Saturday, April 5, 2025

Latest Posts

ರಾಧಾಕೃಷ್ಣ ಮನೆಗೆ ರವಿಕುಮಾರ್ ಭೇಟಿ: ಬೆಂಬಲಿಗರಿಂದ ಹೈಡ್ರಾಮಾ, ಪೊಲೀಸರಿಂದ ಪರಿಸ್ಥಿತಿ ನಿಯಂತ್ರಣ

- Advertisement -

ಮಂಡ್ಯ: ಟಿಕೇಟ್ ಕೈ ತಪ್ಪಿದ್ದಕ್ಕೆ ಕೀಲಾರ ರಾಧಾಕೃಷ್ಣ ಬೆಂಬಲಿಗರು ಮಂಡ್ಯದಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಮಂಡ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಗಣಿಗ ರವಿಕುಮಾರ್, ಕೀಲಾರು ರಾಧಾಕೃಷ್ಣ ಮನೆಗೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.

ರಾಧಾಕೃಷ್ಣ ಮನೆಗೆ ಬರ್ತಿದ್ದಂತೆ, ರವಿ ಕುಮಾರ್ ರಾಧಾಕೃಷ್ಣರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಹಾರ ಹಾಕಿ, ಹಣ್ಣಿನ ಬುಟ್ಟಿ ಕೊಟ್ಟು ಅಭಿನಂದನೆ ಹೇಳಿದ್ದಾರೆ.  ಬಳಿಕ ಮನೆಯೊಳಗೆ ಪರಸ್ಪರ ಮಾತುಕತೆ ನಡೆಸಿದ್ದಾರೆ. ಅಲ್ಲದೇ, ಮುನಿಸು ಮರೆತು, ಅಸಮಾಧಾನ ಬಿಟ್ಟು ಬೆಂಬಲಿಸುವಂತೆ ರವಿಕುಮಾರ್, ರಾಧಾಕೃಷ್ಣರಲ್ಲಿ ಮನವಿ ಮಾಡಿದ್ದಾರೆ.

ಇದಾದ ಬಳಿಕ ರಾಧಾಕೃಷ್ಣ ನಿವಾಸದ ಬಳಿ ಹೈಡ್ರಾಮಾ ನಡೆದಿದೆ. ಅಲ್ಲೇ ಇದ್ದ ರಾಧಾಕೃಷ್ಣ ಬೆಂಬಲಿಗರು, ರವಿಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ರಾಧಾಕೃಷ್ಣ ಅವರು ಸ್ಥಳದಲ್ಲೇ ಇದ್ದರು. ಆದರೂ ಕೂಡ ಅಭ್ಯರ್ಥಿ ಎದುರಲ್ಲೇ ಟಿಕೆಟ್ ಬದಲಾವಣೆಗೆ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ. ಅಲ್ಲದೇ ರವಿಕುಮಾರ್‌ಗೆ ಮುತ್ತಿಗೆ ಹಾಕಿದ ಬೆಂಬಲಿಗರು, ಕಾರು ತಡೆದು ಪ್ರತಿಭಟನೆ ಮಾಡಿದ್ದಾರೆ. ಕೆಲ ಕಾಲ ಹೈಡ್ರಾಮಾ ನಡೆದ ಬಳಿಕ, ರಾಧಾಕೃಷ್ಣರ ಸೂಚನೆ ಮೇರೆಗೆ ಬೆಂಬಲಿಗರು, ಕಾರು ಬಿಟ್ಟು ಕಳುಹಿಸಿದ್ದಾರೆ. ನಂತರ ಪೊಲೀಸರು ಬಂದು ಪರಿಸ್ಥಿತಿ ನಿಯಂತ್ರಣಕ್ಕೆ ತಂದಿದ್ದಾರೆ.

ಮಂಡ್ಯ ‘ಕೈ’ ಅಭ್ಯರ್ಥಿ ರವಿಕುಮಾರ್ ಗೆ ರಾಧಾಕೃಷ್ಣ ಬೆಂಬಲಿಗರ ಮುತ್ತಿಗೆ ರವಿಕುಮಾರ್ ವಾಪಸ್ಸಾಗುವಾಗ ಕಾರು ತಡೆದು ಪ್ರತಿಭಟನೆ ಕೆಲಕಾಲ ಹೈಡ್ರಾಮಾಕ್ಕೆ ಸಾಕ್ಷಿಯಾದ ರಾಧಾಕೃಷ್ಣ ನಿವಾಸ ರಾಧಾಕೃಷ್ಣ ಸೂಚನೆ ಮೇರೆಗೆ ಕಾರು ಬಿಟ್ಟು ಕಳುಹಿಸಿದ ಬೆಂಬಲಿಗರು.ಪೊಲೀಸರ ಆಗಮನದಿಂದ ಪರಿಸ್ಥಿತಿ ನಿಯಂತ್ರಣಕ್ಕೆ.

‘ಬಹುಶಃ ಜೆಡಿಎಸ್ ಪಕ್ಷಕ್ಕೆ ಏನಾದ್ರೂ ಆ ಶಾಪ ತಟ್ಟಿದೆಯೆನೋ ಗೊತ್ತಿಲ್ಲ’

ಮಂಡ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಭಿನ್ನಮತ, ರಾಧಾಕೃಷ್ಣಗೆ ಟಿಕೇಟ್ ಕೊಡುವಂತೆ ಒತ್ತಾಯ..

ಕೆಪಿಸಿಸಿ ಕಾರ್ಯಾಧ್ಯಕ್ಷ ದಿ.ಧ್ರುವನಾರಾಯಣ್ ಪತ್ನಿ ನಿಧನ..

- Advertisement -

Latest Posts

Don't Miss