Saturday, November 23, 2024

Latest Posts

Dharawad : ಎಸ್ ಪಿ ಕಛೇರಿಯಲ್ಲಿ ಗೃಹ ಸಚಿವ ಡಾ ಜಿ ಪರಮೇಶ್ವರ್ ಸುದ್ದಿಗೋಷ್ಠಿ:

- Advertisement -

ಧಾರವಾಡ :ಇಂದು ಧಾರವಾಡದ ಎಸ್ ಪಿ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ಹೇಳಿಕೆ ನೀಡಿದರು

ಡ್ರಗ್ಸ್ ವಿರುದ್ಧ ರಾಜ್ಯಾದ್ಯಂತ ಸಮರ ಸಾರಿದ್ದೇವೆ.  ಇದನ್ನು ಕಟ್ಟುನಿಟ್ಟಾಗಿ ಹತ್ತಿಕ್ಕಲು ಕ್ರಮ ಕೈಗೊಳ್ಳಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಕಡಿಮೆ ಸಂಖ್ಯೆಯಲ್ಲಿ ಡ್ರಗ್ಸ್ ಹಾವಳಿ ಇದ್ದು, 6 ತಿಂಗಳಲ್ಲಿ ಇದನ್ನು ಶೂನ್ಯ ಮಾಡಲು ಅಧಿಕಾರಿಗಳಿಗೆ ಸೂಚನೆ ಕೊಟ್ಟಿರುವೆ.  ಕ್ರಿಮಿನಲ್ ಪ್ರಕರಣದ ಬಗ್ಗೆ ಪೊಲೀಸರು ಮಾಹಿತಿ ಕೊಟ್ಟಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಬೇರೆ ಜಿಲ್ಲೆಗಳಿಗಿಂತ ಕ್ರಿಮಿನಲ್ ಪ್ರಕರಣ ಸಂಖ್ಯೆ ಕಡಿಮೆ ಇದೆ.

ಸೈಬರ್ ಕ್ರೈಂನಲ್ಲಿ ಅವಹೇಳನಕಾರಿಯಾಗಿ ಫೋಸ್ಟ್ ಮಾಡುವ ಹಿನ್ನೆಲೆ ಅಂತವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ನೀಡಿದ ಸಚಿವರು ಹೊಸ ಪೊಲೀಸ್ ಠಾಣೆ ಮಾಡಲು ಕೆಲವು ನಿಯಮಗಳಿವೆ. ಧಾರವಾಡದಲ್ಲಿ ಹೊಸ ಪೊಲೀಸ ಠಾಣೆ ಸ್ಥಾಪನೆಗೆ ಪ್ರಸ್ತಾವನೆ ಬಂದ ಬಳಿಕ ಕ್ರಮ ಕೈಗೊಳ್ಳಲಾಗುವುದು. ಪಿಎಸೈ ನೇಮಕಾತಿ ಪ್ರಕರಣ ಹಿನ್ನೆಲೆ ತನಿಖೆ ನಡೆಯುತ್ತಿದೆ. ಸ್ಕ್ಯಾಂನಲ್ಲಿ ಇಲ್ಲದೇ ಇರುವವರಿಗೆ ಮರು ಪರೀಕ್ಷೆ ಮಾಡುವ ವಿಚಾರ ಕೆಲವರು ಕೋರ್ಟಗೆ‌ ಹೋಗಿದ್ದಾರೆ.

ಕೋರ್ಟ ಮುಖಾಂತರ ಆದೇಶ ಬಂದ್ರೆ 1 ತಿಂಗಳೊಳಗೆ ಮರು‌ಪರೀಕ್ಷೆ ಮಾಡಲು ನಿರ್ಧಾರ  ಕೈಗೊಳ್ಳುತ್ತೇವೆ. ಎರಡುವರೆ ಸಾವಿರ ಬೆಂಗಳೂರಿಗೆ  ಪೊಲೀಸ ಸಿಬ್ಬಂದಿ ನೇಮಕ ಮಾಡಲಾಗುವುದು.ಹಾಗೂ ರಾಜ್ಯಾದ್ಯಂತ 3 ವರೆ ಸಾವಿರ ಪೊಲೀಸ ಸಿಬ್ಬಂದಿಗಳ ನೇಮಖಾತಿಗೆ ಅಧಿಸೂಚನೆ ಹೊರಡಿಸಲಾಗುವುದು.ರಾಜ್ಯದಲ್ಲಿ ಅಮಾಯಕರ ಮೇಲೆ ಅನಾವಶ್ಯಕವಾಗಿ‌ ಹಾಕಿರುವ ಹಳೆಯ‌ ಕೇಸಗಳನ್ನು ವಾಪಸ ಪಡೆಯಲಾಗುವುದು. ಪೊಲೀಸ್ ಇಲಾಖೆ ಮಾಹಿತಿ ಅನ್ವಯ ಕ್ಯಾಬಿನೆಟನಲ್ಲಿ ನಿರ್ಣಯ ತೆಗೆದುಕೊಂಡು ಕೈಗೊಳ್ಳಲಾಗುವುದು. ‌

Sandalwood: ‘ಟಗರು ಪಲ್ಯ’ ಸಿನಿಮಾ ರಾಜ್ಯೋತ್ಸವಕ್ಕೆ ಸಿನಿಮಾ ರಿಲೀಸ್

Dharawad : ಸೌಜನ್ಯ ಪ್ರಕರಣದಲ್ಲಿ ತಪಿತಸ್ಥರಿಗೆ ಗಲ್ಲು ಶಿಕ್ಷೆಗೆ ಒತ್ತಾಯ.

Joshi : ಘಮಂಡಿ ಘಟಬಂಧನ ಉಳಿಸಿಕೊಳ್ಳಲು ಕಾಂಗ್ರೆಸ್ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ.

- Advertisement -

Latest Posts

Don't Miss