Health Tips: ಕ್ಯಾನ್ಸರ್ ಬರೀ ಪುರುಷರಲ್ಲಿ ಅಥವಾ ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತದೆ ಅಂತಾ ಹೇಳಲಾಗುವುದಿಲ್ಲ. ಕ್ಯಾನ್ಸರ್ ಎಲ್ಲಾ ವಯಸ್ಸಿನ ಪುರುಷ ಮತ್ತು ಮಹಿಳೆಯರಲ್ಲಿ ಕಂಡು ಬರುತ್ತದೆ. ಆದರೆ ಬ್ರೀಸ್ಟ್ ಕ್ಯಾನ್ಸರ್ ಹೆಣ್ಣು ಮಕ್ಕಳಲ್ಲಿ ಹೆಚ್ಚಾಗಿ ಕಂಡು ಬರುವ ರೀತಿ, ಪುರುಷರಲ್ಲೂ ಬರುವ ಕ್ಯಾನ್ಸರ್‌ಗಳಿದೆ. ಆ ಬಗ್ಗೆ ವೈದ್ಯರೇ ವಿವರಿಸಿದ್ದಾರೆ ನೋಡಿ.
ಪ್ರೊಸ್ಟೇಟ್ ಕ್ಯಾನ್ಸರ್ ಗಂಡಸರಲ್ಲಿ ಮಾತ್ರ ಕಂಡು ಬರುವ ಕ್ಯಾನ್ಸರ್ ಆಗಿದೆ. ಪ್ರೊಸ್ಟೇಟ್ ಅಂದ್ರೆ ಪುರುಷರ ಮೂತ್ರಪಿಂಡದ ಬಳಿ ಇರುವ ಭಾಗ. ಈ ಭಾಗ ಪುರುಷರಲ್ಲಿ ಮಾತ್ರ ಇರುವ ಕಾರಣಕ್ಕಾಗಿ, ಪುರುಷರಿಗಷ್ಟೇ ಪ್ರೋಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಈ ಕ್ಯಾನ್ಸರ್ ಇರುವವರಿಗೆ ಮೂತ್ರವನ್ನು ಹಿಡಿದಿಟ್ಟುಕೊಳ್ಳುವ ಶಕ್ತಿ ಇರುವುದಿಲ್ಲ.
ಕೆಲವರಿಗೆ ಮೂತ್ರ ಬರುವುದೇ ಇಲ್ಲ. ಸಂಪೂರ್ಣವಾಗಿ ಮೂತ್ರ ಬರುವುದೇ ಬಂದ್ ಆಗುತ್ತದೆ. ಇನ್ನು ಕೆಲವರಿಗೆ ಪದೇ ಪದೇ ಮೂತ್ರ ವಿಸರ್ಜನೆಯಾಗುತ್ತದೆ. ಯಾರಿಗಾದರೂ ಹೀಗಾಗುತ್ತಿದ್ದಲ್ಲಿ, ಇದು ಪ್ರೊಸ್ಟೇಟ್ ಕ್ಯಾನ್ಸರ್ ಲಕ್ಷಣವಾಗಿರುತ್ತದೆ. ಇಂಥ ಸಮಸ್ಯೆ ಇದ್ದವರು ವೈದ್ಯರ ಬಳಿ ತಪಾಸಣೆ ಮಾಡಿಸುವುದು ಉತ್ತಮ.
ಈ ರೋಗಕ್ಕೆ ಸಿಂಪಲ್ ಬ್ಲಡ್ ಟೆಸ್ಟ್ ಇದೆ. ವರ್ಷಕ್ಕೊಮ್ಮೆಯಾದರೂ ಈ ಬ್ಲಡ್ ಟೆಸ್ಟ್ ಮಾಡಿಸಿಕೊಂಡರೆ, ಕ್ಯಾನ್ಸರ್ ಇದೆಯೋ ಇಲ್ಲವೋ ಎಂದು ಗೊತ್ತಾಗುತ್ತದೆ. ಅಲ್ಲದೇ, ಕ್ಯಾನ್ಸರ್ ಮೊದಲ ಹಂತದಲ್ಲೇ ಗೊತ್ತಾದರೆ, ವ್ಯಕ್ತಿಗೆ ಉತ್ತಮ ಚಿಕಿತ್ಸೆ ಕೊಟ್ಟು ಬದುಕಿಸಿಕೊಳ್ಳಬಹುದು ಅಂತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.