Thursday, July 31, 2025

Latest Posts

ಅತೃಪ್ತ ಆತ್ಮಗಳ ಶಾಂತಿ ಮಾಡಲು ಹೋಮ ಹವನ ಮಾಡಲಾಗುವುದು: ಲಕ್ಷ್ಮಣ್ ಸವದಿ

- Advertisement -

Belagavi News: ಸಿಎಂ ಸಿದ್ದರಾಮಯ್ಯ ಬಜೆಟ್ನಲ್ಲಿ ಅಥಣಿ ಕ್ಷೇತ್ರಕ್ಕೆ ನೀರಾವರಿ ಯೋಜನೆಗೆ ೧೪೮೦ ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದ್ದರಿಂದ, ಇದೆ ಆರನೇ ತಾರೀಕು ಸಿಎಂ, ಹಾಗೂ ಡಿಸಿಎಂ ಡಿಕೆ ಶಿವಕುಮಾರ್, ಹಲವು ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಈ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಅಥಣಿ ಶಾಸಕ ಲಕ್ಷ್ಮಣ್ ಸವದಿ ಮಾದ್ಯಮಗಳಿಗೆ ಮಾಹಿತಿ ನೀಡಿದರು.

ಅವರು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿ ಗ್ರಾಮದಲ್ಲಿ ಕಾರ್ಯಕ್ರಮ ವೇದಿಕೆಯ ಸಿದ್ದತೆ ಪರಿಶೀಲನೆ, ನಂತರ ಮಾದ್ಯಮಗಳ ಜೊತೆ ಮಾತನ್ನಾಡುತ್ತ, ತಾಲೂಕಿನ ಬಹುದಿನಗಳ ಬೇಡಿಕೆಯಾದ ಅಮ್ಮಜೇಶ್ವರಿ ಏತ ನೀರಾವರಿ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಶಂಕುಸ್ಥಾಪನೆ ದಿನದಂದು ಹೋಮ ಹವನ ನೆರವೇರಿಸಿ ಅತೃಪ್ತ ಆತ್ಮಗಳು ಯೋಜನೆಗಳಿಗೆ ಯಾವುದೇ ತೊಂದರೆ ಆಗದಂತೆ ನಿರ್ವಿಘ್ನವಾಗಿ ಕಾಮಗಾರಿ ಮುಗಿಯಲೆಂದು ಪೂಜೆ ಸಲ್ಲಿಸಲಾಗುವುದು ಎಂದು ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್ ನೀಡಿದರು.

ಭಾರತೀಯರೆಲ್ಲರೂ ನನ್ನ ಪರಿವಾರದವರೇ: ಲಾಲೂ ಟೀಕೆಗೆ ಮೋದಿ ತಿರುಗೇಟು

ಪಾಕಿಸ್ತಾನದಲ್ಲಿ ಸುರಿದ ಧಾರಾಕಾರ ಮಳೆಗೆ 37 ಮಂದಿ ಬಲಿ

ಇಸ್ರೇಲ್‌ನಲ್ಲಿ ನಡೆದ ದಾಳಿಯಲ್ಲಿ ಭಾರತೀಯ ವ್ಯಕ್ತಿ ಸಾವು

- Advertisement -

Latest Posts

Don't Miss