Horoscope: ಕೆಲವರು ಹೇಳೋದನ್ನ ನೀವು ಕೇಳಿರುತ್ತೀರಿ. ಅವಳು ನಮ್ಮ ಜೀವನಕ್ಕೆ ಬಂದ ಮೇಲೆ ನಮಗೆ ಇಷ್ಟೆಲ್ಲ ಲಾಭವಾಗಿದ್ದು ಅಂತಾ. ಅಂದ್ರೆ ಹೆಣ್ಣಿನ ಕಾಲ್ಗುಣ ಅಷ್ಟು ಉತ್ತಮವಾಗಿದೆ ಎಂದರ್ಥ. ಹಾಗಾದ್ರೆ ಯಾವ ರಾಶಿಯ ಹೆಣ್ಣು ಮಕ್ಕಳು ಪತಿಗೆ ಅದೃಷ್ಟ ತಂದು ಕ“ಡುತ್ತಾರೆ ಅಂತಾ ತಿಳಿಯೋಣ ಬನ್ನಿ,..
ವೃಷಭ: ವೃಷಭ ರಾಶಿಯ ಹೆಣ್ಣು ಮಕ್ಕಳು ಜೀವನ ನಿರ್ವಹಣೆ ಮಾಡುವುದನ್ನು ಅತ್ಯಂತ ಅದ್ಭುತವಾಗಿ ಕಲಿತಿರುತ್ತಾರೆ. ತಮ್ಮ ಆಸೆ ಆಕಾಂಕ್ಷೆಗಳನ್ನು ಬದಿಗಿರಿಸಿ, ಮನೆ ಜನರ ಆಸೆಗಳಿಗೆ ಬೆಲೆ ನೀಡುವ ಇವರು, ಉತ್ತಮ ಪತ್ನಿಯಾಗಬಲ್ಲರು.
ಕರ್ಕ: ಕರ್ಕ ರಾಶಿಯ ಹೆಣ್ಣು ಮಕ್ಕಳು ಪತಿಯ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಅವರಿಗೆ ಬೇಕಾದ ಆರ್ಥಿಕ ಸಹಾಯ ಸೇರಿ ಎಲ್ಲ ರೀತಿಯ ಸಹಾಯ ಮಾಡುತ್ತಾಳೆ. ಅಲ್ಲದೇ ಭಾವುಕ ಸ್ವಭಾವ, ಪ್ರೀತಿ, ಕಾಳಜಿಯ ಸ್ವಭಾವದಿಂದ ಇಡೀ ಫ್ಯಾಮಿಲಿಯನ್ನು ಜತೆಗಿರಿಸುವ ಪ್ರಯತ್ನ ಈ ರಾಶಿಯ ಹೆಣ್ಣು ಮಕ್ಕಳದ್ದಾಗಿರುತ್ತದೆ.
ಕನ್ಯಾ: ಕನ್ಯಾ ರಾಶಿಯವರು ತಮ್ಮ ಪತಿ, ತಮ್ಮ ಮನೆಯವರು ಆರ್ಥಿಕವಾಗಿ ಅಭಿವೃದ್ಧಿ ಆಗಲಿ ಎಂದು ಆಶಿಸುತ್ತಾರೆ. ಹಾಗಾಗಿ ಅದಕ್ಕಾಗಿ ಬೆಂಬಲಿಸುತ್ತಾಳೆ. ಬೆಂಬಲಿಸುವ ರೀತಿಯಲ್ಲಿ ಕಿರಿ ಕಿರಿ ಇದ್ದರೂ, ತಾನು ಅವಮಾನ ಅನುಭವಿಸಿದರೂ, ಮನೆಯವರ ಅಭಿವೃದ್ಧಿಗೆ ಹೆಚ್ಚು ಬೆಂಬಲ ನೀಡುವ ಸ್ವಭಾವ ಇವರದ್ದಾಗಿರುತ್ತದೆ.
ತುಲಾ: ಈ ರಾಶಿ ಚಿಹ್ನೆಯಂತೆ ಇವರು ಸಾಮರಸ್ಯ-ಪ್ರೀತಿಯನ್ನು ಸಮತೋಲವಾಗಿರಿಸುವ ಪ್ರಯತ್ನ ಮಾಡುತ್ತಾರೆ. ಹಾಗಾಗಿ ಇವರು ಉತ್ತಮ ಪತ್ನಿಯಾಗಬಲ್ಲರು. ಅಲ್ಲದೇ, ಸದಾ ಪತಿಯ ಕೆಲಸಕ್ಕೆ ಬೆಂಬಲಿಸುತ್ತಾರೆ.
ಮೀನ: ಮೀನ ರಾಶಿಯವರು ಕೂಡ ಸಹಾನುಭೂತಿ ಉಳ್ಳವರು. ತಾಳ್ಮೆ ಉಳ್ಳವರು. ಬೇರೆಯವರ ಸಮಸ್ಯೆಗೆ ಸ್ಪಂದಿಸುವವರು. ಅಲ್ಲದೇ ಆಧ್ಯಾತ್ಮಿಕತೆಗೆ ಹೆಚ್ಚು ಬೆಲೆ ನೀಡುವವರು. ಧಾರ್ಮಿಕ ಕೆಲಸಗಳಲ್ಲಿ ಹೆಚ್ಚು ಆಸಕ್ತಿ ಇರುವವರು. ಇವರು ಉತ್ತಮ ಪತ್ನಿ ಆಗಬಲ್ಲರು.