Friday, April 18, 2025

Latest Posts

Temple : ವಿದೇಶದಲ್ಲಿ ಹಿಂದೂ ದೇವಾಲಯ ಉದ್ಘಾಟನೆಗೆ ಸಿದ್ದ

- Advertisement -

International News : ವಿದೇಶದಲ್ಲಿ ನಿರ್ಮಿಸಲಾಗುತ್ತಿರುವ ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕದ ನ್ಯೂ ಜೆರ್ಸಿಯ ಸ್ವಾಮಿ ನಾರಾಯಣ ದೇಗುಲ ಬಹುತೇಕ ಪೂರ್ಣಗೊಂಡಿದ್ದು, ಅಕ್ಟೋಬರ್ 8ರಂದು ಉದ್ಘಾಟನೆಗೆ ಸಿದ್ಧವಾಗಿದೆ.

ಅತಿ ದೊಡ್ಡ ಹಿಂದೂ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಅಮೆರಿಕದ ಅಮೆರಿಕಾದ ನ್ಯೂ ಜೆರ್ಸಿಯ ಸ್ವಾಮಿ ನಾರಾಯಣ ದೇಗುಲ ಬಹುತೇಕ ಪೂರ್ಣಗೊಂಡಿದ್ದು, ಅಕ್ಟೋಬರ್ 8 ರಂದು ಉದ್ಘಾಟನೆಯಾಗಲಿದೆ.
ನ್ಯೂ ಜೆರ್ಸಿಯ ರಾಬಿನ್ಸ್‌ವಿಲ್ಲೆಯಲ್ಲಿ ಬರೋಬ್ಬರಿ 183 ಎಕರೆ ಜಾಗದಲ್ಲಿರುವ ಸ್ವಾಮಿನಾರಾಯಣ ದೇವಸ್ಥಾನವನ್ನು 2011ರಿಂದ 2023ರವರೆಗಿನ 12 ವರ್ಷಗಳ ಅವಧಿಯಲ್ಲಿ ಸುಮಾರು 12,500 ಸ್ವಯಂಸೇವಕರು ನಿರ್ಮಿಸಿದ್ದಾರೆ.

ಇದನ್ನು ಪ್ರಾಚೀನ ಹಿಂದೂ ಧರ್ಮಗ್ರಂಥ ಪ್ರಕಾರ ಸ್ಥಾಪಿಸಲಾಗಿದ್ದು, ದೇವಸ್ಥಾನದಲ್ಲಿ ಪ್ರತಿಮೆಗಳು, ಭಾರತೀಯ ಸಂಗೀತ ವಾದ್ಯಗಳು, ಭಾರತೀಯ ಸಂಸ್ಕ್ರತಿ ಮತ್ತು ನೃತ್ಯ ಪ್ರಕಾರದ ಕೆತ್ತನೆಗಳು ಸೇರಿದಂತೆ ಸುಮಾರು 10,000 ಕೆತ್ತನೆಗಳು ಅಥವಾ ಪ್ರತಿಮೆಗಳನ್ನು ಒಳಗೊಂಡಿದೆ.

ಅಂಕೋರ್‌ವಾಟ್‌ ದೇಗುಲ 500 ಮೀ. ಪ್ರದೇಶದಲ್ಲಿದೆ. ಸ್ವಾಮಿನಾರಾಯಣ ದೇವಾಲಯವನ್ನು ಸುಣ್ಣದ ಕಲ್ಲು, ಗುಲಾಬಿ ಮರಳುಗಲ್ಲು, ಅಮೃತ ಶಿಲೆ ಮತ್ತು ಗ್ರಾನೈಟ್‌ಗಳಿಂದ ನಿರ್ಮಿಸಲಾಗಿದೆ.

- Advertisement -

Latest Posts

Don't Miss