Sunday, July 6, 2025

Latest Posts

ಗುಜರಾತ್ ಪ್ರವಾಸ ಹೋಗಬಯಸುವವರಿಗೆ ಇಲ್ಲಿದೆ ಅತ್ಯುತ್ತಮ ಅವಕಾಶ..

- Advertisement -

Hubballi News: ಹುಬ್ಬಳ್ಳಿ: ಭಾರತೀಯ ರೈಲ್ವೆ ವತಿಯಿಂದ ೧೧ ದಿನಗಳ ಗುಜರಾತ್ ಪ್ರವಾಸಿತಾಣಗಳ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ ಎಂದು ಟ್ರಾವಲ್ ಟೈಮ್ ನ ಪ್ರಧಾನ ವ್ಯವಸ್ಥಾಪಕರು ವಿಘ್ನೇಶ ಜಿ. ಹೇಳಿದರು.

ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್ ಪ್ರವಾಸಿತಾಣಗಳ ವೀಕ್ಷಣೆಗಾಗಿ ಕರ್ನಾಟಕದಿಂದ ಪಂಚದ್ವಾರಕ ವಿಶೇಷ ರೈಲು ಬಿಡಲಾಗುತ್ತಿದೆ ಎಂದರು.

ವಿಶೇಷ ಪ್ಯಾಕೇಜ್ ನಲ್ಲಿ ಗುಜರಾತ್ ಪ್ರಸಿದ್ಧ ತೀರ್ಥಕ್ಷೇತ್ರಗಳಾದ ದ್ವಾರಕಾ, ಸೋಮನಾಥ ಜ್ಯೋತಿರ್ಲಿಂಗ, ನಿಷ್ಕಳಂಕ ಮಹಾದೇವ ಸಮುದ್ರ ದೇವಸ್ಥಾನ, ಉದಯಪುರ, ನಾಥ್, ಕನ್ ಕೊರಳಿ, ಸರ್ದಾರ್ ವಲ್ಲಭಾಯಿ ಪಟೇಲ್ ಏಕತಾ ಪ್ರತಿಮೆ ಸ್ಥಳಗಳಿಗೆ ಭಾರತೀಯ ರೈಲ್ವೆ ಮತ್ತು ಟ್ರಾವೆಲ್ ಟೈಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಟೈರಿಸ್ಂ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಡಿ.೧೧ ರಿಂದ ಪ್ರವಾಸಿತಾಣಗಳ ವೀಕ್ಷಣೆಗೆ ಬೆಂಗಳೂರು, ತುಮಕೂರು, ಅರಸಿಕೇರೆ, ಬೀರೂರ, ದಾವಣಗೆರೆ, ಹುಬ್ಬಳ್ಳಿ, ಗದಗ, ಹೊಸಪೇಟೆ, ಬಳ್ಳಾರಿಂದ ಪ್ರವಾಸಿಗರನ್ನು ಕರೆದುಕೊಂಡು ಹೋಗಲಾಗುವುದು ಎಂದರು.

ಸ್ಲೀಪರ್ ಕೋಚ್ ಬಡ್ಜೆಟ್ ೧೯,೦೫೦, ಸ್ಲೀಪರ್ ಕೋಚ್ ಎಕಾನಮಿ ೨೩,೯೭೦ ರೂ., ತ್ರೀ ಎಸಿ ಕಂಫರ್ಟ್ ೩೨,೪೦೦ ರೂ., ಟೂ ಎಸಿ ಸ್ಟ್ಯಾಂಡರ್ಡ್ ೪೫,೪೦೦ ರೂ. ಪ್ಯಾಕೇಜ್ ಗಳನ್ನು ಪ್ರಕಟಿಸಲಾಗಿದೆ ಎಂದು ಹೇಳಿದರು.

ಆನಲೈನ್ ಬುಕ್ಕಿಂಗ್ ಗಾಗಿ www.railtourism.com, ಬುಕ್ಕಿಂಗ್ ಗಾಗಿ ೯೦೧೫೫ ೦೦೨೦೦ ಸಂಪರ್ಕಿಸಬಹುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪಕರಾದ ಪ್ರಲ್ಹಾದ್ ಉಪಸ್ಥಿತರಿದ್ದರು.

ತುಮಕೂರು ತಾಲೂಕು ಕಚೇರಿಗೆ ಸಚಿವರ ಧಿಡೀರ್ ಭೇಟಿ: ಕಕ್ಕಾಬಿಕ್ಕಿಯಾದ ಅಧಿಕಾರಿಗಳು

‘ಪ್ರಧಾನಿ ಮೋದಿಯವರ ಈ ನಡೆಯನ್ನು ರಾಜಕೀಯ ಇಬ್ಬಂದಿತನ ಎಂದು ಕರೆಯದೆ ಬೇರೇನು ಹೇಳಬೇಕು?’

‘ಕುಮಾರಸ್ವಾಮಿಯವರಿಗೆ ಸುಳ್ಳು ಹೇಳುವುದು ಬಿಟ್ಟರೆ ಬೇರೇನೂ ತಿಳಿದಿಲ್ಲ. ಸುಳ್ಳೇ ಅವರ ಮನೆದೇವರು’

- Advertisement -

Latest Posts

Don't Miss