ಬಾದಾಮಿ ಹಾಲು ಕುಡಿಯುತ್ತ ಹಳೆಯ ನೆನಪು ಮೆಲುಕು ಹಾಕಿದ ಗೃಹಸಚಿವ ಜಿ.ಪರಮೇಶ್ವರ್: Video

Tumakuru News: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ತುಮಕೂರಿನಿಂದ ಕಾರ್ಯಕ್ರಮ ಮುಗಿಸಿ, ಬೆಂಗಳೂರಿಗೆ ಬರುತ್ತಿದ್ದಾಗ, ಚಹಾ ಅಂಗಡಿಯಲ್ಲಿ ಸ್ವಲ್ಪ ಸಮಯ ಕಳೆದರು.

ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ಉಪಮುಖ್ಯಮಂತ್ರಿಯವರು, ನಿನ್ನೆ ಕೊರಟಗೆರೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಹಾಗೂ ನನ್ನ ಜನತೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಅವರ ಪ್ರೀತಿ–ವಿಶ್ವಾಸಕ್ಕೆ ಕೃತಜ್ಞತೆ ಸಲ್ಲಿಸಿದ ಬಳಿಕ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದೆ. ಮಾರ್ಗಮಧ್ಯೆ ಪುಟ್ಟ ಹಳ್ಳಿಯೊಂದರ ಚಹಾ ಅಂಗಡಿಯಲ್ಲಿ ಬಾದಾಮಿ ಹಾಲು ಸೇವಿಸುತ್ತಿದ್ದಾಗ, ಅನಿರೀಕ್ಷಿತವಾಗಿ ಹಳೆಯ ನೆನಪುಗಳು ಮನಸ್ಸನ್ನು ಆವರಿಸಿದವು.

ಮಧುಗಿರಿ ಕ್ಷೇತ್ರದ ಶಾಸಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಈ ಭಾಗದ ಜನರೊಂದಿಗೆ ಬೆಸೆದುಕೊಂಡಿದ್ದ ಆತ್ಮೀಯ ಸಂಬಂಧ, ಹಳ್ಳಿಯೊಂದರ ಅಭಿವೃದ್ಧಿಗಾಗಿ ಕೈಗೊಂಡ ಅನೇಕ ಯೋಜನೆಗಳು, ರಸ್ತೆ, ಕುಡಿಯುವ ನೀರು, ಶಿಕ್ಷಣ ಹಾಗೂ ಮೂಲಸೌಕರ್ಯಗಳ ಅಭಿವೃದ್ಧಿಗೆ ಮಾಡಿದ ಪ್ರಯತ್ನಗಳು ಒಂದೊಂದಾಗಿ ಕಣ್ಮುಂದೆ ಬಂದವು.

ಇಂದು ಆ ಹಳ್ಳಿಯಲ್ಲಿ ಕಂಡುಬರುವ ಬದಲಾವಣೆ ಮತ್ತು ಅಭಿವೃದ್ಧಿ, ಜನಸೇವೆಯಲ್ಲಿ ಕಳೆದ ಆ ದಿನಗಳು ಕೇವಲ ರಾಜಕೀಯ ಪಯಣದ ಭಾಗವಲ್ಲ, ನನ್ನ ಜೀವನದ ಅತ್ಯಂತ ಮೌಲ್ಯಯುತ ಅಧ್ಯಾಯಗಳಾಗಿ ಉಳಿದಿವೆ. ಜನರ ಪ್ರೀತಿ, ವಿಶ್ವಾಸ ಮತ್ತು ಸೇವೆಯ ಅವಕಾಶ, ನನಗೆ ರಾಜಕೀಯ ಜನ್ಮ ನೀಡಿದ ಆ ನೆಲದೊಂದಿಗಿನ ನಂಟು ಎಂದಿಗೂ ಮರೆಯಾಗುವುದಿಲ್ಲ. ಜನಸೇವೆಯ ಪಯಣವೇ ನನ್ನ ಬದುಕಿನ ಅತ್ಯಂತ ದೊಡ್ಡ ಶಕ್ತಿ ಎಂಬ ಭಾವನೆ ಮತ್ತೊಮ್ಮೆ ಮೂಡಿತು ಎಂದು ಜಿ.ಪರಮೇಶ್ವರ್ ಅವರು, ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

About The Author