Horoscope: ಅಪ್ಪ ಅಂದ್ರೆ ಎಲ್ಲರಿಗೂ ಇಷ್ಟ. ಅದರಲ್ಲಿ ರಾಶಿ ನೋಡೋದೇನಿದೆ ಅನ್ನೋದು ನಿಮ್ಮ ಮೊದಲ ಪ್ರಶ್ನೆಯಾಗಿರಬಹುದು. ಆದರೆ ಎಲ್ಲ ರಾಶಿಯವರಿಗೂ ಅಪ್ಪನೆಂದರೆ ಪ್ರೀತಿ ಇರುವುದಿಲ್ಲ. ಕೆಲವರ ಅಪ್ಪ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವುದಿಲ್ಲ. ಬೇಜವಾಬ್ದಾರಿತನದವರ ರೀತಿ ಇರುತ್ತಾರೆ. ಮತ್ತೆ ಕೆಲ ಮಕ್ಕಳು, ಅಪ್ಪ ಅಮ್ಮನಿಗೆ ಬೆಲೆ ಕೊಡುವುದಿಲ್ಲ. ಹಾಗಾಗಿ ಕೆಲವು ರಾಶಿಯವರಿಗೆ ಅಪ್ಪನೆಂದರೆ ಬಲು ಪ್ರೀತಿ ಎಂದಿದ್ದು. ಹಾಗಾದ್ರೆ ಯಾವ ರಾಶಿಯವರು ಕೊನೆತನಕವೂ ಅಪ್ಪನನ್ನು ನಿಜವಾಗಿಯೂ ಪ್ರೀತಿಸಿ, ಕಾಳಜಿಯಿಂದ ಕಾಣುತ್ತಾರೆ ಅಂತಾ ತಿಳಿಯೋಣ ಬನ್ನಿ..
ಮಿಥುನ ರಾಶಿ: ಮಿಥುನಾ ರಾಶಿಯವರು ಅಪ್ಪನನ್ನು ಹೆಚ್ಚು ಇಷ್ಟಪಡುತ್ತಾರೆ. ಕೊನೆಯವರೆಗೂ ಅಪ್ಪನಿಗಾಗಿ ಏನೇನು ಜವಾಬ್ದಾರಿ ನಿಭಾಯಿಸಬೇಕೋ, ಅದನ್ನು ನಿಭಾಯಿಸುತ್ತಾರೆ. ತಂದೆಯ ಮಾತಿಗೆ ಬೆಲೆ ಕೊಡುವುದು. ತಂದೆಯ ಹೇಳಿದ್ದನ್ನು ಶಿರಸಾ ಪಾಲಿಸುವ ಗುಣ ಇವರದ್ದಾಗಿರುತ್ತದೆ. ಅಲ್ಲದೇ, ಮನೆಯಲ್ಲಿ ಎಲ್ಲರಿಗಿಂತ ಹೆಚ್ಚಾಗಿ ಸಲುಗೆಯಿಂದ ಇರುವುದು ಕೂಡ ಅಪ್ಪನೊಂದಿಗೆ.
ಧನು ರಾಶಿ: ಧನು ರಾಶಿಯವರು ತಮ್ಮದೇ ಪ್ರಪಂಚದಲ್ಲಿ ತೇಲಾಡುವವರು. ಇವರು ಕೆಲವು ಸಾರಿ ಏಕಾಂಗಿಯಾಗಿರಲು ಬಯಸುತ್ತಾರೆ. ಆದರೆ ಇವರಿಗೆ ಹುಟ್ಟಿದಾಗಿನಿಂದ, ಕೊನೆಯವರೆಗೂ ಅತ್ಯುತ್ತಮ ಪಾರ್ಟ್ನರ್ ಆಗಬಹುದು ಎಂಬ ವ್ಯಕ್ತಿ ಇದ್ದರೆ, ಅದು ಅಪ್ಪ ಮಾತ್ರ. ಸಲಹೆ ಪಡೆಯುವುದು, ಜತೆಗೂಡಿ ಕೆಲಸ ಮಾಡುವುದು, ತಂದೆಯ ಮಾತಿಗೆ ಬೆಲೆ ಕೊಟ್ಟು, ಜವಾಬ್ದಾರಿ ವಹಿಸುವುದು. ಇತ್ಯಾದಿ ಕೆಲಸ ಮಾಡುವುದರಲ್ಲಿ ಧನು ರಾಶಿಯವರು ಪರ್ಫೆಕ್ಟ್.
ಕುಂಭ ರಾಶಿ: ಕುಂಭರಾಶಿಯವರು ಎಮೋಷನಲ್ ಸ್ವಭಾವದವರು ಅಲ್ಲ. ಯಾರಿಲ್ಲದಿದ್ದರೂ, ತಾನು ಬದುಕಬಲ್ಲೆ ಎಂಬ ಮನಸ್ಥಿತಿಯವರು. ಆದರೆ ತಂದೆ ಎಂದರೆ, ಇವರಿಗೆ ಬಲು ಇಷ್ಟ. ಕುಂಭ ರಾಶಿಯವರು ಯಾರ ಮಾತು ಕೇಳದಿದ್ದರೂ, ಯಾರ ಮಾತಿಗೆ ಬೆಲೆ ಕೊಡದಿದ್ದರೂ, ಅಪ್ಪನಿಗೆ ಗೌರವಿಸುತ್ತಾರೆ.