ಹಾಸನ: ಹಾಸನದಲ್ಲಿ ಮಳೆ ಆರ್ಭಟಕ್ಕೆ ಮತ್ತೊಂದು ಬಲಿಯಾಗಿದೆ. ರಾತ್ರಿ ಕಾಂಪೊಂಡ್ ಕುಸಿದು ನಿರ್ಗತಿಕ ವ್ಯಕ್ತಿ ಸಾವನ್ನಪ್ಪಿದ್ದು, ಹರ್ಷಾಮಹಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ.
ವಲ್ಲಭಭಾಯಿ ರಸ್ತೆಯ ಲೋಕೇಶ್ (50) ಮೃತ ವ್ಯಕ್ತಿಯಾಗಿದ್ದು, ಬೀದಿ ಬದಿಯಲ್ಲಿ ಹೇರ್ ಪಿನ್ ಕ್ಲಿಪ್ ಮಾರಾಟ ಮಾಡುತ್ತಿದ್ದ. ರಾತ್ರಿ ವೇಳೆ ಸಾರ್ವಜನಿಕ ಸ್ಥಳದಲ್ಲಿಯೇ ಲೋಕೇಶ್ ರಾತ್ರಿ ಆಶ್ರಯ ಪಡೆಯುತ್ತಿದ್ದ. ರಾತ್ರಿ ಕೂಡ ಕಾಂಪೌಂಡ್ ಪಕ್ಕವೇ ಲೋಕೇಶ್ ನಿದ್ರೆ ಮಾಡಿದ್ದ.
ಈ ವೇಳೆ ನಡುರಾತ್ರಿ ಜೋರಾಗಿ ಮಳೆ ಬಂದು ಕಾಂಪೌಂಡ್ ಗೋಡೆ ಕುಸಿದಿದೆ. ಆಗ ಕಾಂಪೌಂಡ್ ಅಡಿಗೆ ಸಿಲುಕಿ ಲೋಕೇಶ್ ಮೃತಪಟ್ಟಿದ್ದಾನೆ. ಮರುದಿನ ಬೆಳಿಗ್ಗೆ ಅಲ್ಲೇ ಇದ್ದ ಕೆಲ ಯುವಕರಿಗೆ ಮಣ್ಣಿನಡಿ ಟಾರ್ಪಲ್ ಕಂಡಿದೆ. ಅನುಮಾನದಿಂದ ಪರಿಶೀಲನೆ ನಡೆಸಿದಾಗ, ಮಣ್ಣಿನಡಿ ಮೃತದೇಹ ಇರೋದು ಪತ್ತೆಯಾಗಿದೆ. ಹಾಸನ ನಗರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಾಸನ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರ ಪ್ರಸ್ತಾಪ ಆಗಿಲ್ಲ: ಹೆಚ್.ಪಿ. ಸ್ವರೂಪ್