ಕೋಲಾರ: ಮಾಲೂರಿನಲ್ಲಿ ಜಾತಿ ರಾಜಕೀಯ ಮಾಡುತ್ತಿದ್ದು ನಮ್ಮ ಜಾತಿಗೆ ಟಿಕೆಟ್ ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ನಮ್ಮದು ಸಣ್ಣ ಜನಾಂಗ ಅಂತ ನೆಗ್ಲೆಟ್ ಮಾಡ್ತಿದ್ದಾರೆ. ರಾಜ್ಯದಲ್ಲಿ ನಮ್ಮ ಜನಾಂಗದ್ದು 40 ಲಕ್ಷ ಜನರಿದ್ದಾರೆ. ಆದ್ರೆ ಬಿಜೆಪಿಯಲ್ಲಿ ಇದುವರೆಗೂ ಒಬ್ಬರು ಶಾಸಕರು ಆಗಿಲ್ಲ, ನಿಗಮ ಮಂಡಳಿ ಸ್ಥಾನವನ್ನೂ ಕೊಟ್ಟಿಲ್ಲ. ನಮ್ಮ ಜನಾಂಗಕ್ಕೆ ಯಾವುದೇ ಸೌಲಭ್ಯಗಳನ್ನು ಕೊಟ್ಟಿಲ್ಲ. ಹಾಗಾಗಿ ಮಾಲೂರಿನಲ್ಲಿ ನಾನು ಶಾಸಕನಾಗಬೇಕೆಂದು ನಮ್ಮ ಜನಾಂಗದವರು ಇಚ್ಛೆ ಪಟ್ಟಿದ್ದಾರೆ. ಆದ್ರೆ ಇಲ್ಲಿ ಜಾತಿ ವಿಚಾರದಲ್ಲಿ ಗೊಂದಲಗಳನ್ನು ಸೃಷ್ಟಿಮಾಡುತ್ತಿದ್ದಾರೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಟಿಕೆಟ್ ವಿಚಾರವಾಗಿ ನಮ್ಮ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ. 224 ಕ್ಷೇತ್ರದಲ್ಲಿ ಎಲ್ಲಿಯೂ ಹೈಕಮಾಂಡ್ ಇನ್ನು ಟಿಕೆಟ್ ಘೋಷಣೆ ಮಾಡಿಲ್ಲ. ನನಗೇ ಟಿಕೆಟ್ ಕೊಡ್ತಾರೆಂದು ನಮ್ಮ ಪಕ್ಷದ ಮೇಲೆ ನಮಗೆ ನಂಬಿಕೆ ಇದೆ. ಟಿಕೆಟ್ ಘೋಷಿಸುವವರೆಗೂ ಯಾರು ಸಹ ಗೊಂದಲಕ್ಕೆ ಹೋಗಬೇಡಿ. ಈಗ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇದೆ. ನಾವು ಬಿಜೆಪಿ ಪಕ್ಷ ಸಂಘಟನೆ ಮಾಡೋಣ. ನಾವೆಲ್ಲರೂ ಒಟ್ಟಾಗಿ ಇದ್ದರೆ ಗೊಂದಲ ಉಂಟಾಗೋದಿಲ್ಲ ಎಂದರು.
ಕೆಲವರು ಬೇಕಂತಲೇ ಸಾಮಾಜಿಕ ಜಾಲತಾಣದಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲ ಸೃಷ್ಟಿ ಮಾಡ್ತಿದ್ದಾರೆ. ಅದಕ್ಕೆ ಸ್ಪಷ್ಟೀಕರಣ ನೀಡುವ ಸಲುವಾಗಿ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಇನ್ನು ಸರ್ವೆ ರಿಪೋರ್ಟ್ ಹೈಕಮಾಂಡ್ ಕೈ ತಲುಪಿದೆ. ಅದರಲ್ಲಿ ಏನಿದೆ ಅನ್ನೋದು ನನಗೆ ತಿಳಿದಿಲ್ಲ. ಯಾರು ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಅದರ ರಿಪೋರ್ಟ್ ಹೈಕಮಾಂಡ್ ಗೆ ಹೋಗಿರುತ್ತೆ. ಕಾರ್ಯಕರ್ತರ ಜೊತೆ ಯಾರಿದ್ದಾರೆ, ಪಕ್ಷ ಸಂಘಟನೆ ಯಾರು ಮಾಡ್ತಾರೆ ಎಲ್ಲವನ್ನೂ ಪಕ್ಷದ ಹೈಕಮಾಂಡ್ ಗುರುತಿಸಿ ಕೆಲಸ ಮಾಡುವವರಿಗೆ ಟಿಕೆಟ್ ನೀಡುತ್ತಾರೆ. ಹೈಕಮಾಂಡ್ ನಮಗೆ ಪಕ್ಷ ಸಂಘಟನೆ ಮಾಡಲು ಜವಾಬ್ದಾರಿ ನೀಡಿದೆ. ಕಾರ್ಯಕರ್ತರು ನಮ್ಮ ಪರವಾಗಿ ಇದ್ದಾರೆ, ಭಯ ಬೀಳುವ ಅವಶ್ಯಕತೆ ಇಲ್ಲ ಎಂದರು.
