ರೈತನ ಮೇಲೆ ದಾಳಿ ಮಾಡಿದ ನರಹಂತಕ ಕಾಡಾನೆ: ಆನೆ ತುಳಿತಕ್ಕೆ ಕಿವಿ ಕಟ್

Hassan News: ಹಾಸನ: ಹಾಸನದಲ್ಲಿ ಪದೇ ಪದೇ ಕಾಣಿಸಿಕೊಂಡು ಜನರಿಗೆ ಉಪದ್ರ ಕೊಡುತ್ತಿದ್ದ ಕರಡಿ ಎಂಬ ಕಾಡಾನೆ ದೇವರಾಜು(58) ಎಂಬುವ ರೈತನ ಮೇಲೆ ದಾಳಿ ಮಾಡಿದೆ.

ಹಾಸನ ಜಿಲ್ಲೆ, ಬೇಲೂರು ತಾಲ್ಲೂಕಿನ, ಬೊಮ್ಮಡಿಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಮೀನಿಂದ ಜಾನುವಾರುಗಳೊಂದಿಗೆ ದೇವರಾಜು ಮನೆಗೆ ಬರುತ್ತಿದ್ದರು. ಈ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ದೇವರಾಜು ಕಾಡಾನೆಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ದೇವರಾಜುವನ್ನು ಕರಡಿ ಸೊಂಡಲಿನಿಂದ ಎಸೆದು, ಕಾಲಿನಿಂದ ತುಳಿದಿದೆ.

ಕಾಡಾನೆ ತುಳಿತಕ್ಕೆ ದೇವರಾಜು ಕಿವಿ ಕಟ್ ಆಗಿದೆ. ಬಳಿಕ ದೇವರಾಜು ಹಳ್ಳಕ್ಕೆ ಬಿದ್ದಿದ್ದು, ಕಾಡಾನೆ ಕಾಫಿ ತೋಟದೊಳಗೆ ಹೋಗಿದೆ. ಗಾಯಾಳುವಿಗೆ ಬೇಲೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬಿಕ್ಕೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ತಿರುಗೇಟು ನೀಡಿದ ಬ್ಯಾಡ್ಮಿಂಟನ್ ತಾರೆ ಸೈನಾ

ಇದ್ರು ,ಹೋದ್ರು ನನಗೆ ಮಂಡ್ಯ ಸಾಕು. ಸ್ವಾರ್ಥ ಅನ್ನೋದು ಇದ್ರೆ ಮಂಡ್ಯ ಮಾತ್ರ: ಸಂಸದೆ ಸುಮಲತಾ ಅಂಬರೀಷ್

ಹಾಸನದಲ್ಲಿ ಹಿಟ್ ಅಂಡ್ ರನ್‌ಗೆ ಮಾವ-ಅಳಿಯ ಬಲಿ

About The Author