Horoscope: ಕೆಲ ರಾಶಿಯ ಹೆಣ್ಣು ಮಕ್ಕಳು ಚಿಕ್ಕಂದಿನಿಂದಲೇ, ಧೈರ್ಯವಂತರಾಗಿರುತ್ತಾರೆ. ಅವರು ಕತ್ತಲೆಗೋ, ಬೆದರಿಕೆಯೋ, ಬಡಿತಕ್ಕೋ, ಯಾವುದಕ್ಕೂ ಹೆದರುವುದಿಲ್ಲ. ಎಲ್ಲರಿಗೂ ಧೈರ್ಯದಿಂದ ಎದುರಿಸುತ್ತಾರೆ. ಅಂಥ ಹೆಣ್ಣು ಮಕ್ಕಳು ಮುಂದೆ ಭವಿಷ್ಯದಲ್ಲೂ ಧೈರ್ಯವಾಗಿಯೇ ಸಾಗುತ್ತಾರೆ. ಅಂಥ ರಾಶಿಗಳು ಯಾವುದು..? ಯಾವ ರಾಶಿಯ ಹೆಣ್ಣು ಮಕ್ಕಳು ಧೈರ್ಯವಂತರಾಗಿರುತ್ತಾರೆ ಅಂತಾ ತಿಳಿಯೋಣ ಬನ್ನಿ..
ಮೇಷ: ಮೇಷ ರಾಶಿಯವರು ಸ್ಪರ್ಧೆ ಅಂತ ಬಂದರೆ, ಏನಾದರೂ ಮಾಡಿ ಮುಂದೇ ಬಂದೇ ಬರುತ್ತಾರೆ. ಗೆಲುವು ಸಾಧಿಸಲೇಬೇಕೆಂಬ ಛಲ ಅವರಲ್ಲಿ ಇರುತ್ತದೆ. ಧೈರ್ಯವಂತರೂ ಆದ ಇವರು, ಎಲ್ಲ ಸಮಸ್ಯೆಗಳನ್ನು ಎದುರಿಸಿ, ಬಾಸ್ ಆಗೇ ಆಗುತ್ತಾರೆ.
ಮಿಥುನ: ಮಿಥುನ ರಾಶಿಯವರಲ್ಲಿ ಕಾನ್ಫಿಡೆನ್ಸ್ ಅನ್ನೋದು ಅಗತ್ಯಕ್ಕಿಂತ ಹೆಚ್ಚೇ ಇರುತ್ತದೆ. ಇವರದ್ದು ಭಂಡ ಧೈರ್ಯ ಅಂದರೂ ತಪ್ಪೇನಿಲ್ಲ. ಆದರೆ ಪ್ರಥಮ ಸ್ಥಾನಕ್ಕಾಗಿ ಪ್ರಯತ್ನಿಸುವ ಗುಣ ಮಾತ್ರ ಇವರಿಗೆ ಇದ್ದೇ ಇರುತ್ತದೆ. ಇದೇ ಕ್ವಾಲಿಟಿ ಇವರನ್ನು ಬಾಸ್ ಮಾಡುತ್ತದೆ.
ಸಿಂಹ: ಸಿಂಹ ರಾಶಿಯವರು ಸದಾ ನಾಯಕತ್ವದ ಗುಣವನ್ನೇ ಉಳ್ಳವರು. ಹೆಣ್ಣು ಮಕ್ಕಳು ಕೂಡ, ಎಲ್ಲದರಲ್ಲೂ ತಾನೇ ಮುಂಂದಿರಬೇಕು ಅಂತಾ ಬಯಸುವವರು. ಅದಕ್ಕೆ ತಕ್ಕಂತೆ, ಪ್ರಯತ್ನಿಸಿ, ಗೆಲುವು ಸಾಧಿಸುವವರು. ಇವರು ಬಾಸ್ ಆಗಲು ಸರ್ವ ಪ್ರಯತ್ನ ಪಡುವವರು.