Horoscope: ಈ ಬಾರಿಯ ಯುಗಾದಿ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ ಶರ್ಮ ಅವರು ಹೇಳಿದ್ದು, 12 ರಾಶಿಗಳ ಫಲಾಫಲ ಹೇಗಿದೆ ಎಂದು ವಿವರಿಸಿದ್ದಾರೆ. ಅದರಲ್ಲಿ ವೃಶ್ಚಿಕ ರಾಶಿಯವರಿಗೆ ಈ ವರ್ಷ ಹೇಗಿರಲಿದೆ. ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿದೆ ಅಂತಾ ತಿಳಿಯೋಣ ಬನ್ನಿ.
ವೃಶ್ಚಿಕ ರಾಶಿಯವರಿಗೆ ಮದುವೆ ಮಾಡುತ್ತಿದ್ದರೆ, ವಧು ವರ ಇಬ್ಬರ ಅಭಿಪ್ರಾಯ ತಿಳಿದು ಮದುವೆ ಮಾಡಿಸಿ. ಇಲ್ಲವಾದಲ್ಲಿ, ದುಡುಕಿನಲ್ಲಿ ಮಾಡಿದ ತಪ್ಪಿಗೆ, ಇಡೀ ಜೀವನಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ. ಇನ್ನು ತಂದೆಯ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇದೆ.
ಸ್ನೇಹಿತರೊಂದಿಗೆ ಕಿರಿಕ್ ಆಗುವ ಸಾಧ್ಯತೆ ಇರುತ್ತದೆ. ಜೊತೆಗೆ ಅಲೆದಾಡುವ ಪರಿಸ್ಥಿತಿ ಬರಬಹುದು. ಇನ್ನು ವೃಶ್ಚಿಕ ರಾಶಿಯವರು ತಂದೆ ತಾಯಿಯಾಗುವ ಪ್ರಯತ್ನದಲ್ಲಿದ್ದರೆ, ಅಂಥವರು ಜಾತಕವನ್ನು ನುರಿತ ಜ್ಯೋತಿಷಿಗಳಿಗೆ ತೋರಿಸಿ, ಬಳಿಕ ಸರಿಯಾದ ಸಮಯ ನೋಡಿಕೊಂಡು ಮಕ್ಕಳ ಮಾಡಿಕೊಂಡರೆ ಉತ್ತಮ.
ಇನ್ನು ಚಿಕ್ಕ ಮಕ್ಕಳ ವಿಷಯದಲ್ಲಿ ಸ್ವಲ್ಪ ಹುಷಾಗಿರಾಗಿರುವುದು ಉತ್ತಮ. ಏಕೆಂದರೆ ನಿಮಗೆ ಚಿಕ್ಕ ಮಕ್ಕಳಿಂದ ತೊಂದರೆಯಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಮಕ್ಕಳ ವಿಷಯದಲ್ಲಿ ಎಚ್ಚರಿಕೆಯಿಂದ ಇರಿ. ಇನ್ನು ಗರ್ಭಿಣಿಯರು ದೊಡ್ಡ ಮೆಟ್ಟಿಲಿರುವ ಯಾವುದೇ ಸ್ಥಳಗಳಿಗೆ ಹೋಗಬೇಡಿ. ಪ್ರತಿದಿನ ಒಂದೊಂದು ಪುಟ ದೇವಿ ಮಹಾತ್ಮೆ ಪುಸ್ತಕವನ್ನು ಪಾರಾಯಣ ಮಾಡಿ.