Hubballi News: ಹುಬ್ಬಳ್ಳಿ: ಜನಪ್ರತಿನಿಧಿಯಾಗಿ ಜನ ಸಾಮಾನ್ಯರ ನೋವಿಗೆ ಸ್ಪಂದನೆ ಮಾಡಬೇಕಿದ್ದ ಮಾಜಿ ಶಾಸಕರೊಬ್ಬರು ಟಿಟಿ ವಾಹನದ ಚಾಲಕನ ಮೇಲೆ ತಮ್ಮ ಸಹಚರರ ಜೋತೆ ಸೇರಿ ಹಲ್ಲೆ ನಡೆಸಿ, ವಾಹನದ ಕೀ ಕಿತ್ತುಕೊಂಡು ದರ್ಪ ಮೆರೆದು ಉದ್ಧಟತನ ತೋರಿದ ಘಟನೆ ಗೋಕುಲ್ ರಸ್ತೆಯಲ್ಲಿ ಸಂಜೆ 7.30 ಕ್ಕೆ ನಡೆದಿದೆ.
ಹುಬ್ಬಳ್ಳಿಯಿಂದ ತಾರಿಹಾಳ ಕಡೆಗೆ ಹೊರಟಿದ್ದ ಟಿಟಿ ವಾಹನಕ್ಕೆ ನೆಹರು ನಗರದ ವಾಟರ್ ಟ್ಯಾಂಕ್ ಬಳಿ ಟಿಟಿ ವಾಹನಕ್ಕೆ ಹಿಂಬದಿಯಿಂದ ಮಾಜಿ ಶಾಸಕ ಅಜಮ್ ಪೀರ್ ಖಾದ್ರಿ ಪ್ರಯಾಣ ಮಾಡುತ್ತಿದ್ದ ಕಾರು ಡಿಕ್ಕಿ ಹೊಡೆದಿದೆ. ಆಗ ಮಾಜಿ ಶಾಸಕ ಅಜಮ್ ಖಾದ್ರಿ ತನ್ನ ಸಹಚರೊಂದಿಗೆ ಕಾರಿನಿಂದ ಇಳಿದು ಟಿಟಿ ವಾಹನದ ಚಾಲಕ ಅವಿನಾಶ ಮೇಲೆ ಹಲ್ಲೆ ನಡೆಸಿ ವಾಹನದ ಕೀ ಕಿತ್ತುಕೊಂಡು ಹೋಗಿದ್ದಾರೆ ಅಂತಾ ಚಾಲಕ ಅವಿನಾಶ ಹೇಳಿದ್ದಾರೆ.
ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದನೆ ಮಾಡಬೇಕಿದ್ದ ಮಾಜಿ ಶಾಸಕ ಅಜಮ್ ಪೀರ್ ಖಾದ್ರಿ ತನ್ನ ವಾಹನ ಅಪಘಾತ ಆದ್ರೆ ಸಂಚಾರಿ ಪೊಲೀಸ್ ಠಾಣೆಗೆ ದೂರು ಕೊಡೋದು ಬಿಟ್ಟು ಚಾಲಕನ ಮೇಲೆ ಹಲ್ಲೆ ನಡೆಸಿದ್ದು ಎಷ್ಟು ಸರಿ ಎಂಬುದು ಇದೀಗ ಸಾರ್ವಜನಿಕರ ಪ್ರಶ್ನೆಯಾಗಿದೆ.
ಒಟ್ಟಿನಲ್ಲಿ ತಾನೊಬ್ಬ ಮಾಜಿ ಶಾಸಕ ಹಾಗೂ ಕಾಂಗ್ರೆಸ್’ನ ಮುಖಂಡ ಎಂಬ ದರ್ಪದಿಂದ ಬಡ ಚಾಲಕನ ಮೇಲೆ ಹಲ್ಲೆ ನಡೆಸಿದ ಮಾಜಿ ಶಾಸಕನ ಮೇಲೆ ಚಾಲಕನ ಹೇಳಿಕೆ ಆಧರಿಸಿ ಸೂಕ್ತ ಕ್ರಮವನ್ನು ಕೈಗೊಳ್ಳುತ್ತಾರೋ ಅಥವಾ ಕಾಂಗ್ರೆಸ್ ಮುಖಂಡ ಅಂತಾ ಈ ಪ್ರಕರಣಕ್ಕೆ ಎಳ್ಳು ನೀರು ಬಿಡುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ಸಂಗಮೇಶ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ
ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಕೇವಲ ಲೋಕಸಭಾ ಚುನಾವಣೆವರೆಗೂ ಮಾತ್ರ: ಶಾಸಕ ಅರವಿಂದ್ ಬೆಲ್ಲದ್
ಕುಮಾರಸ್ವಾಮಿ ಅವರು ಕೇಸರಿ ಶಾಲು ಧರಿಸಿದ್ದಕ್ಕೆ ಸಂಕೋಚ ಪಡಬೇಕಿಲ್ಲ: ಸಿ.ಟಿ.ರವಿ