Special Podcast: Sangeetha.com MD ಸುಭಾಷ್ ಚಂದ್ರ ಅವರು ಸಂದರ್ಶನದಲ್ಲಿ ಮಾತನಾಡಿದ್ದು, 2016ರಲ್ಲಿ ನೋಟ್ ಬ್ಯಾನ್ ಆದಾಗ, ಸಂಗೀತಾ ಕಂಪನಿಯಲ್ಲಿ ಜನರಿಗೆ ಯಾವ ಅವಕಾಶ ನೀಡಿದರು ಅನ್ನೋ ಬಗ್ಗೆ ವಿವರಿಸಿದ್ದಾರೆ.
2016ರಲ್ಲಿ ನೋಟ್ ಬ್ಯಾನ್ ಆದಾಗ, ಸಂಗೀತಾ ಕಂಪನಿಯವರು ಬೇರೆಯವರ ರೀತಿ ತಡಬಡಾಯಿಸಲಿಲ್ಲ. ಬದಲಾಗಿ ಉತ್ತಮ ಉಪಾಯ ಮಾಡಿ, ಉದ್ಯಮ ಮಾಡಿದರು. ಬೇರೆಯವರ ರೀತಿ ಹೋಗಿ ಬ್ಯಾಂಕ್‌ನಲ್ಲಿ, ಎಟಿಎಂನಲ್ಲಿ ಕ್ಯೂ ನಿಲ್ಲಲಿಲ್ಲ. ಬದಲಾಗಿ ತಮ್ಮ ಕಂಪನಿಯ ಉದ್ಯೋಗಿಗಳಿಗೆ ಅಡ್ವಾನ್ಸ್ ಆಗಿ ಸ್ಯಾಲರಿ ಹಾಕಿದ್ರು. ಅಲ್ಲದೇ, ಯಾರಿಗೆ ಎಟಿಎಂಗೆ ಹೋದರೂ ಹಣ ಸಿಗುತ್ತಿಲ್ಲವೋ, ಅಂಥವರು ನಮ್ಮ ಕಂಪನಿಗೆ ಬಂದು ಹಣ ಡ್ರಾ ಮಾಡಬಹುದು ಎಂಬ ಅವಕಾಶವನ್ನೂ ಸಂಗೀತಾ ಕಂಪನಿಯವರು ನೀಡಿದರು.
ಇದಕ್ಕಾಗಿ ಆರ್‌ಬಿಐಯಿಂದ ಸ್ಪೆಶಲ್ ಪರ್ಮಿಷನ್ ಕೂಡ ತೆಗೆದುಕ“ಂಡಿದ್ರಂತೆ ಸಂಗೀತಾ ಮ`ಬೈಲ್ಸ್‌ನವರು. ಇನ್ನು ತಮ್ಮ ಟೀಂ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ಸುಭಾಷ್ ಅವರು, ಅಂಥ ಉತ್ತಮ ಟೀಂ ಇರುವುದರಿಂದಲೇ ನಮಗೆ ಯಶಸ್ಸು ಸಿಕ್ಕಿರೋದು ಅಂತಾರೆ ಸುಭಾಷ್. ಸಂಪೂರ್ಣ ಸಂದರ್ಶನಕ್ಕಾಗಿ ವೀಡಿಯೋ ನೋಡಿ.




