Hubballi News: ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಚುನಾವಣೆಗೆ ಒಂದೇ ದಿನ ಬಾಕಿ ಇದೆ. ನಾಳೆಯೇ ಮೇಯರ್- ಉಪಮೇಯರ್ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್- ಬಿಜೆಪಿ ಸದಸ್ಯರಿಗೂ ಇನ್ನೂ ಒಮ್ಮತ ಮೂಡಲಿಲ್ಲ.
ಒಂದೆಡೆ ಆಪರೇಶನ್ ಹಸ್ತದ ಭೀತಿಯಲ್ಲಿ ದಾಂಡೇಲಿ ರೆಸಾರ್ಟ್ ನಲ್ಲೇ ಬಿಜೆಪಿ ಸದಸ್ಯರು ಬೀಡುಬಿಟ್ಟಿದ್ದು, ಆಪರೇಷನ್ ಹಸ್ತದ ಭೀತಿಯಿಂದ ಅವರಿಗೆಲ್ಲ ಕೇಸರಿ ಪಡೆ ವಿಪ್ ಜಾರಿ ಮಾಡಲಾಗಿದೆ. ರೆಸಾರ್ಟ್ ರಾಜಕೀಯದ ನಡುವೆಯೇ ಮೇಯರ್‌ಗಿರಿಗೆ ಮೂವರು, ಉಪಮೇಯರ್‌ಗೆ ಇಬ್ಬರ ನಡುವ ಫೈಟ್ ನಡೆದಿದೆ.
ಈ ಪೈಪೋಟಿ ಮಧ್ಯೆ ಉಭಯ ನಾಯಕರು ಸಿಕ್ರೇಟ್ ಮೆಂಟೇನ್ ಮಾಡುತ್ತಿದ್ದು, ಕಾಂಗ್ರೆಸ್ಸಿಗರು ಸಭೆಯ ಮೇಲೆ ಸಭೆ ನಡೆಸಿದ್ದಾರೆ. ರೆಸಾರ್ಟ್‌ನಲ್ಲೇ ಜೋಶಿ ಮತ್ತು ಶಾಸಕರ ನೇತೃತ್ವದಲ್ಲಿಂದು ಚರ್ಚೆ ನಡೆಯಲಿದ್ದು, ಸಂತೋಷ್ ಲಾಡ್ ಕೂಡ ಇಂದು ಇನ್ನೊಂದು ಸುತ್ತಿನ ಸಭೆ ನಡೆಸಲಿದ್ದಾರೆ.
‘ಇದೇನಿದು ಇಷ್ಟೊಂದು ಹೊಲಸು ವ್ಯವಸ್ಥೆ ಇದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಿ’
ಕರ್ನಾಟಕ ಅಷ್ಟೇ ಅಲ್ಲದೇ ಇಡೀ ದೇಶದ ಜನತೆ ನೋಡ್ತಾ ಇದೆ: ಅಕ್ಕಿ ಭಾಗ್ಯದ ಬಗ್ಗೆ ಸಚಿವ ಲಾಡ್ ಮಾತು..