ಬೆಂಗಳೂರು: ಹಿಂದೂ ವಿವಾಹ ಪ್ರಮಾಣ ಪತ್ರವನ್ನು ಶೀಘ್ರದಲ್ಲೇ ಆನ್ ಲೈನ್ ನಲ್ಲೇ ವಿತರಿಸಲಾಗುವುದು ಎಂದು ನೊಂದಣಿ ಮತ್ತು ಮುದ್ರಾಂಕ ಇಲಾಖೆಯ ಅಧಿಕಾರಿ ಬಿ ಆರ್ ಮಮತಾ ತಿಳಿಸಿದ್ದಾರೆ. ಈ ಪ್ರಕ್ರಿಯೆ ನಡೆಯುತ್ತಿದೆ ಸದ್ಯದಲ್ಲೇ ಎಲ್ಲವನ್ನುಸಂಪೂರ್ಣವಾಗಿ ಪರೀಕ್ಷಿಸಿ ಸಿದ್ದಗೊಳಿಸಲಾಗುವುದು ಎಂದು ತಿಳಿಸಿದರು.
ಸದ್ಯ ಆಫ್ ಲೈನ್ ಮತ್ತು ಆನ್ಲೈನ್ ನಲ್ಲಿ ಲಭ್ಯವಿರುವ ಮೆಮೊರಂಡೆಮ್ ಆಫ್ ಮ್ಯಾರೇಜ್ ಫಾರಂ ಅನ್ನು 15 ರೂ ಶುಲ್ಕ ನೀಡಿ ಫಾರಂ ತುಂಬಬೇಕು. ಫಾರಂ ನಲ್ಲಿ ವದು ವರರ ಹೆಸರು, ವಯಸ್ಸು, ವಿಳಾಸ ,ವೈವಾಹಿಕ ಸ್ಥಿತಿ. ವಾಸಸ್ಥಳ ಹಾಗೂ ಮೂವರು ಸಾಕ್ಷಿಗಳ ಸಹಿಯ ಬಗ್ಗೆ ಮಾಹಿತಿ ನೀಡಬೇಕು.
ಮದುವೆ ಸಮಯದಲ್ಲಿ ತೆಗೆದ ಭಾವಚಿತ್ರ ಮತ್ತು ಲಗ್ನಪತ್ರಿಕೆ ಹಾಗೂ ಆಧಾರ್ ಕಾರ್ಡ ಲಗತ್ತಿಸಬೇಕು. ಆಧಾರ್ ಸಕ್ರಿಯಗೊಳಿಸಿದ ಸಹಿ ಸ್ವೀಕರಿಸುತ್ತದೆ. ಅಧಿಕಾರಿಗಳು ಎಲ್ಲವನ್ನು ಪರಿಶೀಲಿಸಿ ಒಂದು ದಿನದ ನಂತರ ನಿಮಗೆ ಪ್ರಮಾಣಪತ್ರ ಒದಗಿಸುತ್ತಾರೆ. ಈ ಪ್ರಮಾಣಪತ್ರವನ್ನು ಪಡೆಯಲು ನೊಂದಣಿ ಮತ್ತು ಮುದ್ರಾಂಕ ಪೋರ್ಟಲ್ ಗೆ ಲಾಗಿನ್ ಆಗಬೇಕು.
Hostel Hudugaru : ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾ ರಿಲೀಸ್…! ಅಪ್ಪುಗೆ ವಿಶೇಷ ನಮನ ಸಲ್ಲಿಸಿದ ಚಿತ್ರತಂಡ
Tomato: ಟೊಮಾಟೋ ಬೆಳೆದು ಕಣ್ಣೀರಿನಲ್ಲಿ ಕೈ ತೊಳೆಯುತ್ತಿರುವ ರೈತ ಮಹಿಳೆ




