ಹಿಜಬ್ ನಿಷೇಧ ವಾಪಸ್ ಪಡಿಯೋಕ್ಕೆ ಕೇವಲ 30 ನಿಮಿಷ ಸಾಕು: ಸಿದ್ದು ವಿರುದ್ಧ ಓವೈಸಿ ವಾಗ್ದಾಳಿ

National Political News: ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, ಸಿಎಂ ಸಿದ್ದರಾಮಯ್ಯನವರು ಹಿಜಬ್ ಧರಿಸಬಹುದು. ಹಿಜಬ್ ನಿಷೇಧ ಆದೇಶವನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದರು. ಕರ್ನಾಟಕದ ಬಿಜೆಪಿ ನಾಯಕರು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರು. ಬಳಿಕ ಸಿಎಂ ಸೇರಿ ಕಾಂಗ್ರೆಸ್‌ನ ಹಲವು ನಾಯಕರು, ಅದನ್ನು ಮಾತಿನಲ್ಲಿ ಹೇಳಿದ್ದರಷ್ಟೇ, ಹಿಜಬ್ ನಿಷೇಧ ವಾಪಸ್‌ ಪಡಿಯೋ ಬಗ್ಗೆ ಚರ್ಚೆಯಾಗಿಲ್ಲ. ಆ ಆದೇಶವನ್ನು ಇನ್ನೂ ಹಿಂಪಡೆಯಲಾಗಿಲ್ಲ ಎಂದಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರಿಸುವ ಇಸ್ಲಾಂ ನಾಯಕ ಓವೈಸಿ, ಹಿಜಬ್ ನಿಷೇಧ ವಾಪಸ್ ಪಡಿಯೋಕ್ಕೆ ಕೇವಲ 30 ನಿಮಿಷ ಸಾಕು ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆದೇಶ ವಾಪಸ್‌ ಪಡಿಯೋಕ್ಕೆ 7 ತಿಂಗಳು ತೆಗೆದುಕೊಳ್ಳುವ ಅವಶ್ಯಕತೆ ಏನಿದೆ..? ಹಿಜಬ್‌ ನಿಷೇಧ ಆದೇಶವನ್ನು ಕೇವಲ ಅರ್ಧ ಗಂಟೆಯಲ್ಲಿ ವಾಪಸ್ ತೆಗೆದುಕೊಳ್ಳಬಹುದು ಎಂದಿದ್ದಾರೆ.

ಅಲ್ಲದೇ, ಉಡುಪು ಅವರವರ ಇಷ್ಟ. ಅದಕ್ಕೆ ನಾನು ಅಡ್ಡಿ ಬರುವುದಿಲ್ಲ. ಹಿಜಬ್ ಧರಿಸಬಹುದು ಎಂದು ಸಿಎಂ ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿದ್ದರು. ಆದರೆ, ಇನ್ನೂ ನಿರ್ಧಾರ ತೆಗೆದುಕೊಳ್ಳದಿರುವುದು ವಿಪರ್ಯಾಸದ ಸಂಗತಿ ಎಂದು ಓವೈಸಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

‘ಮಿಮಿಕ್ರಿ ಅನ್ನೋದು ಒಂದು ಕಲೆ, ಅದನ್ನು ಸಾವಿರ ಬಾರಿ ಮಾಡುತ್ತೇನೆ’

‘ಬಿಜೆಪಿಗರು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ’

‘ಅಶೋಕ್ ಅವರೇ, ಯಾಕೆ ನಮ್ಮ ಕೈಗೆ ಬಡಿಗೆ ಕೊಟ್ಟು ಬಡಿಸಿಕೊಳ್ತೀರಿ?’

About The Author