Dharwad News: ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಮಳೆಯಿಂದಾಗಿ ಎರಡು ಗ್ರಾಮಗಳ ಸಂಪರ್ಕ ಕಡಿತವಾಗಿದೆ. ಆದರೂ ಜನ ಸೇತುವೆ ದಾಡುವ ಹರಸಾಹಸ ಮಾಡುತ್ತಿದ್ದಾರೆ. ಬ್ಯಾಲಾಳ ಮತ್ತು ಹಣಸಿ ಗ್ರಾಮದ ಮಧ್ಯೆ ಸಂಪರ್ಕ ಕಡಿತವಾಗಿದ್ದು, ಸೇತುವೆ ಮೇಲೆ ನೀರು ತುಂಬಿ ಹರಿಯುತ್ತಿದೆ. ಹಾಗಾಗಿ ಸೇತುವೆ ದಾಟಲು ಜನ ಹರಸಾಾಹಸ ಪಡುವಂತಾಗಿದೆ.
Belagavi News: ಬೆಳಗಾವಿ: ಬೆಳಗಾವಿಯಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದು, ಸವದತ್ತಿ ತಾಲೂಕಿನ ಯಲ್ಲಮ್ಮನ ಗುಡ್ಡದ ಹೊರವಲಯದಲ್ಲಿರುವ ರಸ್ತೆ ಜಲಾವೃತವಾಗಿದೆ. ಯಲ್ಲಮ್ಮನ ಗುಡ್ಡಕ್ಕೆ ಸಂಪರ್ಕಿಸುವ ರಸ್ತೆ ಕಟ್ ಆಗಿದೆ.
ಎರಡೂ ಗಂಟೆಗೂ ಅಧಿಕ ಸಮಯ ಭಾರೀ ಮಳೆ ಸುರಿದಿದ್ದು, ಮಳೆಯಿಂದಾಗಿ ಹಳ್ಳಗಳು ಉಕ್ಕಿಹರಿದಿದೆ. ರಭಸವಾಗಿ ಹರಿಯುವ ಹಳ್ಳದ ನೀರು ದಾಟಲಾಗದೇ ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಾಳೆ ಅಂದ್ರೆ ಆ.9ರಿಂದ ನೂಲು ಹುಣ್ಣಿಮೆ ಜಾತ್ರೆ ನಡೆಯುತ್ತಿದ್ದು, ಭಕ್ತಸಾಗರ ದೇವಸ್ಥಾನಕ್ಕೆ ಹರಿದುಬರುತ್ತಿದೆ. ಆದರೆ ಮಳೆಯಿಂದಾಗಿ ರಸ್ತೆ ಸಂಚಾರ ಸ್ಥಗಿತವಾಗಿದ್ದು, ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ ಭಕ್ತರು ಪರ್ಯಾಯ ಮಾರ್ಗವಾಗಿ ಸಂಚಾರ ಮಾಡುತ್ತಿದ್ದಾರೆ.