ಅಪ್ಪ-ಅಮ್ಮ ಇಲ್ಲದ ಹುಡುಗಿಯರೇ ಈತನ ಟಾರ್ಗೆಟ್ – ಬುದ್ದಿವಂತ ಸಿನಿಮಾ ಸ್ಟೈಲ್‌ನಲ್ಲಿ ವಂಚನೆ!

ಬುಟ್ಟಿಗೆ ಬೀಳಿಸಿಕೊಂಡು ಮದುವೆ ನೆಪದಲ್ಲಿ ಯುವಕ ವಂಚನೆ ಮಾಡಿದ್ದಾರೆ. ಬುದ್ದಿವಂತ ಸಿನಿಮಾದ ಹೀರೋ, ಉಪೇಂದ್ರ ಸ್ಟೈಲ್‌ನಲ್ಲಿ ಯುವತಿಯರನ್ನ ವಂಚಿಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದೆ. 31 ವರ್ಷದ ಮಿಥುನ್ ಕುಮಾರ್, ತಂದೆ-ತಾಯಿ ಇಲ್ಲದ ಅಮಾಯಕ ಯುವತಿಯರನ್ನ ಟಾರ್ಗೆಟ್ ಮಾಡಿ ಮದುವೆಯಾಗಿ ವಂಚಿಸುತ್ತಿದ್ದ. ನಂತರ ಆರು ತಿಂಗಳ ಸಂಸಾರ ಮಾಡಿ, ದುಡ್ಡು ಮತ್ತು ಒಡವೆ ದೋಚಿ ಪರಾರಿಯಾಗುತ್ತಿದ್ದನು.

ಬೆಂಗಳೂರು ನಗರದ ಪಟ್ಟೇಗಾರಪಾಳ್ಯ ನಿವಾಸಿ ಮಿಥುನ್ ಕುಮಾರ್, ಹುಡುಗಿಯರನ್ನ ಪರಿಚಯ ಮಾಡಿಕೊಂಡು ಪ್ರೀತಿಯ ನಾಟಕ ಆಡುತ್ತಿದ್ದ. ಮೊದಲ ಬಾರಿ ಮದುವೆಯಾಗಿ, ಕೆಲ ತಿಂಗಳು ಚೆನ್ನಾಗಿ ಸಂಸಾರ ಮಾಡಿದ ನಂತರ, ನಂತರ ದುಡ್ಡು, ಒಡವೆ ದೋಚಿಕೊಂಡು ಪರಾರಿಯಾಗುತ್ತಿದ್ದ. ಕಳೆದ ವರ್ಷದ ಪ್ರಕಾರ, ಇವನಿಗೆ ನಡೆದ ಮುಂಚಿನ ಪ್ರಕರಣಕ್ಕೂ ಸಂಬಂಧಿತವಾಗಿ ಆ ಮೂಲಕ ಮೋಸ ಬಿದ್ದಿದ್ದ ಯುವತಿ, ಆತನು ದುಡ್ಡು ಮತ್ತು ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದ ಹಿನ್ನಲೆಯಲ್ಲಿ ದೂರು ನೀಡಿದ್ದಾರೆ.

6 ವರ್ಷಗಳ ಹಿಂದೆ ಯುವತಿಯೊಬ್ಬಳಿಗೆ ಈ ಮಿಥುನ್ ಕುಮಾರ್ ಪರಿಚಯವಾಗಿದ್ದು, ಒಂದು ವರ್ಷದ ಹಿಂದೆ ಆ ಯುವತಿಯನ್ನೇ ವಿವಾಹ ಆಗಿದ್ದಾನೆ. ನಾಲ್ಕು ತಿಂಗಳು ಚೆನ್ನಾಗಿ ಸಂಸಾರ ಮಾಡಿದ್ದಾನೆ. ನಂತರ ದುಡ್ಡು, ಒಡವೆ ದೋಚಿಕೊಂಡು ಪರಾರಿಯಾಗಿದ್ದ. ಈ ಸಂಬಂಧ ಮೋಸ ಹೋದ ಯುವತಿ ನೀಡಿದ್ದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ವಂಚಕ ಮಿಥುನ್​ ನನ್ನು ಬಂಧಿಸಿದ್ದಾರೆ. ತಂದೆ ತಾಯಿ ಇಲ್ಲದ ಅಮಾಯಕ ಯುವತಿಯರನ್ನು ಟಾರ್ಗೆಟ್ ಮಾಡಿ ವಂಚಿಸುವ ಮಿಥುನ್ ಕುಮಾರ್ ನ ಕಾಯಕವಾಗಿದೆ.

ಈ ಹಿಂದೆಯೂ ಇಂಥದ್ದೇ ಕೇಸ್ ನಲ್ಲಿ ಜೈಲಿಗೆ ಹೋಗಿ ಬಂದಿದ್ದಾನೆ. ಈ ಹಿಂದೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಮಿಥುನ್ ಕುಮಾರ್ ವಿರುದ್ಧ ಅತ್ಯಾಚಾರ ಕೇಸ್ ದಾಖಲಾಗಿತ್ತು. ಆಗ 6 ತಿಂಗಳು ಜೈಲು ಶಿಕ್ಷೆ ಅನುಭವಿಸಿ, ಜಾಮೀನಿನ ಮೇಲೆ ಹೊರಗೆ ಬಂದಿದ್ದ. ಆದರೂ ಬುದ್ಧಿ ಕಲಿಯದ ಮಿಥುನ್, ಮತ್ತೆ ಬೇರೊಬ್ಬ ಯುವತಿಯನ್ನು ನಂಬಿಸಿ ಮದುವೆಯಾಗಿ ಕೈ ಕೊಟ್ಟು ಇದೀಗ ಮತ್ತೆ ಜೈಲು ಪಾಲಾಗಿದ್ದಾನೆ.

About The Author