Tuesday, April 8, 2025

Latest Posts

ಪಟ್ಟದಾಟಕ್ಕೆ ಕೈ ಹೈಕಮಾಂಡ್ ಬೇಕ್..‌!‌ ಖರ್ಗೆ ಭೇಟಿ ಮಾಡಿದ ಪರಂ ಹೇಳಿದ್ದೇನು..?

- Advertisement -

Political News: ರಾಜ್ಯ ರಾಜಕಾರಣದಲ್ಲಿ ಪಟ್ಟಕ್ಕಾಗಿ ನಡೆಯುತ್ತಿದ್ದ ಪೈಟ್‌ಗೆ ಕೈ ಹೈಕಮಾಂಡ್‌ ತಾತ್ಕಾಲಿಕ ಬ್ರೇಕ್‌ ಹಾಕುವ ಪ್ರಯತ್ನ ಮಾಡಿದ್ದರೂ ಸಹ ನಾಯಕರ ಗುಪ್ತ್‌ ಮೀಟಿಂಗ್‌ಗಳು ಇನ್ನೂ ಮುಂದುವರೆದಿವೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಕಳೆದೆರಡು ದಿನಗಳ ಹಿಂದಷ್ಟೇ ದೆಹಲಿಯಲ್ಲಿ ಪ್ರತ್ಯೇಕವಾಗಿ ವರಿಷ್ಠರನ್ನು ಭೇಟಿಯಾಗಿ ಬಂದಿದ್ದರು. ಅಲ್ಲದೆ ಇದೀಗ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಯು ಕೈ ಪಾಳಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಇನ್ನೂ ಬೆಂಗಳೂರಿನ ಸದಾಶಿವ ನಗರದಲ್ಲಿರುವ ಪರಮೇಶ್ವರ್‌ ಅವರ ನಿವಾಸದಲ್ಲಿ ಉಭಯ ನಾಯಕರು ಒಂದು ಗಂಟೆಗೂ ಅಧಿಕ ಕಾಲ ಮಹತ್ವದ ಚರ್ಚೆ ನಡೆಸಿದ್ದಾರೆ. ಪ್ರಮುಖವಾಗಿ ರಾಜ್ಯ ರಾಜಕೀಯದ ಬೆಳವಣಿಗೆಗಳ ಜೊತೆಗೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್‌ ಇಬ್ಬರ ದೆಹಲಿ ಭೇಟಿಯ ವಿಚಾರ ಪ್ರಸ್ತಾಪವಾಗಿದೆ. ಅಲ್ಲದೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿದಂತೆ ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಆಂತರಿಕ ರಾಜಕೀಯದ ಬಗ್ಗೆಯೂ ಚರ್ಚೆಯಾಗಿದೆ.

ಖರ್ಗೆ ನನಗೆ ಹಿರಿಯಣ್ಣ..

ಅಲ್ಲದೆ ತಮ್ಮ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿಯ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ಖರ್ಗೆಯವರು ನನಗೆ ಹಿರಿಯಣ್ಣ ಇದ್ದಂತೆ, ನಮ್ಮ ಕುಟುಂಬಗಳ ವಿಚಾರ ಚರ್ಚೆ ಮಾಡಿದ್ದೇವೆ. ಅವರು ನನಗೆ ರಾಜಕೀಯದ ಬಗ್ಗೆ ಏನೂ ಕೇಳಲಿಲ್ಲ, ಅದರಂತೆ ನಾನೂ ಸಹ ಏನನ್ನೂ ಹೇಳಿಲ್ಲ. ಆದರೆ ಒಂದಂತೂ ಸತ್ಯ ಖರ್ಗೆ ಅವರು ಎಐಸಿಸಿ ಅಧ್ಯಕ್ಷರು ಹೀಗಾಗಿ ಅವರಿಗೆ ಅವರದೇ ಆದ ಮೂಲಗಳೂ ಇರುತ್ತವೆ ಎನ್ನುವ ಮೂಲಕ ಪರಮೇಶ್ವರ್‌ ಖರ್ಗೆ ಭೇಟಿಯ ಒಳಗುಟ್ಟನ್ನು ಬಿಟ್ಟುಕೊಟ್ಟಿಲ್ಲ.

ಅಸಮಾಧಾನ ಹೊರ ಹಾಕಿದ್ದ ಪರಂ..

ಇನ್ನೂ ಪ್ರಮುಖವಾಗಿ ಕಳೆದ ನಾಲ್ಕು ದಿನಗಳ ಹಿಂದೆ ಅಂದರೆ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿದ್ದ ಬಳಿಕ, ನನಗೆ ಕರ್ನಾಟಕ ಭವನದ ಉದ್ಘಾಟನೆಗೆ ಆಹ್ವಾನವೇ ನೀಡಿಲ್ಲ, ಹೇಗೆ ಹೋಗಲಿ..? ದೆಹಲಿಯ ಕರ್ನಾಟಕ ಭವನಕ್ಕೆ ಶಂಕು ಸ್ಥಾಪನೆ ನಾನೇ ಮಾಡಿದ್ದೆ. ಆದರೆ ಇದರ ಉದ್ಘಾಟನೆಗೆ ನನಗೆ ಆಹ್ವಾನವೇ ಇರಲಿಲ್ಲ ಎಂದು ಪರಮೇಶ್ವರ್‌ ತಮ್ಮ ಅಸಮಾಧಾನ ಹೊರಹಾಕಿದ್ದರು. ಅಲ್ಲದೆ ಇದರ ಕುರಿತೂ ಸಹ ಪರಮೇಶ್ವರ್‌, ಖರ್ಗೆ ಅವರಲ್ಲಿ ತಮ್ಮ ದೂರು ನೀಡಿದ್ದಾರೆ ಎನ್ನಲಾಗುತ್ತಿದೆ.

- Advertisement -

Latest Posts

Don't Miss