೋದು ಅಪರೂಪದ ಖಾಯಿಲೆ. ಯಾವಾಗ, ಯಾರಿಗೆ, ಹೇಗೆ ಈ ಖಾಯಿಲೆ ಬರುತ್ತದೆ ಅಂತಾ ಹೇಳಲು ಸಾಧ್ಯವೇ ಇಲ್ಲ. ಕೆಲವರಿಗೆ ಜೀವನದಲ್ಲೇ ಫಿಟ್ಸ್ ಬಂದಿರುವುದಿಲ್ಲ. ಆದರೆ ಗರ್ಭಾವಸ್ಥೆಯಲ್ಲಿ ಸಡನ್ ಆಗಿ ಬರುತ್ತದೆ. ಇನ್ನು ಕೆಲವರಿಗೆ ಬಿಪಿ ಏರಿ ಫಿಟ್ಸ್ ಬರುತ್ತದೆ. ಇನ್ನು ಕೆಲವರಿಗೆ ಟೆನ್ಶನ್ ಹೆಚ್ಚಾಗಿ ಫಿಟ್ಸ್ ಬರುತ್ತದೆ. ಅಲ್ಲದೇ ಆಹಾರ ದೋಷದಿಂದಲೂ ಫಿಟ್ಸ್ ಬರುತ್ತದೆಯಂತೆ. ಹಾಗಾದ್ರೆ ಯಾವ ರೀತಿಯ ಆಹಾರದಿಂದ ಫಿಟ್ಸ್ ಬರುತ್ತದೆ ಅಂತಾ ತಿಳಿಯೋಣ ಬನ್ನಿ.
ವೈದ್ಯರು ಹೇಳುವ ಪ್ರಕಾರ, ಕೆಲವರಿಗೆ ಅನುವಂಶಿಯವಾಗಿ ಫಿಟ್ಸ್ ಬರುತ್ತದೆ. ಚಿಕ್ಕ ವಯಸ್ಸಿನಲ್ಲಿ ತಲೆಗೆ ಏಟು ಬಿದ್ದಿರುತ್ತದೆ. ಇದರಿಂದಲೂ ಪಿಟ್ಸ್ ಬರಬಹುದು. ಇನ್ನು ಆಹಾರದ ಬಗ್ಗೆ ಹೇಳಿರುವ ವೈದ್ಯರು ಹಂದಿ ಮಾಂಸವನ್ನು ಸರಿಯಾಗಿ ಬೇಯಿಸದೇ ಸೇವಿಸಿದರೆ, ಫಿಟ್ಸ್ ರೋಗ ಬರುವ ಸಾಧ್ಯತೆ ಇರುತ್ತದೆ.
ಹಂದಿ ಮಾಂಸ ಬೇಯಿಸದೇ ತಿಂದರೆ, ಅಥವಾ ಹಸಿಯಾಗಿಯೇ ತಿಂದರೆ, ಅದರಲ್ಲಿರುವ ಬ್ಯಾಕ್ಟೀರಿಯಾ ತಲೆಗೇರಿ ಫಿಟ್ಸ್ ಖಾಯಿಲೆ ಬರುತ್ತದೆ. ಹಾಗಾಗಿ ಹಂದಿ ಮಾಂಸವನ್ನು ಸರಿಯಾಗಿ ಬೇಯಿಸಿ, ಸೇವಿಸಬೇಕು ಅಂತಾರೆ ವೈದ್ಯರು. ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.

