Hubballi News: ಶ್ರೀಕಾಂತ್ ಪೂಜಾರಿ ಮನೆಗೆ ಭೇಟಿ ನೀಡಿದ ಬಳಿಕ ಮಾತನಾಡಿದ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಆತ ದುಡಿಯುವವನು. ಬಿಡುಗಡೆ ಆಗುತ್ತೋ, ಇಲ್ವೋ ಅಂತಾ ಕುಟುಂಬದವರು ಆತಂಕದಲ್ಲಿದ್ದಾರೆ. ಕಾಂಗ್ರೆಸ್ ಆತನನ್ನು ಅಮಾನವೀಯವಾಗಿ ಬಂಧನ ಮಾಡಿದ್ದನ್ನು ಶ್ರೀರಾಮ್ ಸೇನೆ ಖಂಡಿಸುತ್ತೆ. ಸಿಎಂ, ಡಿಸಿಎಂ ಸೇರಿ ಹಲವು ಸ್ಥಳೀಯ ನಾಯಕರು ದಾರಿ ತಪ್ಪಿಸ್ತಿದ್ದಾರೆ ಎಂದು ಮುತಾಲಿಕ್ ಕಿಡಿಕಾರಿದ್ದಾರೆ.
ಅಬ್ಬಯ್ಯ ನೋ ಅಬ್ದುಲ್ಲಾ ನೋ ಗೊತ್ತಿಲ್ಲ ಎಂದು ಪ್ರಸಾದ್ ಅಬ್ಬಯ್ಯ ಬಗ್ಗೆ ವ್ಯಂಗ್ಯವಾಡಿರುವ ಮುತಾಲಿಕ್, ಅವರು ದಾರಿ ತಪ್ಪಿಸುತ್ತಿದ್ದಾರೆ. ಎಲ್ಲಾ ಕೇಸ್ ಗಳಲ್ಲೂ ಆತ ನೀರ್ದೋಷಿಯಾಗಿ ಹೊರ ಬಂದಿದ್ದಾರೆ. 92 ನಂತರ 13 ಕೇಸ್ ಗಳು ಆಗಿವೆ. ಕೋರ್ಟ್ ನೀರ್ದೋಷಿ ಅಂತಾ ಬಿಡುಗಡೆ ಮಾಡಿದೆ. ಇಂತಹ ದಾರಿ ತಪ್ಪಿಸೋ ಕೆಲಸ ಮಾಡಬಾರದು. ನನ್ನ ಮೇಲೆ 110 ಕೇಸ್ ಇವೆ, ನನ್ನನ್ನು ಗಲ್ಲಿಗೆ ಏರಿಸಬೇಕಿತ್ತು. ಹಾಗಾದ್ರೆ ನಾನು ಕೂಡ ಗುಂಡಾ ನಾ? ಎಂದು ಮುತಾಲಿಕ್ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ವ್ಯವಸ್ಥಿತವಾಗಿ ಸುಳ್ಳು ಕೇಸ್ ಹಾಕಿ ಭ್ರಷ್ಟಾಚಾರ ಮಾಡ್ತಿದೆ. ಬೇರೆಯವರು ದುಡ್ಡು ಕೊಟ್ಟಿದ್ದಾರೆ ಅದಕ್ಕೆ ಬಂಧನ ಮಾಡಿಲ್ಲ. ಇವರಿಗೆ ದುಡ್ಡು ಕೊಡಲು ಆಗಿಲ್ಲ ಅದಕ್ಕೆ ಬಂಧನ ಮಾಡಿದ್ದಾರೆ. ದೊಂಬಿ ಕೇಸ್ ಅಂತಾ ಹಾಕಿದ್ದಾರೆ. 13 ಜನ ಎಲ್ಲರೂ ಒಂದೊಂದು ದಿಕ್ಕಿನಲ್ಲಿದ್ದಾರೆ. ಯಾರ್ಯಾರನ್ನೋ ಹೀಡಿಯೋದು ಈ ಕೇಸ್ ನಲ್ಲಿ ಫಿಟ್ ಮಾಡೋದು. ಯಾವ ಆಧಾರದ ಮೇಲೆ ದೊಂಬಿ ಕೇಸ್ ಅಂತಾರೆ. ಇಡೀ ದೇಶ ರಾಮಮಯ ಆಗಿದೆ ಅದಕ್ಕೆ ಹೊಟ್ಟೆ ಉರಿ ಆಗಿದೆ.ಲೋಕಸಭಾ ಚುನಾವಣೆ ಭಯ ಶುರುವಾಗಿದೆ. ಅವರ ಮೇಲೆ ರೌಡಿ ಶೀಟರ್ ಇಲ್ಲಾ ಮುಖ್ಯಮಂತ್ರಿಗಳೇ. ಆತ ಅಪರಾಧಿ ಅಲ್ಲಾ ಆರೋಪಿ. ಕೋರ್ಟ್ ಯಾವುದೇ ಕೇಸ್ ನಲ್ಲೂ ಅಪರಾಧಿ ಅಂದಿಲ್ಲ. ನಿಮ್ಮ ಟಾರ್ಗೆಟ್ ಹಿಂದುತ್ವ, ರಾಮ ಭಕ್ತರ ಮೇಲೆ ಎಂದು ಮುತಾಲಿಕ್ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ್ದಾರೆ.
