ಅತೀಯಾದರೆ ಅಮೃತವೂ ವಿಷ ಎಂಬ ಮಾತಿಗೆ ಇಲ್ಲೋರ್ವ ನಟಿ ಸಾಕ್ಷಿಯಾಗಿದ್ದಾಳೆ. ತನ್ನ ಫಿಗರ್ ಸುಂದರವಾಗಿ ಕಾಣಬೇಕೆಂಬ ಕಾರಣಕ್ಕೆ, ಈ ನಟಿ, ಪದೇ ಪದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು, ಸಾವನ್ನಪ್ಪಿದ್ದಾಳೆ.
ಹಾಲಿವುಡ್ ಮಾದಕ ನಟಿ, ಮಾಡೆಲ್ ಆಗಿರುವ ಕ್ರಿಸ್ಟೀನಾ ಆಸ್ಟೇನ್(34) ಸಾವನ್ನಪ್ಪಿದ್ದಾಳೆ. ಬೇರೆ ಮಾಡೆಲ್‌ಗಳ ರೀತಿ, ತನ್ನ ಎದೆಯ ಭಾಗ ಮತ್ತು ನಿತಂಬಕ್ಕೆ ಪದೇ ಪದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದೇ, ಈ ದುರಂತ ಅಂತ್ಯಕ್ಕೆ ಕಾರಣವಾಗಿದೆ.
ಹಾಲಿವುಡ್ ಮಾಡೆಲ್ ಆಗಿರುವ ಕಿಮ್ ಕಾರ್ಡ್‌ಶಿಯಾನ್ ಜೊತೆ, ಕ್ರಿಸ್ಟೀನಾ ಹಲವು ಬಾರಿ ವೇದಿಕೆ ಹಂಚಿಕೊಂಡಿದ್ದರು. ಕಿಮ್ ಫಿಗರ್ ಮಾದಕವಾಗಿದ್ದದ್ದನ್ನ ನೋಡಿ, ತನ್ನ ದೇಹದ ಆಕಾರವೂ ಅವರಂತೆ ಆಗಬೇಕು ಎಂದು, ಕ್ರಿಸ್ಟೀನಾ ಈ ರೀತಿ ಸರ್ಜರಿ ಮೊರೆ ಹೋಗಿದ್ದಾಳೆ. ಯಾಕಂದ್ರೆ ಹಲವರು ಈಕೆಯನ್ನ ಜೂನಿಯರ್ ಕಿಮ್ ಎಂದು ಕರೆಯುತ್ತಿದ್ದರು. ಇದೇ ಹುಚ್ಚಿಗೆ ಕ್ರಿಸ್ಟೀನಾ ಬಲಿಯಾಗಿದ್ದಾಳೆ.
ಅಷ್ಟೇ ಅಲ್ಲದೇ, ಈಕೆ ತನ್ನಲ್ಲಿರುವ ದುಡ್ಡನ್ನೆಲ್ಲ ಸರ್ಜರಿಗಾಗಿಯೇ ಬಳಸಿದ್ದು, ಈ ಮಾದಕ ಮೈಮಾಟದಿಂದಲೇ ಕೋಟಿ ಕೋಟಿ ಸಂಪಾದಿಸಬೇಕೆಂಬ ಬಯಕೆ ಹೊಂದಿದ್ದಳು. ಆದ್ರೆ ಈ ಸರ್ಜರಿಯೇ ಆಕೆಯ ಜೀವ ತೆಗೆದಿದ್ದು, ಆಕೆಯ ಅಂತ್ಯಕ್ರಿಯೆ ಮಾಡಲು ಸಹ ದುಡ್ಡಿಲ್ಲದ ಪರಿಸ್ಥಿತಿ ಬಂದಿದೆ. ಹಾಗಾಗಿ ಸೋಶಿಯಲ್ ಮೀಡಿಯಾ ಮೂಲಕ ಫಂಡ ಸಂಗ್ರಹಿಸಲು ಆಕೆಯ ಕುಟುಂಬಸ್ಥರು ಮುಂದಾಗಿದ್ದಾರೆಂದು ಹೇಳಲಾಗಿದೆ.
ನಟಿ ಅನುಷ್ಕಾ ಶೆಟ್ಟಿಗೆ ಫ್ರೀ ಬ್ಲೂಟಿಕ್ ಮಾರ್ಕ್ ಕೊಟ್ಟ ಎಲಾನ್ ಮಸ್ಕ್..
ಪಾದ್ರಿಯ ಜಮೀನಿನಲ್ಲಿ ಪತ್ತೆಯಾಯ್ತು 47 ಶವ, ಇದರ ಹಿಂದಿದೆ ಭಯಂಕರ ಕಾರಣ..