Tuesday, March 11, 2025

Latest Posts

Holi Festival: ಹೋಲಿಕಾ ದಹನ ಮಾಡುವಾಗ ಈ ವಸ್ತುಗಳನ್ನು ಹಾಕಿ, ಹಲವು ಸಮಸ್ಯೆಯಿಂದ ಪಾರಾಗಿ

- Advertisement -

Holi Festival: ಇನ್ನು ಕೆಲ ದಿನಗಳಲ್ಲೇ ಹೋಳಿ ಹಬ್ಬ ಬರುತ್ತಿದೆ. ಹಲವೆಡೆ ಹೋಳಿ ಹಬ್ಬದ ಮುನ್ನಾ ದಿನ ಹೋಲಿಕಾ ದಹನವೆಂದು ಮಾಡುತ್ತಾರೆ. ಕಟ್ಟಿಗೆಗಳನ್ನು ಸಂಗ್ರಹಿಸಿ, ಅದನ್ನು ಸುಡುತ್ತಾರೆ. ಹೀಗೆ ಸುಡುವಾಗ ಆ ಬೆಂಕಿಗೆ ಹಲವು ವಸ್ತುಗಳನ್ನು ಹಾಕಲಾಗುತ್ತದೆ. ಹೀಗೆ ಕೆಲವು ವಸ್ತುಗಳನ್ನು ಹಾಕಿದ್ರೆ, ಹಲವು ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಹಾಗಾದ್ರೆ ಯಾವ ವಸ್ತುಗಳನ್ನು ನಾವು ಹೋಲಿಕಾ ದಹನ ಮಾಡುವಾಗ ಹಾಕಬೇಕು ಎಂದು ತಿಳಿಯೋಣ ಬನ್ನಿ.

ಹೋಲಿಕಾ ದಹನ ಮಾಡೋದ್ಯಾಕೆ ಅಂದ್ರೆ, ಇದರಿಂದ ನಮ್ಮ ಮನಸ್ಸಿನಲ್ಲಿರುವ ಕೆಟ್ಟ ಯೋಚನೆ, ದ್ವೇಷ ಸುಟ್ಟು ಹೋಗಲಿ ಎಂದು ಹೋಲಿಕಾಾ ದಹನ ಮಾಡಲಾಗುತ್ತದೆ. ಈ ಹೋಲಿಕಾ ದಹನದಲ್ಲಿ ನಾವು ಕೆಲ ವಸ್ತುವನ್ನು ಅಗ್ನಿಗೆ ಹಾಕಬೇಕು.

ಮೊದಲನೇಯದಾಗಿ ಚಂದನದ ಕಟ್ಟಿಗೆ. ಒಂದು ಸಣ್ಣ ತುಂಡು ಚಂದನದ ಕಟ್ಟಿಗೆಯನ್ನು ನೀವು ಹೋಲಿಕಾ ದಹನದ ಅಗ್ನಿಗೆ ಹಾಕಿದರೆ, ನಿಮ್ಮ ಮನೆಯಲ್ಲಿ ನಡೆಯುತ್ತಿರುವ ಕಲಹಗಳು ನಿಲ್ಲುತ್ತದೆ. ಮನೆಯಲ್ಲಿ ಶಾಂತಿಯುತವಾದ ವಾತಾವರಣವಿರುತ್ತದೆ. ಸುಖ ಸಮೃದ್ಧಿ ನಿಮ್ಮ ಪಾಲಾಗುತ್ತದೆ.

ಎರಡನೇಯದಾಗಿ ಸಗಣಿ ಬೆರಣಿ ಹಾಕಿದರೆ, ನಿಮ್ಮ ಮನೆಯಲ್ಲಿ ಯಾವುದಾದರೂ ಋಣಾತ್ಮಕ ಶಕ್ತಿ ಮಾಯವಾಗುತ್ತದೆ. ಕೆಲವರ ಮನೆಯಲ್ಲಿ ಎಷ್ಟೇ ಕ್ಲೀನ್ ಮಾಡಿದರೂ, ಪದೇ ಪದೇ ಧೂಳಾಗುತ್ತದೆ. ಜೇಡ ಬಲೆ ಕಟ್ಟುತ್ತದೆ. ಸಣ್ಣ ವಿಷಯಕ್ಕೆ ಜಗಳವಾಗುತ್ತದೆ. ಸರಿಯಾಗಿ ಕೆಲಸ ಸಿಗುವುದಿಲ್ಲ. ಕೆಲಸ ಸಿಕ್ಕರೂ, ಸಂಬಳ ಸಿಕ್ಕರೂ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ. ಇದೆಲ್ಲ ಮನೆಯಲ್ಲಿ ಋಣಾತ್ಮಕ ಶಕ್ತಿ ಇದೆ ಎನ್ನುವುದಕ್ಕೆ ಸಾಕ್ಷಿ. ಹಾಗಾಗಿ ಮನೆಯಲ್ಲಿ ಹೋಮ, ಹವನ ಮಾಡಿಸಿ, ಅಥವಾ ಅಗ್ನಿಗೆ ಬೆರಣಿ ಹಾಕಿ.

ಮೂರನೇಯದಾಗಿ ನಿಮ್ಮ ಮನೆಯಲ್ಲಿ ಯಾರಾದರೂ ಸಣ್ಣ ವಯಸ್ಸಿಗೆ ಅನಾರೋಗ್ಯಕ್ಕೀಡಾದವರಾಗಿದ್ದರೆ, ಅಗ್ನಿಗೆ ವೀಳ್ಯದೆಲೆ, ಕರ್ಪೂರ, ಲವಂಗವನ್ನು ಹಾಕಬೇಕು. ಇದರಿಂದ ಮನೆಯಲ್ಲಿ ಯಾರಾದರೂ ಅನಾರೋಗ್ಯಕ್ಕೀಡಾಗಿದ್ದರೆ, ಅವರು ಬೇಗ ಆರೋಗ್ಯವಂತರಾಗುತ್ತಾರೆ.

ನಾಲ್ಕನೇಯದಾಗಿ ಅಗ್ನಿಯಲ್ಲಿ ಹವನ ಸಾಮಗ್ರಿಯನ್ನು ಹಾಕಿದರೆ, ನಿಮ್ಮ ವೈವಾಹಿಕ ಜೀವನ ಸುಖಮಯವಾಗಿರುತ್ತದೆ. ವಿವಾಹವಾಗದಿದ್ದಲ್ಲಿ, ವಿವಾಹವೂ ಆಗುತ್ತದೆ. ಐದನೇಯದಾಗಿ ಅಗ್ನಿಯಲ್ಲಿ ಕಪ್ಪು ಎಳ್ಳು ಹಾಕುವುದರಿಂದ ನಿಮ್ಮ ಮನೆಗೆ ತಾಕಿದ ಎಲ್ಲ ರೀತಿಯ ದೃಷ್ಟಿ ಮಾಯವಾಗುತ್ತದೆ. ಕೊನೆಯದಾಗಿ ಆರ್ಥಿಕ ಸಮಸ್ಯೆ ಸರಿಯಾಗಲು, ಅಗ್ನಿಯಲ್ಲಿ ತೆಂಗಿನಕಾಯಿಯನ್ನು ಹಾಕಿ.

- Advertisement -

Latest Posts

Don't Miss