Sandalwood: ನಟರಾದ ವಿಜಯ್ ರಾಘವೇಂದ್ರ, ಶ್ರೀ ಮುರುಳಿ ತಾಯಿ ಜಯಮ್ಮ ಚಿನ್ನೇಗೌಡ ನಿಧನ

Sandalwood: ನಟರಾದ ಶ್ರೀ ಮುರುಳಿ ಮತ್ತು ವಿಜಯರಾಘವೇಂದ್ರ ಅವರ ತಾಯಿ ಜಯಮ್ಮ ಚಿನ್ನೇಗೌಡ ಅವರು ನಿಧನರಾಗಿದ್ದಾರೆ. 70 ವರ್ಷದ ಜಯಮ್ಮ ಅವರು ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಿಸದೇ ಅವರು ನಿಧನರಾಗಿದ್ದಾರೆ. ಜಯಮ್ಮ ಅವರ ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.

ಅಶ್ವಿನಿ ಪುನೀತ್ ರಾಜ್‌ಕುಮಾರ್ ಸೇರಿ ಹಲವು ಸ್ಯಾಂಡಲ್‌ವುಡ್ ಗಣ್ಯರು ಆಗಮಿಸಿ, ಜಯಮ್ಮನವರ ಅಂತಿಮ ದರ್ಶನ ಪಡೆದಿದ್ದಾರೆ.

 

About The Author