Horoscope: ಕಪ್ಪು ಅಂದ್ರೆ, ಹಲವರಿಗೆ ಅತೀ ಇಷ್ಟವಾಗುವ ಬಣ್ಣ. ಆದರೆ ಇನ್ನು ಕೆಲವರಿಗೆ ತಾವು ಕಪ್ಪು ವಸ್ತ್ರ ಅಥವಾ ವಸ್ತು ಬಳಸಿದರೆ, ಉತ್ತಮವಲ್ಲ ಅಂತಾ ಇದೆ. ಹಾಗಾದ್ರೆ ಯಾವ ರಾಶಿಯವರಿಗೆ ಕಪ್ಪು ಬಣ್ಣ ಉತ್ತಮ ಅಂತಾ ತಿಳಿಯೋಣ ಬನ್ನಿ..
ವೃಶ್ಚಿಕ: ವೃಶ್ಚಿಕ ರಾಶಿಯವರಿಗೆ ಕಪ್ಪು ಬಣ್ಣ ಲಕ್ಕಿಯಾಗಿದೆ. ಆದರೆ ಎಲ್ಲ ಕಾಲದಲ್ಲೂ ಅಲ್ಲ. ಎಲ್ಲರೂ ತಮ್ಮ ತಮ್ಮ ಜಾತಕದ ಪ್ರಕಾರ, ಸರಿಯಾಗುವ ಬಣ್ಣ, ದಿನ ಎಲ್ಲವನ್ನು ಪದೇ ಪದೇ ಪರಿಶೀಲಿಸಬೇಕು. ಅದರಂತೆ ವೃಶ್ಚಿಕ ರಾಶಿಯವರಿಗೆ ಕಪ್ಪು ಬಣ್ಣ ಲಕ್ಕಿ ಬಣ್ಣ.
ಮಕರ: ಕಪ್ಪು ಬಣ್ಣದ ಬಳಕೆ ಮಾಡೋದು, ಮಕರ ರಾಶಿಯವರಿಗೆ ಉತ್ತಮ. ಇವರು ಜೀವನದಲ್ಲಿ ಅಭಿವೃದ್ಧಿಯಾಗಲು ಕಪ್ಪು ಬಣ್ಣ ಸಹಕಾರಿಯಾಗಿದೆ. ನೀವು ಕಪ್ಪು ಬಣ್ಣದ ದೇವರ ದಾರ ಬಳಸಬಹುದು.
ಕುಂಭ: ಕುಂಭ ರಾಶಿಯವರು ಹುಂಭರು ಅಂತಲೇ ಹೇಳಲಾಗುತ್ತದೆ. ಏಕೆಂದರೆ ಅವರದ್ದು ಬಂಡಾಯವೇಳುವ ಗುಣ. ಎದುರಿನವರಿಗೆ ಅವರ ನಡುವಳಿಕೆ ಸ್ವಲ್ಪ ಕಿರಿಕಿರಿಯಾಗಬಹುದು. ಅವರು ಕೂಡ ಕಪ್ಪು ಬಣ್ಣ ಬಳಸಿದರೆ, ಜೀವನದಲ್ಲಿ ಸ್ವಲ್ಪ ಅಭಿವೃದ್ಧಿ ಕಾಣಬಹುದು.
ಮೀನ : ಸಹಾನುಭೂತಿ ಗುಣವಿರುವ ಮೀನ ರಾಶಿಯವರಿಗೆ ಕಪ್ಪು ಲಕ್ಕಿ ಬಣ್ಣ. ಮತ್ತು ಇವರು ಹೆಚ್ಚಾಗಿ ಕಪ್ಪು ಉಡುಪು, ಚಪ್ಪಲಿ ಧರಿಸಲು ಇಚ್ಛಿಸುತ್ತಾರೆ. ಯವುದೇ ವಸ್ತುಗಳನ್ನು ಖರೀದಿಸುವುದಿದ್ದರೂ ಕಪ್ಪು ಬಣ್ಣದ್ದೇ ಖರೀದಿಸಲು ಇಚ್ಛಿಸುತ್ತಾರೆ.