Health Tips: ಜ್ವರ ಅನ್ನೋದು ಕಾಮನ್ ಆದರೂ, ಅದನ್ನು ಸುಮ್ಮನೆ ನೆಗ್ಲೇಟ್ ಮಾಡಿದರೆ, ಅದು ಜೀವಕ್ಕೆ ಕುತ್ತು ತರೋದು ಕಾಮನ್. ಆದರೆ ಜ್ವರ ಬಂತು ಅಂದ ತಕ್ಷಣ, ನಾವು ಆಸ್ಪತ್ರೆಗೆ ಓಡಬಾರದು. ಬದಲಾಗಿ ಮನೆಮದ್ದು ಮಾಡಬೇಕು. ಹಾಗಾದ್ರೆ ಜ್ವರ ಬಂದಾಗ ಏನು ಮನೆಮದ್ದು ಮಾಡಬೇಕು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಹೇಳಿದ್ದಾರೆ ನೋಡಿ.
ದೇಹದಲ್ಲಿ ಶಕ್ತಿ ಕಡಿಮೆಯಾದಾಗ, ಅಶಕ್ತತೆ ಉಂಟಾದಾಗ, ರಕ್ತಹೀನತೆ ಸಮಸ್ಯೆ ಉಂಟಾದಾಗ, ಪದೇ ಪದೇ ಜ್ವರ ಬರುತ್ತದೆ. ಇದಕ್ಕೆ ಮನೆ ಮದ್ದು ಎಂದರೆ, ಒಂದು ಲೀಟರ್ ನೀರಿಗೆ, ಒಂದು ಮುಷ್ಠಿ ಬೇವಿನ ಎಲೆ, ನಾಲ್ಕು ಚಮಚ ಜೀರಿಗೆ, ನಾಲ್ಕು ಚಮಚ ಧನಿಯಾ, ಸ್ವಲ್ಪ ಜಜ್ಜಿದ ಶುಂಠಿ, ಅರಿಶಿನ, ಬೆಲ್ಲವನ್ನು ಸೇವಿಸಿ, ಕಶಾಯ ತಯಾರಿಸಬೇಕು.
ನೀರು ಕುದಿಸಿ, ಈ ಎಲ್ಲ ಸಾಮಗ್ರಿಗಳನ್ನು ಹಾಕಿ, ಚೆನ್ನಾಗಿ ಕುದಿಸಬೇಕು. ಒಂದು ಲೀಟರ್ ಇರುವ ನೀರು, ಅರ್ಧ ಲೀಟರ್‌ಗೆ ಬರುವ ತನಕ ಕುದಿಸಬೇಕು. ಈಗ ಕಶಾಯ ರೆಡಿ. ಹೆಚ್ಚು ಜ್ವರ ಇದ್ದಲ್ಲಿ, ಒಂದು ಗಂಟೆಗೆ ಒಂದು ಚ್ಕಿಕ ಲೋಟ ಕಶಾಯ ಕುಡಿಯಬೇಕು. ನಾಲ್ಕರಿಂದ 5 ಗಂಟೆಯೊಳಗೆ ಕಶಾಯ ಖಾಲಿಯಾಗಬೇಕು.
ಇನ್ನು ನಿಮಗೆ ಜ್ವರ ಬಂದಾಗ, ಪಥ್ಯ ಮಾಡುವುದು ತುಂಬಾ ಮುಖ್ಯವಾಗಿರುತ್ತದೆ. ಖಾರಾ ಪದಾರ್ಥ, ಮಸಾಲೆಯುಕ್ತ ಪದಾರ್ಥ, ಗಟ್ಟಿ ಪದಾರ್ಥ, ಮಾರುಕಟ್ಟೆಯಲ್ಲಿ ಸಿಗುವ, ಹೊಟೇಲ್‌ನಲ್ಲಿ ಸಿಗುವ ಆಹಾರಗಳ ಸೇವನೆ ಮಾಡಬಾರದು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.