Political News: ಧಾರವಾಡ, ಜನವರಿ ೩: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಲಾಡ್ ಅವರು ತಾವು ನೀಡಿದ ಭರವಸೆಯಂತೆ ಮಹಿಳೆಯೊಬ್ಬರಿಗೆ ನೆರವು ನೀಡಿ ಮಾನವೀಯತೆ ಮೆರೆದಿದ್ದಾರೆ.
ಧಾರವಾಡದಲ್ಲಿ ನಡೆದಿದ್ದ ಜನತಾದರ್ಶನದಲ್ಲಿ ಮಹಿಳೆಗೆ ಸಹಾಯ ಮಾಡುವುದಾಗಿ ಹೇಳಿದ್ದರು. ಈಗ ಅದರಂತೆ ಧನ ಸಹಾಯ ಮಾಡಿದ್ದು, ಮಹಿಳೆ ಸಚಿವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಧಾರವಾಡದ ಕುಂಬಾರ ಓಣಿಯಲ್ಲಿ ವಾಸವಾಗಿರುವ ಪ್ರತಿಭಾ ಎಂಬುವವರು, ತಮ್ಮ ಮಗಳು ಅನಾರೋಗ್ಯಕ್ಕೀಡಾಗಿ ಎಂಟು ವರ್ಷದಿಂದ ಹಾಸಿಗೆ ಹಿಡಿದಿದ್ದು, ಕುಟುಂಬ ನಿರ್ವಹಣೆಗೆ ತೊಂದರೆಯಾಗಿದೆ. ಆದ್ದರಿಂದ ಸಹಾಯ ಮಾಡಬೇಕು ಎಂದು ಮನವಿ ಸಲ್ಲಿಸಿದ್ದರು.
ಜನತಾ ದರ್ಶನದಲ್ಲಿ ಮನವಿ ಸಲ್ಲಿಸಿದ್ದ ವೇಳೆ ತಮ್ಮ ಸಂತೋಷ್ ಲಾಡ್ ಫೌಂಡೇಶನ್ ಮೂಲಕ ಸಹಾಯ ಮಾಡುವುದಾಗಿ ಸಂತೋಷ್ ಲಾಡ್ ಅವರು ಹೇಳಿದ್ದರು. ಇದೀಗ ಪ್ರತಿಭಾ ಅವರಿಗೆ ಐವತ್ತು ಸಾವಿರದ ಚೆಕ್ ನೀಡಿದ್ದಾರೆ.
‘ಚುನಾವಣೆ ಲಾಭಕ್ಕಾಗಿ ಕಾಂಗ್ರೆಸ್ ಜಾರಿಗೆ ತಂದಿರುವ ಅಗ್ಗದ ಗ್ಯಾರಂಟಿಗಳು ಮಕ್ಕಳ ಭವಿಷ್ಯಕ್ಕೂ ಎರವಾಗಿವೆ’
‘ಇಂಥವರನ್ನು ಬಂಧಿಸದೇ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ’