Horoscope: ಒಂದೊಂದು ರಾಶಿಯವರದ್ದು ಒಂದೊಂದು ಗುಣವಿದ್ದಂತೆ, ಒಂದೊಂದು ರಾಶಿಯವರದ್ದೂ ಒಂದೊಂದು ಲಕ್ಷಣ ಇರುತ್ತದೆ. ಕೆಲವರು ಸದಾ ಅದೃಷ್ಟವನ್ನೇ ಹೊಂದಿರುವ ರಾಶಿಯವರಾಗಿರುತ್ತಾರೆ. ಮತ್ತೆ ಕೆಲವರಿಗೆ ಶ್ರೀಮಂತಿಕೆ, ಮನೆ, ಮಕ್ಕಳು ಎಲ್ಲವೂ ಇದ್ದರೂ, ಅದನ್ನು ಅನುಭವಿಸುವ ಅದೃಷ್ಟ ಸಾವು ಬರುವ ತನಕವೂ ಇರುವುದಿಲ್ಲ. ಎಲ್ಲ ಇದ್ದೂ ಏನೂ ಇಲ್ಲದಂತೆ ಇರುತ್ತದೆ. ಮತ್ತೆ ಕೆಲವರಿಗೆ ಏನು ಇಲ್ಲದಿದ್ದರೂ, ಜೀವನ ಮಾತ್ರ ಅತ್ಯುತ್ತಮವಾಗಿ ಇರುತ್ತದೆ. ಮಹಾತ್ವಾಕಾಂಕ್ಷೆ ಅನ್ನೋದು ಅವರಿಗೆ ಬರುವುದೇ ಇಲ್ಲ. ಇಂದು ಅದೇ ರೀತಿಯ ಬೇಗ ದೃಷ್ಟಿಯಾಗುವ 4 ರಾಶಿಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.
ವೃಷಭ ರಾಶಿ: ವೃಷಭ ರಾಶಿಯವರಿಗೆ ಬೇಗ ದೃಷ್ಟಿ ತಾಕುತ್ತದೆ. ವೃಷಭ ರಾಶಿಯವರು ಇನ್ನೇನು ಉದ್ಧಾರವಾಗುತ್ತಿದ್ದಾರೆ, ಅಥವಾ ಅವರ ಜೀವನದಲ್ಲಿ ಅಭಿವೃದ್ಧಿಯಾಗುತ್ತಿದೆ ಅಂದಾಗ, ಅವರಿಗೆ ದೃಷ್ಟಿ ಬೀಳುತ್ತದೆ. ಹಾಗಾಗಿ ಈ ರಾಶಿಯವರು ತಮ್ಮ ಏಳಿಗೆಯನ್ನು ಯಾರ ಎದುರಿಗೂ ಬೇಗ ತೋರಿಸಿಕೊಳ್ಳದೇ, ಗೌಪ್ಯವಾಗಿ ಇಡುವುದು ಉತ್ತಮ. ಇದರಿಂದ ಇವರಿಗೆ ನೆಮ್ಮದಿ, ಶಾಂತಿ, ಖುಷಿ ಸಿಗುತ್ತದೆ.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಬೇರೆಯವರು ದೃಷ್ಟಿ ಹಾಕುವ ಅವಶ್ಯಕತೆ ಇಲ್ಲ. ಖುದ್ದು ಮನೆ ಮಂದಿಯ ದೃಷ್ಟಿಯೇ ಸಾಕು. ಮಿಥುನ ರಾಶಿಯವರು ನೋಡಲು ಸುಂದರ, ಬುದ್ಧಿವಂತರು, ಚುರುಕಾಗಿರುವವರು ಆಗಿರುತ್ತಾರೆ. ಹಾಗಾಗಿ ಇವರಿಗೆ ಬೇಗ ದೃಷ್ಟಿ ತಾಕುತ್ತದೆ.
ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರಿಗೆ ಬೇರೆಯವರು ದೃಷ್ಟಿ ಹಾಕದಿದ್ದರೂ, ಕೆಲವೊಮ್‌ಮೆ ಇವರ ದೃಷ್ಟಿಯೇ ಇವರಿಗೆ ಬೀಳುತ್ತದೆ. ಖುಷಿಯಾಗಿದ್ದಾಗ, ನಾನೆಷ್ಟು ಖುಷಿಯಾಗಿದ್ದೇನೆ ಅಂದುಕೊಳ್ಳುವಾಗಲೇ, ಜಗಳ- ಮನಸ್ತಾಪ ಬಂದು, ಒಂದು ಗಂಟೆ ಪಟ್ಟ ಖುಷಿಗೆ ಬದಲಾಗಿ, ಒಂದು ವಾರವೋ, ಅಥವಾ ಒಂದು ತಿಂಗಳೋ, ಕಷ್ಟ- ಕಾರ್ಪಣ್ಯ ಅನುಭವಿಸಬೇಕಾಗುತ್ತದೆ. ಅಲ್ಲದೇ, ಇವರಿಗೆ ಬೇರೆಯವರ ದೃಷ್ಟಿಯೂ ಹೆಚ್ಚಾಗಿ ಬೀಳುತ್ತದೆ.
ಕುಂಭ ರಾಶಿ: ಕುಂಭ ರಾಶಿಯವರು ಹುಂಬರು ಅನ್ನೋ ಮಾತಿದೆ. ಅಂದ್ರೆ, ದಡ್ಡರು ಅಂತಲ್ಲ. ಇವರೊಂಥರ ಹಠಮಾರಿ ಸ್ವಭಾವದವರು, ಒಮ್ಮೆ ಏನಾದರೂ ಮಾಡಬೇಕು ಅಂದುಕೊಂಡ್ರೆ, ಅದನ್ನು ಮಾಡಿಯೇ ಸಾಧಿಸುವವರು, ಹಾಗಾಗಿ ಇವರು ತಮಗೆ ಬೇಕಾದನ್ನು ಕೊಂಡುಕೊಳ್ಳುವ, ಪಡೆದುಕೊಳ್ಳುವ, ಗಳಿಸುವ ಅರ್ಹತೆ ಹೊಂದಿರುತ್ತಾರೆ. ಹಾಗಾಾಗಿ ಇವರಿಗೆ ಬಹುಬೇಗ ದೃಷ್ಟಿ ತಾಕುತ್ತದೆ.