- Advertisement -
Dharwad News: ಧಾರವಾಡ: ಯುವಕನೋರ್ವ ಬೈಕ್ ಅಪಘಾತ ಮಾಡಿ ಪರಾರಿಯಾದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಟೋಲ್ ನಾಕಾದ ಬಳಿ ಈ ಘಟನೆ ನಡೆದಿದ್ದು, ಈ ದೃಶ್ಯವನ್ನು ಓರ್ವ ವ್ಯಕ್ತಿ ರೆಕಾರ್ಡ್ ಕೂಡ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
ಬೈಕ್‌ಗೆ ಗುದ್ದಿ ಪರಾರಿಯಾದ ಯುವಕ, ಕೆಳಗೆ ಬಿದ್ದಿರುವ ವ್ಯಕ್ತಿಯನ್ನು ತಿರುಗಿ ನೋಡದೇ ಪರಾರಿಯಾಗಿದ್ದಾನೆ. ಸ್ಥಳದಲ್ಲೇ ಇದ್ದ ಸಾರ್ವಜನಿಕರು, ಗಾಯಾಳು ಮಹಿಳೆ ಮತ್ತು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿ, ಮಾನವೀಯತೆ ಮೆರೆದಿದ್ದಾರೆ. ಸಂಚಾರಿ ಪೊಲೀಸರು ಅಪಘಾತ ಮಾಡಿ ಎಸ್ಕೇಪ್ ಆಗಿರುವವನ ಹುಡುಕಾಟದಲ್ಲಿದ್ದಾರೆ.
ನಾರಾಯಣಗೌಡ ಸೇರಿ 29 ಜನ ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನ
- Advertisement -