Dharwad News: ಧಾರವಾಡ: ಧಾರವಾಡ ಜಿಲ್ಲೆಯಾದ್ಯಂತ ಮಳೆ ಇರುವ ಹಿನ್ನೆಲೆ ಜಿಲ್ಲಾಡಳಿತ ಹೈ ಅಲರ್ಟ್ ಆಗಿದೆ. ಹೀಗಾಗಿ ಪ್ರವಾಹ ಬಂದರೆ ಎದುರಿಸಲು ಜಿಲ್ಲಾಡಳಿತ ಸಜ್ಜಾಗಿದ್ದು, ಕೆಲಗೇರಿ ಗ್ರಾಮದ ಕೆರೆಯಲ್ಲಿ ಅಣುಕು ಪ್ರದರ್ಶನ ಮಾಡಿ ತೋರಿಸಲಾಗಿದೆ.
ಕೆರೆಯಲ್ಲಿ ಮುಳುಗುತ್ತಿರುವವರನ್ನ ರಕ್ಷಣಾ ತಂಡದಿಂದ ಹೇಗೆ ರಕ್ಷಣೆ ಮಾಡಬಹುದು ಎಂಬುದರ ಬಗ್ಗೆ ಡಿಸಿ ದಿವ್ಯ ಪ್ರಭು ಅಣುಕು ಪ್ರದರ್ಶನ ಮಾಡಿದ್ದಾರೆ. ನೂರಾರು ಶಾಲಾ ಮಕ್ಕಳನ್ನು ಕರೆಸಿ, ಆ ಮಕ್ಕಳ ಎದುರು, ರಕ್ಷಣೆ ಮಾಡುವುದು, ಮತ್ತು ರಕ್ಷಣೆ ಮಾಡಿಕೊಳ್ಳುವುದು ಹೇಗೆ ಅಂತಾ ದಿವ್ಯ ಪ್ರಭು ಹೇಳಿಕೊಟ್ಟಿದ್ದಾರೆ. ಇನ್ನು ಜಿಲ್ಲಾಧಿಕಾರಿಗಳಿಗೆ ತಹಶೀಲ್ದಾರಿ ದೊಡ್ಡಪ್ಪ ಹೂಗಾರ್ ಮತ್ತು ಇಲಾಖೆಯ ಅಧಿಕಾರಿಗಳು ಸಾಥ್ ಕೊಟ್ಟಿದ್ದಾರೆ.
ಧಾರವಾಡ ಜಿಲ್ಲೆಯ ಕಲಘಟಗಿಯ ಅಳ್ನಾವರ ತಾಲೂಕಿನಲ್ಲಿ ಮಳೆ ಸ್ವಲ್ಪ ಹೆಚ್ಚಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಮಳೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ತುಪರಿ ಹಳ್ಳಿ, ಬೆಣ್ಣಿ ಹಳ್ಳಕ್ಕೆ ಬರುವ ಗ್ರಾಮಗಳಿಗೆ ಎಚ್ಚರಿಕೆ ನೀಡಲಾಗಿದೆ. ಸದ್ಯ ರೆಸ್ಕ್ಯೂ ಆಪರೇಶನ್ ಗೆ ಸಿದ್ದತೆ ಮಾಡಿಕ್ಕೊಳ್ಳುವಂತೆ ಸೂಚನೆ ನೀಡಿದ್ದೆನೆ. ಎಪ್ರಿಲ್ ನಿಂದ ಇಲ್ಲಿಯವರೆಗೆ ಒಂದು ಮಾನವ ಹಾನಿಯಾಗಿದೆ, 6 ಜಾನುವಾರುಗಳು ಸಾವನ್ನಪ್ಪಿವೆ. 4 ತೀರ್ವ ಮನೆಹಾನಿಯಾಗಿದೆ, 93 ಬಾಗಶಹ ಮನೆಗಳು ಹಾನಿಯಾಗಿದೆ. ಸದ್ಯ ಜಿಲ್ಲಾಡಳಿತ ಪ್ರವಾಹ ಬಂದರೆ ಎದುರಿಸಲು ಸಜ್ಜಾಗಿದೆ ಎಂದು ದಿವ್ಯಪ್ರಭು ಹೇಳಿದ್ದಾರೆ.