Horoscope: ಕೆಲವರಿಗೆ ಏನಾದರೂ ಹೇಳಿದರೆ ಥಟ್ ಅಂತಾ ಕೋಪ ಬರುತ್ತದೆ. ಹಾಗಾಗಿ ಅವರ ಜತೆ ಮಾತನಾಡುವುದಕ್ಕೂ ಭಯವಾಗುತ್ತದೆ. ಆದರೆ ಕೆಲ ವ್ಯಕ್ತಿಗಳು ಹೇಗಿರುತ್ತಾರೆಂದರೆ, ಎದುರಿನವರು ಹೇಳಿದ್ದನ್ನು ಕೇಳಿ, ಮತ್ತೆ ಮಾತನಾಡುತ್ತಾರೆ. ತಮ್ಮ ನಿರ್ಧಾರ ತಿಳಿಸುತ್ತಾರೆ. ಅಂದ್ರೆ ಅವರು ಹೆಚ್ಚು ತಾಳ್ಮೆ ಇದ್ದವರಾಗಿರುತ್ತಾರೆ. ಇಂದು ನಾವು ಹೆಚ್ಚು ತಾಳ್ಮೆ ಇರುವ ರಾಶಿಗಳು ಯಾವುದು ಅಂತಾ ಹೇಳಲಿದ್ದೇವೆ.
ಮಿಥುನ: ಮಿಥುನ ರಾಶಿಯವರಿಗೆ ಹೆಚ್ಚು ಸಮಯ ಕೋಪ ಮಾಡಿ, ಸಮಯ ವ್ಯರ್ಥ ಮಾಡುವ ಮನಸ್ಸಿರುವುದಿಲ್ಲ. ಹಾಗಾಗಿ ಇಂದು ಕೋಪ ಮಾಡಿ, ನಾಳೆ ಚೆನ್ನಾಗಿರಲು ಬಯಸುತ್ತಾರೆ. ನಗು ನಗುತ್ತ ಮಾತನಾಾಡಿಸುತ್ತಾರೆ. ನಿನ್ನೆಯದು ನಿನ್ನೆಗೆ ಎನ್ನುವ ಸ್ವಭಾವ ಇವರದ್ದು. ಜೀವನ ನಡೆಸಲು ಇಂಥ ಸ್ವಭಾವವೇ ಬೇಕಾಗಿರುತ್ತದೆ.
ಕರ್ಕ: ಕರ್ಕ ರಾಶಿಯವರಿಗೆ ಕೋಪ ಬಂದರೆ, ಅದನ್ನು ಸರಿ ಮಾಡಲು ತುಂಬ ಸಮಯ ಬೇಕಾಗುತ್ತದೆ. ಆದರೆ ಅದು ಮನಸ್ಸಿನಲ್ಲೇ ಕುದಿಯುತ್ತಿರುತ್ತದೆ. ಅವರು ಕೋಪವನ್ನು ಆಚೆ ತೋರಿಸುವುದಿಲ್ಲ. ಬದಲಾಗಿ ಮನಸ್ಸಿನಲ್ಲೇ ಕಿಡಿ ಕಾರುತ್ತಾರೆ.
ತುಲಾ: ತುಲಾ ರಾಶಿಯವರು ತಾಳ್ಮೆ ವಹಿಸುತ್ತಾರೆ. ಆದರೆ ಅವರಿಗೂ ಹೆಚ್ಚು ಕೋಪ ಬರುತ್ತದೆ. ಆ ಕೋಪವನ್ನು ಸಹಿಸಿ, ತಾಳ್ಮೆಯಿಂದ ಇರುತ್ತಾರೆ. ಇದರ ಹಿಂದೆ ಕಾರಣವಂತೂ ಇದ್ದೇ ಇರುತ್ತದೆ. ಕಾಳಜಿ, ಪ್ರೀತಿ, ರಕ್ಷಣೆ ಹೀಗೆ ಯಾವುದಾದರೂ ಕಾರಣವಿರುವುದಕ್ಕೇ, ಅವರು ಕೋಪವನ್ನು ತೋರಿಸುವುದಿಲ್ಲ.
ಮೀನ: ಮೀನ ರಾಶಿಯವರು ಸೌಮ್ಯ ಸ್ವಭಾವದವರು. ಯಾರಾದರೂ ಬೈದರೆ, ಬಯ್ಯಿಸಿಕ`ಂಡು ಬರುತ್ತಾರೆ ವಿನಃ, ಎದುರುತ್ತರ ನೀಡುವುದಿಲ್ಲ. ಬೇಕಾದರೆ, ನಾಲ್ಕು ಗೋಡೆ ಮಧ್ಯ ಕುಳಿತು ಅದನ್ನು ನೆನಪಿಸಿ, ಅಳುತ್ತಾರೆ. ಆದರೆ ಅವರ ಬಳಿ ಕೋಪ ತೋರಿಸುವುದಿಲ್ಲ.




