Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ಭಾವನಾತ್ಮಕ ವ್ಯಕ್ತಿತ್ವದವರಾಗಿರುತ್ತಾರೆ ಎಂದು ಹೇಳಲಿದ್ದೇವೆ.
ಕಟಕ ರಾಶಿ: ಕಟಕ ರಾಶಿಯವರು ಹೆಚ್ಚು ಭಾವನಾತ್ಮಕ ಜೀವಿಗಳು. ಇವರಿಗೆ ಕೋಪ ಬಂದರೂ, ಅಳುತ್ತಾರೆ. ಸಂತೋಷವಾದಾಾಗಲೂ ಅಳುತ್ತಾರೆ. ಬೇಸರವಾದಾಗಲೂ ಅಳುತ್ತಾರೆ. ಯಾಕಂದ್ರೆ ಇವರನ್ನು ಆಳುವ ಗ್ರಹ ಅಂದ್ರೆ ಚಂದ್ರ. ಚಂದ್ರ ಹೇಗೆ ಚಂಚಲನೋ, ಅದೇ ರೀತಿ ಇವರ ಸ್ವಭಾವವೂ ಚಂಚಲ. ಮತ್ತು ಭಾವನಾತ್ಮಕ.
ಮಿಥುನ ರಾಶಿ: ಮಿಥುನ ರಾಶಿಯವರು ಹೆಚ್ಚು ತಾಳ್ಮೆ ಹೊಂದಿದವರು. ಸಂಬಂಧಕ್ಕೆ ಬೆಲೆ ಕೊಡುವವರು. ನಡತೆಯನ್ನು ಜೋರು ಇದ್ದವರ ಹಾಗೆ ಕಂಡರೂ, ಮನಸ್ಸಿನಿಂದ ಸದಾ ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಾರೆ. ಇವರು ಭಾವನಾತ್ಮಕ ಜೀವಿಗಳೇ. ಆದರೆ ಅದನ್ನು ತೋರಿಸಿಕೊಳ್ಳುವುದಿಲ್ಲ.
ತುಲಾ ರಾಶಿ: ಹೆಚ್ಚು ತಮಾಷೆ ಮಾಡುವ ಸ್ವಭಾವವನ್ನು ಹೊಂದಿರುವ ತುಲಾ ರಾಶಿಯವರಿಗೆ ಸಿಟ್ಟು ಕೂಡ ಅಷ್ಟೇ ಬೇಗ ಬರುತ್ತದೆ. ಆದರೆ ಇವರು ಕಷ್ಟದಲ್ಲಿ ಇರುವವರಿಗೆ ಅಥವಾ ತಮ್ಮವರು ಕಷ್ಟದಲ್ಲಿದ್ದಾಗ, ಕೇಳದೆಯೇ ಬಂದು ಸಹಾಯ ಮಾಡುವ ಗುಣವನ್ನು ಹೊಂದಿರುತ್ತಾರೆ. ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುವ ಇವರು, ಒಮ್ಮೆ ಯಾರನ್ನಾದರೂ ಹೆಚ್ಚು ಪ್ರೀತಿಸಿದರೆ, ಕೊನೆಯವರೆಗೂ ಅವರನ್ನು ಬಿಟ್ಟು ಕೊಡುವುದಿಲ್ಲ.
ಮೀನ ರಾಶಿ: ಕಟಕ ರಾಶಿಯವರ ಬಳಿಕ ಹೆಚ್ಚು ಭಾವನಾತ್ಮಕ ಜೀವಿ. ಯಾರ ಮನಸ್ಸಿಗೂ ಬೇಸರವಾಗದಂತೆ ನಡೆದುಕೊಳ್ಳುವ ರಾಶಿ ಅಂದ್ರೆ ಮೀನ ರಾಶಿಯವರು. ಮೀನ ರಾಶಿಯವರನ್ನು ಯಾರು ಜೀವನ ಸಂಗಾತಿಯಾಗಿ ಪಡೆಯುತ್ತಾರೋ, ಅವರು ಸದಾಕಾಲ ನೆಮ್ಮದಿಯಾಗಿ ಬಾಳುತ್ತಾರೆ. ಅವರಿಗೆ ಇತರರಿಂದ ಯಾವುದೇ ಸಮಸ್ಯೆ ಉಂಟಾಗಬಹುದು ಬಿಟ್ಟರೆ, ಮೀನ ರಾಶಿಯವರಿಂದ ಸಮಸ್ಯೆಯಾಗಲು ಸಾಧ್ಯವೇ ಇಲ್ಲ. ಏಕೆಂದರೆ, ಮೀನ ರಾಶಿಯವರು, ತಮಗೆ ಬೈದವರನ್ನು ಕೂಡ ಕ್ಷಮಿಸಿ ಮುನ್ನಡೆಯುವವರು.