Wednesday, July 2, 2025

Latest Posts

Horoscope: ಈ 4 ರಾಶಿಯವರಿಗೆ ಯಾವುದೇ ಭಯ ಬೇಡ: ಹಣಕಾಸಿನ ವಿಷಯದಲ್ಲಿ ಎಚ್ಚರ!

- Advertisement -

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ್ ಗುರೂಜಿ, ಜುಲೈ ತಿಂಗಳ ಮಾಸ ಭವಿಷ್ಯ ಹೇಳಿದ್ದಾರೆ. ಆಷಾಢ ಮಾಸದಲ್ಲಿ ಯಾವ ರಾಶಿಗೆ ಶುಭ..? ಯಾವ ರಾಶಿಗೆ ಅಶುಭ ಅಂತಲೂ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ.

ಮೇಷ : ಮೇಷ ರಾಶಿಯವರಿಗೆ ಈ ತಿಂಗಳು ನಷ್ಟದ ವಾತಾವರಣವೇ ಇರುತ್ತದೆ. ಏಕೆಂದರೆ ಮೇಷ ರಾಶಿಯವರಿಗೆ ಸದ್ಯ ಸಾಡೇಸಾಥಿ ನಡೆಯುತ್ತಿದ್ದು, ವ್ಯವಹಾರದಲ್ಲಿ ತುಂಬಾ ಅಡೆತಡೆಗಳಿದೆ. ಹಾಗಾಗಿ ಯಾವುದೇ ಕೆಲಸಕ್ಕೆ ಕೈ ಹಾಕಿದರೂ, ಹಿನ್ನಡೆ ಅನುಭವಿಸುತ್ತೀರಿ. ಅಲ್ಲದೇ ಕುಟುಂಬ ಕಲಹಗಳು ಆಗಲಿದ್ದು, ಮೇಷ ರಾಶಿಯವರು ತಾಳ್ಮೆಯಿಂದ ಇರುವುದು ಉತ್ತಮ.

ವೃಷಭ: ಮುಂಚೆಗಿಂತಲೂ ಲಾಭದಾಯಕ ಬದಲಾವಣೆ ನಿಮ್ಮ ಜೀವನದಲ್ಲಾಗಲಿದೆ. ಈ ರಾಶಿಯ ಅಧಿಪತಿಯಾಗಿರುವ ಶುಕ್ರಗ್ರಹ, ಜನ್ಮ ಸ್ಥಾನಕ್ಕೆ ಬರುತ್ತಾನೆ. ಹೀಗಿರುವಾಾಗ, ವೃಷಭ ರಾಶಿಯವರಿಗೆ ಜೀವನ ಉತ್ತಮವಾಗಿರಲಿದೆ. ಮನೆಯಲ್ಲಿ ಮದುವೆ, ಮುಂಜಿಗಳು ಸೇರಿ ಶುಭಕಾರ್ಯ ನಡೆಯಲಿದೆ.

ಮಿಥುನ: ಜೂನ್ ತಿಂಗಳಲ್ಲಿ ನಿಮಗಿರುವಷ್ಟು ನೆಮ್ಮದಿ, ಲಾಭ, ಜುಲೈ ತಿಂಗಳಲ್ಲಿ ಇರುವುದಿಲ್ಲ. ಹಣಕಾಸಿನ ಹಿನ್ನೆಡೆಯಾಗಿ, ನೆಮ್ಮದಿ ಹಾಳು, ಇತ್ಯಾದಿ ಸಮಸ್ಯೆ ಇದೆ. ತಂದೆ ಮಕ್ಕಳಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಯಾಗುವ ಸಾಧ್ಯತೆ ಇರುತ್ತದೆ.

ಕರ್ಕ: ಕರ್ಕ ರಾಶಿಯವರಿಗೆ ಗುರುಬಲವಿಲ್ಲ. ಶುಕ್ರ, ಗುರು ಶೂನ್ಯದಲ್ಲಿದ್ದರೂ, ಶನಿಯ ಯೋಗಫಲ ನಿಮಗೆ ಚೆನ್ನಾಗಿದೆ. ಗುರುಬಲವಿಲ್ಲದಿದ್ದರೂ, ಶುಕ್ರ ಬಲ ಉತ್ತಮವಾಗಿದೆ. ಹಾಗಾಗಿ ನೀವು ಜಾಗ, ಭೂಮಿ, ಮನ ಖರೀದಿಸಲು ಪ್ರಯತ್ನಿಸುತ್ತಿದ್ದರೆ, ಖರೀದಿಸಲು ಉತ್ತಮ ತಿಂಗಳಾಗಿದೆ.

ಸಿಂಹ: ಗುರುವಿನ ಯೋಗಫಲ ಉತ್ತಮವಾಗಿರುವ ಕಾರಣಕ್ಕೆ, ನಿಮಗೆ ಈ ತಿಂಗಳು ಶುಭಫಲವಿದೆ. ಎಲ್ಲ ಕೆಲಸದಲ್ಲೂ ಬೆಂಬಲ ಸಿಗಲಿದೆ. ಕೈ ಹಾಕಿದ ಕೆಲಸ ಸುಲಲಿತವಾಗಿ ಆರಂಭವಾಗುತ್ತದೆ. ಆದರೆ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸುವುದು ಅತ್ಯಗತ್ಯ.

ಕನ್ಯಾ : ಶನಿಯ ಸಪ್ತಮ ದೃಷ್ಟಿ ನಿಮ್ಮ ಮೇಲೆ ಬೀಳಲಿದೆ. ಆದರೆ ರವಿ ಮತ್ತು ಬುಧನ ಯೋಗಫಲ ಚೆನ್ನಾಗಿದೆ. ದೃಷ್ಟಿ ದೋಷ ಹೆಚ್ಚಾಗಲಿದೆ. ಮಾತನಾಡುವಾಗ ಗಮನಿರಲಿ, ನಿಮ್ಮ ಮಾತನ್ನು ತಿರುಗಿಸಿ, ನಿಮ್ಮ ನೆಮ್ಮದಿ ಹಾಳು ಮಾಡಲು ಜನ ಕಾಾಯುತ್ತಿದ್ದಾರೆ.

ಉಳಿದ ರಾಶಿಯ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ. ಸಮಸ್ಯೆಗಳಿಗೆ ಇದರಲ್ಲಿ ಪರಿಹಾರಗಳನ್ನೂ ವಿವರಿಸಲಾಗಿದೆ.

- Advertisement -

Latest Posts

Don't Miss