Thursday, August 7, 2025

Latest Posts

ಹಾಸನದ ಖಾಸಗಿ ಕಾಲೇಜಿನಲ್ಲಿ ಹಿಜಬ್ ವರ್ಸಸ್ ಕೇಸರಿ ಶಾಲು ಫೈಟ್

- Advertisement -

Hassan News: ಹಾಸನ : ಹಾಸನದ ಖಾಸಗಿ ಕಾಲೇಜಿನಲ್ಲಿ ಹಿಜಬ್ ವರ್ಸಸ್ ಕೇಸರಿ ಶಾಲು ಫೈಟ್ ನಡೆದಿದ್ದು, ಮುಸ್ಲಿಂ ಯುವತಿಯರು ಹಿಜಬ್ ಧರಿಸಿ ಬಂದರೆ, ಹಿಂದೂ ಯುವತಿ ಮತ್ತು ಯುವಕರು ಕೇಸರಿ ಶಾಲು ಧರಿಸಿ ಬರುತ್ತಿದ್ದಾರೆ.

ಹಾಸನದ ಕೈಗಾರಿಕಾ ಪ್ರದೇಶದಲ್ಲಿರುವ ವಿದ್ಯಾಸೌಧ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ಮೊದಲೆಲ್ಲ ಅನ್ಯಕೋಮಿನ ಯುವತಿಯರು ಬರೀ ಯೂನಿಫಾರ್ಮ್‌ನಲ್ಲಿ ಬರುತ್ತಿದ್ದರು. ಆದರೆ ಇತ್ತೀಚೆಗೆ ಯೂನಿಫಾರ್ಮ್ ಜೊತೆ ಹಿಜಬ್ ಧರಿಸಿ ಬರುತ್ತಿದ್ದಾರೆ. ಹಾಗಾಗಿ ಹಿಂದೂ ಯುವಕ, ಯುವತಿಯರು ಕೂಡ ಯೂನಿಫಾರ್ಮ್ ಮೇಲೆ ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುತ್ತಿದ್ದಾರೆ.

ಇನ್ನು ಹಿಜಬ್ ಧರಿಸಿ ಬರುತ್ತಿದ್ದ ಯುವತಿಯರಿಗೆ ಉಪನ್ಯಾಸಕರು ಮತ್ತು ಕಾಲೇಜಿನ ಪ್ರಾಂಶುಪಾಲರು, ಕಿವಿಮಾತು ಹೇಳಿದ್ದರೂ ಕೂಡ, ಆ ವಿದ್ಯಾರ್ಥಿನಿಯರು ಯಾರ ಮಾತಿಗೂ ಕ್ಯಾರೇ ಎನ್ನದೇ, ಹಿಜಬ್ ಧರಿಸಿಕೊಂಡೇ ಬರುತ್ತಿದ್ದಾರೆ. ಹೀಗಾಗಿ ಹಿಂದೂ ವಿದ್ಯಾರ್ಥಿಗಳು ಕೂಡ ಕೇಸರಿ ಶಾಲು ಧರಿಸಿದ್ದಾರೆ. ಅಷ್ಟೇ ಅಲ್ಲದೇ, ರೀಲ್ಸ್ ಕೂಡ ಮಾಡಿದ್ದಾರೆ.

ಈ ರೀಲ್ಸ್‌ನಲ್ಲಿ ಉಪನ್ಯಾಸಕಿ, ಕೇಸರಿ ಶಾಲು ಹಾಕಿದ್ದನ್ನು ಪ್ರಶ್ನಿಸಿದ್ದಾರೆ. ಅವರು ಹಿಜಬ್ ಧರಿಸಿ ಬಂದಿರುವುದಕ್ಕೆ ನೀವು ಕೇಸರಿ ಶಾಲು ಹಾಕಿಕೊಂಡು ಬಂದಿದ್ದೀರಿ ಅಷ್ಟೇ ಎಂದು ಉಪನ್ಯಾಸಕಿ ಹೇಳಿದ್ದಾರೆ. ಹೌದು, ಹೌದು, ಏನು ಇವಾಗ ಎಂದು ಉಪನ್ಯಾಸಕಿಗೆ ವಿದ್ಯಾರ್ಥಿಗಳು ಹೇಳಿದ್ದಾರೆ. ಇನ್ನು ಸದ್ಯ ಶುರುವಾಗಿರುವ ಈ ಧರ್ಮ ದಂಗಲ್ ಕಾಲೇಜು ಆಡಳಿತ ಮಂಡಳಿಗೆ ತಲೆ ನೋವಾಗಿ ಪರಿಣಮಿಸಿದೆ.

ನಟಿ ಕಾಜಲ್ ಅಗರ್ವಾಲ್ ಜೊತೆ ಅಸಭ್ಯ ವರ್ತನೆ ತೋರಿದ ವ್ಯಕ್ತಿ: ನೆಟ್ಟಿಗರ ಆಕ್ರೋಶ

ರಷ್ಯಾ- ಉಕ್ರೇನ್ ಯುದ್ಧ: ಹೈದರಾಬಾದ್ ಯುವಕ ಸಾವು

ನೀರಿನ ಸಮಸ್ಯೆ ಪರಿಹರಿಸಲು BWSSB ಚೇರ್ಮನ್‌ರನ್ನು ಭೇಟಿಯಾಗಿ ಸಲಹೆ ನೀಡಿದ ಸಂಸದ ತೇಜಸ್ವಿ ಸೂರ್ಯ

- Advertisement -

Latest Posts

Don't Miss