ಹಿರಿಯೂರು, ನವೆಂಬರ್ 21, ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಗಾಗಿ ಜನಪ್ರಿಯ ಕಾಂಗ್ರೆಸ್ ಮುಖಂಡರಾದ ಶ್ರೀ ಬಿ ಸೋಮಶೇಖರ್ ಅವರು ಇಂದು ಅರ್ಜಿ ಸಲ್ಲಿಸಿದರು. ಪಕ್ಷದ ಹಲವು ಮುಖಂಡರ ಜೊತೆಗೆ ಕಾಂಗ್ರೆಸ್ ಕಚೇರಿಯಲ್ಲಿ ಸೋಮಶೇಖರ್ ಅವರು ಉಮೇದುವಾರಿಕೆಗೆ ಅರ್ಜಿ ಸಲ್ಲಿಕೆ ಮಾಡಿದರು.
ಈ ರೀತಿ ಮಾಡುವುದರಿಂದ ನಿಮ್ಮ ನಾಶ ನೀವೇ ಮಾಡಿಕೊಳ್ಳುತ್ತೀರಿ..
ಹಿರಿಯೂರು ಕ್ಷೇತ್ರದಾದ್ಯಂತ ನಿರಂತರವಾಗಿ ಪ್ರವಾಸ ಕೈಗೊಂಡಿರುವ ಸೋಮಶೇಖರ್ ಅವರು ಜನರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಿದ್ದಾರೆ. ಕ್ಷೇತ್ರದ ಮೂಲೆ ಮೂಲೆಗೆ ತೆರಳಿ ಜನರ ನಾಡಿ ಮಿಡಿತ ಅರಿಯುತ್ತಿದ್ದಾರೆ. ಜನರ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡಿರುವ ಸೋಮಶೇಖರ್ ಅವರಿಗೆ ಕ್ಷೇತ್ರದಾದ್ಯಂತ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜನರೇ ಮುಂದೆ ಬಂದು ಅಹವಾಲು ತಿಳಿಸುತ್ತಿದ್ದಾರೆ.
ಹಿರಿಯೂರು ಕ್ಷೇತ್ರದಲ್ಲಿ ತೀವ್ರ ಪೈಪೋಟಿ ಇದೆ. ಆದರೆ ಈಗಾಗಲೇ ಆಡಳಿತ ವಿರೋಧಿ ಅಲೆ ಇರುವುದು ಸ್ಪಷ್ಟವಾಗಿದೆ. ಆದರೆ ಸೋಮಶೇಖರ್ ಅವರ ಪರ ಜನಬೆಂಬಲ ಇರುವುದು ಸಹ ಸ್ಪಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಸೋಮಶೇಖರ್ ಅವರ ಪ್ರವೇಶದಿಂದ ಒಬ್ಬ ಸಂಭಾವಿತ ನಾಯಕ ಸಿಕ್ಕ ಖುಷಿಯಲ್ಲಿ ಕ್ಷೆತ್ರದ ಜನರು ಇದ್ದಾರೆ.
ಬದಲಿ ವ್ಯವಸ್ಥೆ ಮಾಡದೇ ಏಕಾಏಕಿ ಹಾಲುವಾಗಿಲು ಸೇತುವೆ ಡೆಮಾಲಿಶ್- ಗ್ರಾಮಸ್ಥರ ಹಿಡಿ ಶಾಪ..
ಅಲ್ಲದೆ ಸೋಮಶೇಖರ್ ಅವರು ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಕೆಲಸ ಮಾಡಿದವರು. ತಳಮಟ್ಟದಿಂದ ಜನರ ಕಷ್ಟ ಅರಿತವರು. ಇಂತಹವರು ನಮ್ಮ ಪ್ರತಿನಿಧಿ ಆಗಬೇಕು ಎಂಬುದು ಜನರ ಬಯಕೆಯೂ ಆಗಿದೆ. ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ, ಜನರ ಕಷ್ಟವನ್ನು ಹತ್ತಿರದಿಂದ ಬಲ್ಲ ಸೋಮಶೇಖರ್ ಅವರು ನಮ್ಮೆಲ್ಲರ ನಾಯಕರಾಗಬೇಕು ಎಂದು ಹಲವರು ಬಯಸಿದ್ದಾರೆ.
ಇನ್ನು ಮುಂದೆಯೂ ಕ್ಷೇತ್ರದಾದ್ಯಂತ ನಿರಂತರ ಪ್ರವಾಸ ಮಾಡಿ ಕಾರ್ಯಕ್ರಮಗಳನ್ನು ಆಯೋಜಿಸಿ ಜನರಿಗೆ ಹತ್ತಿರವಾಗುವ ಉತ್ಸಾಹದಲ್ಲಿ ಸೋಮಶೇಖರ್ ಅವರಿದ್ದಾರೆ.

