Horoscope: ಕೆಲವು ರಾಶಿಯವರಿಗೆ ಕೆಲವು ಟ್ಯಾಲೆಂಟ್ ಇರುತ್ತದೆ. ಅದೇ ರೀತಿ ನಾವಿಂದು ಯಾವ ರಾಶಿಯವರಿಗೆ ಹಣ ಮಾಡುವ ಟ್ಯಾಲೆಂಟ್ ಇದೆ ಅಂತಾ ಹೇಳಲಿದ್ದೇವೆ.
ಮಿಥುನ ರಾಶಿ: ಮಿಥುನ ರಾಶಿಯವರು ಹಣ ಮಾಡುವುದರಲ್ಲಿ ನಿಸ್ಸೀಮರು. ಯಾಕೆ ಇವರು ನಿಸ್ಸೀಮರು ಎಂದರೆ, ಇವರು ಬುದ್ಧಿವಂತರು. ಯಾವ ಕೆಲಸ ಮಾಡಿದರೆ, ಉತ್ತಮ ಹಣ ಸಂಪಾದನೆ ಮಾಡಬಹುದು ಎಂದು ಇವರು ತಿಳಿದಿರುತ್ತಾರೆ. ಹಾಗಾಗಿ ಅಂಥ ದಾರಿ ಹುಡುಕಿ ಈ ರಾಶಿಯವರು ಹಣ ಗಳಿಸುತ್ತಾರೆ. ಖರ್ಚು ಮಾಡುವಾಗಲೂ, ಯೋಚಿಸಿ ಅಗತ್ಯವಿರುವ ವಸ್ತುಗಳಿಗೆ ಮಾತ್ರ ಹಣ ಖರ್ಚು ಮಾಡುತ್ತಾರೆ.
ಕುಂಭ ರಾಶಿ: ಕುಂಭ ರಾಶಿಯವರು ಯಾಕೆ ಹಣ ಗಳಿಸುವುದರಲ್ಲಿ ಉತ್ತಮರು ಅಂದ್ರೆ, ಇವರು ಬೇಜವಾಬ್ದಾರಿತನದಿಂದ ವರ್ತಿಸುವುದಿಲ್ಲ. ಬರೀ ಗಳಿಗೆ, ಉಳಿಕೆ ಮಾತ್ರವಲ್ಲದೇ, ಬಂಡವಾಳದ ಐಡಿಯಾವನ್ನು ಕೂಡ ಇವರು ತಿಳಿದಿರುತ್ತಾರೆ. ದುಡಿಮೆ ರೀತಿ ನೀತಿಯನ್ನು ಅರಿತಿರುತ್ತಾರೆ. ಗಳಿಸಿದ ಹಣವನ್ನು ಪೋಲು ಮಾಡುವ ಅಭ್ಯಾಸ ಇವರಿಗಿರುವುದಿಲ್ಲ.
ಮಕರ ರಾಶಿ: ಪರಿಶ್ರಮದಿಂದ ಹಣ ಗಳಿಸಿ, ಉಳಿಸಿ, ಬಳಸುವುದನ್ನು ಮಕರ ರಾಶಿಯವರು ಅರಿತಿರುತ್ತಾರೆ. ಇವರ ಗ್ರಹ ಶನಿಯಾಗಿರುವುದರಿಂದ, ಶನಿಯ ಕೃಪೆ ಕೂಡ ಇವರ ಮೇಲಿರುತ್ತದೆ. ಶ್ರಮಜೀವಿಯಾಗಿರುವ ಮಕರ ರಾಶಿಯವರು, ಪ್ರತೀ ಕೆಲಸದಲ್ಲೂ ಗೆಲುವು ಸಾಧಿಸುವವರೆಗೂ ಸುಮ್ಮನಿರುವುದಿಲ್ಲ.