ಎಲ್ಲಾ ಸರ್ವೇಯಲ್ಲೂ ನನ್ನ ಹೆಸರು ಬಂದಿದೆ. ನನಗೆ ಟಿಕೆಟ್ ಕೊಡ್ತಾರೆಂದು ನನಗೆ ವಿಶ್ವಾಸ ಇದೆ. ಆದ್ರೆ ಕೆಲವು ನಾಯಕರು ನನಗೆ ಟಿಕೆಟ್ ಕೈತಪ್ಪುವಂತೆ ಕೆಲಸ ಮಾಡ್ತಿದ್ದಾರೆ. ಜಾತಿ ರಾಜಕೀಯ ವಿಚಾರದಲ್ಲಿ ನಮ್ಮ ಜಾತಿಗೆ ಟಿಕೆಟ್ ತಪ್ಪಿಸಲು ಮುಂದಾಗಿದ್ದಾರೆ. ಭಾರತೀಯ ಜನತಾ ಪಕ್ಷದ ಮುಖಂಡರು ತೀರ್ಮಾನಕ್ಕೆ ನಾನು ಬದ್ಧನಾಗಿರುತ್ತೇನೆ. ಆದ್ರೆ ಈ ಬಾರಿ ಚುನಾವಣೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬಿಜೆಪಿ ದೊಡ್ಡ ಪಕ್ಷವಾದ್ದರಿಂದ ಸಣ್ಣ ಪುಟ್ಟ ವ್ಯತ್ಯಾಸಗಳು ಆಗೋದು ಸಹಜ. ಇಂದು ಕಾದು ನೋಡುತ್ತೇನೆ, ಟಿಕೆಟ್ ಸಿಗದಿದ್ದರೆ ನಮ್ಮ ಕಾರ್ಯಕರ್ತರ ತೀರ್ಮಾನಕ್ಕೆ ನಾನು ಬದ್ಧ ಎಂದು ಮಾಲೂರಿನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ ಕುಮಾರ್ ಹೇಳಿದರು.
ಮಾಲೂರು ಬಿಜೆಪಿಯಲ್ಲಿ ಟಿಕೆಟ್ ವಿಚಾರದಲ್ಲಿ ಗೊಂದಲವಿರುವ ಕಾರಣ ಹೂಡಿ ವಿಜಯ್ ಕುಮಾರ್ ಅವರ ಮೋದಿ ನಿವಾಸದಲ್ಲಿ ಕಾರ್ಯಕರ್ತರ ಸಭೆ ನಡೆಸಿದರು. ಕಳೆದ 5 ವರ್ಷದಿಂದ ಪಕ್ಷ ಸಂಘಟನೆ ಮಾಡಿರುವ ಹಿನ್ನೆಲೆ ತನ್ನ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿ ಹೂಡಿ ವಿಜಯ್ ಕುಮಾರ್ ಅವರಿಗೆ ಬೆಂಬಲ ನೀಡಿದರು. ಈ ವೇಳೆ ಹೂಡಿ ವಿಜಯ್ ಕುಮಾರ್ ಅವರಿಗೆ ಬಿಜೆಪಿಯಿಂದ ಟಿಕೆಟ್ ನೀಡಲೇಬೇಕು ಎಂದು ಒತ್ತಾಯ ಮಾಡಿದರು. ಒಂದು ವೇಳೆ ಟಿಕೆಡ್ ನೀಡದಿದ್ದರೆ ಪಕ್ಷೇತರವಾಗಿ ಸ್ಪರ್ಧೆ ಮಾಡಿ ವಿಧಾನಸಭೆಗೆ ಕಳಿಹಿಸುತ್ತೇವೆ ಎಂದು ಬಿಜೆಪಿ ಪಕ್ಷಕ್ಕೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಕೋಲಾರದಲ್ಲಿ ಕಾಂಗ್ರೆಸ್‌ಗೆ ಬಿಗ್ ಶಾಕ್: ಆನಂದ್ ರೆಡ್ಡಿ ಜೆಡಿಎಸ್‌ಗೆ ಸೇರ್ಪಡೆ
‘ಯಾರಿಗೆ, ಯಾವಾಗ ಏನೇನ್ ಬೇಕೋ ಅದನ್ನ ಹೇಳ್ತಾರೆ’: ಗೋಪಾಲಕೃಷ್ಣ ವಿರುದ್ಧ ಬಾಬು ಗರಂ