Monday, October 2, 2023

Latest Posts

ನಾಗರ ಪಂಚಮಿ ಹಬ್ಬವನ್ನು ಯಾಕೆ ಆಚರಿಸಲಾಗುತ್ತದೆ..?

- Advertisement -

Spiritual: ಇನ್ನೇನು ಕೆಲವೇ ದಿನಗಳಲ್ಲಿ ನಾಗರ ಪಂಚಮಿ ಹಬ್ಬ ಬರಲಿದೆ. ಈ ಹಬ್ಬವನ್ನು ಹೆಣ್ಣು ಮಕ್ಕಳ ಹಬ್ಬವೆಂದೇ ಕರೆಯಲಾಗುತ್ತದೆ. ಏಕೆಂದರೆ, ವಿವಾಹವಾಗಿ ಹೋದ ಹೆಣ್ಣು ಮಗಳನ್ನು ಅಣ್ಣನಾದವರು, ಹೋಗಿ ಕರೆತರಬೇಕು. ಆಕೆಗೆ ಉಡುಗೊರೆ ಕೊಟ್ಟು, ಸಿಹಿ ಊಟ ಮಾಡಿ ಉಣಬಡಿಸಬೇಕು. ಇದು ಪದ್ಧತಿ. ಹಾಗಾದರೆ ನಾಗರ ಪಂಚಮಿಯನ್ನು ಯಾಕೆ ಆಚರಿಸಲಾಗುತ್ತದೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ದೇವಶರ್ಮನೆಂಬ ಬ್ರಾಹ್ಮಣನಿದ್ದ. ಅವನಿಗೆ 9 ಜನ ಮಕ್ಕಳಿದ್ದರು. 8 ಜನ ಗಂಡು ಮಕ್ಕಳು ಮತ್ತು ಓರ್ವ ಪುತ್ರಿ. ಒಮ್ಮೆ ನಾಗವೊಂದು ಗರುಡನಿಂದ ಬೆದರಿಸಲ್ಪಟ್ಟು, ದೇವಶರ್ಮನ ಪುತ್ರಿಯ ಬಳಿ ಆಶ್ರಯ ಕೇಳಿಕೊಂಡು ಬಂತು. ಆಗ ಆ ಹೆಣ್ಣು, ನಾಗನಿಗೆ ಹಾಲೆರೆದು ಹೊಟ್ಟೆ ತುಂಬಿಸಿದಳು. ಇದರಿಂದ ಸಂತೋಷಗೊಂಡ ನಾಗ, ಆಕೆಗೆ ಬಂಗಾರ ನೀಡಿತು. ಪ್ರತಿದಿನ ಈ ರೀತಿ ಕೊಂಚ ಕೊಂಚ ಬಂಗಾರ ನೀಡುತ್ತಿತ್ತು.

ಒಮ್ಮೆ ಬಂಗಾರ ನೋಡಿ ದುರಾಸೆ ಹೆಚ್ಚಿ, ಆ ಬಾಲಕಿಯ ಅಣ್ಣನೋರ್ವ ನಾಗನಿಗೆ ಕಾಲಿನಿಂದ ತುಳಿದ. ಇದರಿಂದ ಕೋಪಗೊಂಡ ನಾಗ, ಆ ಬಾಲಕಿಯ 8 ಜನ ಅಣ್ಣಂದಿರನ್ನು ಕಚ್ಚಿ ಸಾಯಿಸುತ್ತದೆ. ತನ್ನ ಅಣ್ಣಂದಿರ ಸಾವಿಗೆ, ತಾನು ಸಾಕಿದ ನಾಗವೇ ಕಾರಣವೆಂದು, ಆಕೆ ಶಿರಚ್ಛೇದನ ಮಾಡಿಕೊಳ್ಳಲು ಹೋಗುತ್ತಾಳೆ.

ಆಗ ನಾರಾಯಣ ಹೇಳಿದ ಪ್ರಕಾರ, ವಾಸುಕಿ ಆ 8 ಜನ ಅಣ್ಣಂದಿರನ್ನು ಬದುಕಿಸುತ್ತಾನೆ. ತಂಗಿಯ ಭಕ್ತಿಯಿಂದ, ಉತ್ತಮ ಗುಣಗಳಿಂದ ಅಣ್ಣಂದಿರ ಪ್ರಾಣ ಉಳಿಯುತ್ತದೆ. ನಂತರ ಬಂಗಾರಕ್ಕೆ ದುರಾಸೆ ಪಟ್ಟವನು, ದೇವರ ಬಳಿ ಕ್ಷಮೆ ಕೇಳುತ್ತಾನೆ. ಈ ಕಾರಣಕ್ಕೆ ಅಣ್ಣನಾದವನು, ತಂಗಿಗೆ ಸೀರೆ, ಸಿಹಿಯೂಟ ನೀಡುವುದು ವಾಡಿಕೆ.

ಇನ್ನು ಪೌರಾಣಿಕ ಕಥೆಯ ಪ್ರಕಾರ, ಜನಮೇಜಯ ರಾಜ, ತನ್ನ ತಂದೆ ಪರೀಕ್ಷಿತನ ಸಾವಿಗೆ ಸರ್ಪಗಳು ಕಾರಣವೆಂದು, ಲೋಕದಲ್ಲಿರುವ ಎಲ್ಲ ಸರ್ಪಗಳನ್ನು ಸಾಯಿಸಬೇಕೆಂದು, ಸರ್ಪ ಯಜ್ಞವನ್ನು ಆರಂಭಿಸುತ್ತಾನೆ. ಯಜ್ಞ ಆರಂಭವಾಗುತ್ತಿದ್ದಂತೆ, ಯಜ್ಞ ಕುಂಡಕ್ಕೆ ಸರ್ಪಗಳು ಬಂದು ಬೀಳುತ್ತದೆ. ಆಗ ಸರ್ಪಗಳೆಲ್ಲ ಆಸ್ತೀಕ ಋಷಿಯ ತಾಯಿಯಲ್ಲಿ ತಮ್ಮನ್ನು ಕಾಪಾಡುವಂತೆ ಕೇಳಿಕೊಳ್ಳುತ್ತದೆ.

ಆಗ ಆಸ್ತೀಕ ಋಷಿಯು ತಾಯಿಯ ಆಜ್ಞೆಯಂತೆ, ಯಜ್ಞ ನಡೆಯುವ ಜಾಗಕ್ಕೆ ಹೋಗಿ, ಪ್ರಾಣಿಹತ್ಯೆ ಮಹಾಪಾಪ. ಅದರಲ್ಲೂ ಸರ್ಪಗಳನ್ನು ಕೊಲ್ಲುವುದು, ಎಲ್ಲಕ್ಕಿಂತ ಮಹಾಪಾಪ ಎಂದು ಬುದ್ಧಿಮಾತು ಹೇಳುತ್ತಾರೆ. ಆಸ್ತೀಕ ಋಷಿಯ ಮಾತು ಕೇಳಿ, ಜಯಮೇಜಯ ಯಜ್ಞವನ್ನು ನಿಲ್ಲಿಸಿದ.

ಈ 6 ಸ್ಥಳದಲ್ಲಿ ರುದ್ರಾಕ್ಷಿ ಧರಿಸಿ, ಓಡಾಡಬಾರದು..

ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆ..

ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?

- Advertisement -

Latest Posts

Don't Miss