ಬಿಕೆ ಹರಿಪ್ರಸಾದ್ ಗೋದ್ರಾ ಹೇಳಿಕೆಗೆ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಗೋದ್ರಾ ಘಟನೆಗೆ ಕಾರಣ ಮುಸ್ಲಿಮರು. ಕಾಂಗ್ರೆಸ್ ನವರೇ ಮುಸ್ಲಿಮರಿಗೆ ಕುಮ್ಮಕ್ಕು ಕೊಡ್ತಿದ್ದೀರಾ..? ಅಥವಾ ನೀವೇನಾದ್ರೂ ಪ್ಲ್ಯಾನ್ ಮಾಡ್ತಿದ್ದೀರಾ ಗಲಭೆ ಎಬ್ಬಿಸಲು..? ಅಧಿಕಾರಿಗಳು ಆಡಳಿತ ಸರ್ಕಾರದ ಮಾತು ಕೇಳ್ತಾರೆ. 31 ವರ್ಷದ ನಂತರ ಕೇಸ್ ರೀ ಓಪನ್ ಮಾಡೋಕೆ ಸಿದ್ದರಾಮಯ್ಯ ಅವರೇ ಹೇಳಿರ್ತಾರೆ. ನನಗೆ ಹಿಂದುತ್ವ ಆಗೋದಿಲ್ಲ ಅಂತಾ ಸಿದ್ದರಾಮಯ್ಯ ಅವರೇ ಅಂದಿದ್ದಾರೆ. ಸಿದ್ದರಾಮಯ್ಯ ಮಗ ಅಂತಾ ಯತಿಂದ್ರ ಅವರ ಹೆಸರು ಬಂದಿದೆ. ಅಪ್ಪನ ಲುಂಗಿ ಹಿಡಕೊಂಡು ಬಂದವರು ಇವರು ಪಾಕಿಸ್ತಾನ್, ಅಪಘಾನಿಸ್ಥಾನ ಹಾಗೇ ಆಗುತ್ತೆ ಅಂದ್ರೆ ಅಲ್ಲಿ ಆರ್ಥಿಕ ದಿವಾಳಿ ಆಗಿದೆ ಅಂತಾ. ಹಿಂದೂ ರಾಷ್ಟ್ರ ಮಾಡೇ ಮಾಡ್ತೀವಿ ಗಂಡಸ್ತನ ಇದ್ರೆ ತಡಿರಿ ಎಂದು ಮುತಾಲಿಕ್ ಕಾಂಗ್ರೆಸ್ಸಿಗರಿಗೆ ಸವಾಲ್ ಹಾಕಿದ್ದಾರೆ.
ಯಾವ ಕಾಂಗ್ರೆಸ್ ನ ತಾಕತ್ ಇದೆ ತಡಿರಿ ನೋಡೋಣ. ಈ ಕೇಸ್ ಗೆ ಸಂಬಂಧ ಪಟ್ಟಂತೆ ಪೂಜಾರಿ ಅವರನ್ನು ಜೈಲಿಗೆ ಹೋಗಿ ಭೇಟಿ ಕೊಡ್ತೀನಿ. ಕೋರ್ಟ್ ಪ್ರೊಸೆಸ್ ಇದೆ ಯಾವ ಸರ್ಕಾರನ್ನು ಹಿಂಪಡೆಯಲಾಗಲ್ಲ. ಅವರಿಗೆ ಜಾಮೀನು ಸಿಕ್ಕ ನಂತರ ರದ್ದು ಮಾಡಲು ಮನವಿ ಮಾಡ್ತೆವೆ ಎಂದು ಮುತಾಲಿಕ್ ಹೇಳಿದ್ದಾರೆ.
‘ಇಂಥವರನ್ನು ಬಂಧಿಸದೇ, ರಾಜಾರೋಷವಾಗಿ ತಿರುಗಾಡಲು ಬಿಟ್ಟರೆ ಶ್ರೀರಾಮಚಂದ್ರನೂ ಕ್ಷಮಿಸಲಾರ’
ಮಹಿಳೆಗೆ ನೆರವು: ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ ಸಚಿವ ಸಂತೋಷ್ ಲಾಡ್