Sunday, October 13, 2024

Latest Posts

ಹೈಕಮಾಂಡ್, ಭಿನ್ನಮತೀಯರ ಹಠ. ಬಿಎಸ್ ವೈಗೆ ಫುಲ್ ಸಂಕಷ್ಟ..!

- Advertisement -

ಕರ್ನಾಟಕ ಟಿವಿ : ಹೈಕಮಾಂಡ್ ಹಾಗೂ ಯಡಿಯೂರಪ್ಪ ನಡುವಿನ ಹಗ್ಗಜಗ್ಗಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣ್ತಿಲ್ಲ. ಯಾಕಂದ್ರೆ, ಉಮೇಶ್ ಕತ್ತಿ ಸೇರಿದಂತೆ ಇಬ್ಬರನ್ನ ಸಂಪುಟಕ್ಕೆ ಸೇರಿಸಿಕೊಳ್ಳಲು ಮುಂದಾಗಿದ್ದ ಯಡಿಯೂರಪ್ಪಗೆ ಹೈಕಮಾಂಡ್ ಬ್ರೇಕ್ ಹಾಕಿದೆ. ಬುಧವಾರ ಸಂಪುಟ ವಿಸ್ತರಣೆಗೆ ಮುಂದಾಗಿದ್ದ ಯಡಿಯೂರಪ್ಪ ಉಮೇಶ್ ಕತ್ತಿಗೆ ರೆಡಿಯಾಗುವಂತೆ ಹೇಳಿದ್ರು. ಆದ್ರೆ ತಾನು ಹೇಳಿದ ಮೂವರಿಗೆ ಡಿಸಿಎಂ ಸ್ಥಾನ ನೀಡಲು ಯಡಿಯೂರಪ್ಪ ಒಪ್ಪದ ಹಿನ್ನೆಲೆ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.

ಯಡಿಯೂರಪ್ಪ ಸರ್ಕಾರದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಭಿನ್ನಮತ

ಇನ್ನು ಯಡಿಯೂರಪ್ಪ ಅಂದುಕೊಂಡಂತೆ ಉಮೇಶ್ ಕತ್ತಿ ಸಚಿವ ಸ್ಥಾನ ಪಡೆದುಕೊಂಡ್ರೆ ರಾಮದಾಸ್, ತಿಪ್ಪಾರೆಡ್ಡಿ, ರಾಜುಗೌಡ, ಗೂಳಿಹಟ್ಟಿ ಶೇಖರ್, ರೇಣುಕಾಚಾರ್ಯ, ಅಂಗಾರ ಸೇರಿದಂತೆ ಹತ್ತಕ್ಕೂ ಹೆಚ್ಚು ಶಾಸಕರು ಮತ್ತೊಂದು ಸುತ್ತಿನ ಬಹಿರಂಗ ಬಂಡಾಯಕ್ಕೆ ಧುಮುಕೋದು ಗ್ಯಾರಂಟಿ. ಹೈಕಮಾಂಡ್ ಹಠ ಹಾಗೂ ಭಿನ್ನಮತೀಯರ ಹಾವಳಿಯಿಂದ ಯಡಿಯೂರಪ್ಪ ಸ್ಥಿತಿ ಫುಲ್ ಫಜೀತಿಯಾಗಿದೆ.

- Advertisement -

Latest Posts

Don't Miss