Horoscope: ಇಂದು ನಾವು ಯಾವ 5 ರಾಶಿಯವರಿಗೆ ಅಡುಗೆ ಮಾಡಿ, ಉಣ ಬಡಿಸಲು ಬಲು ಇಷ್ಟ ಅಂತಾ ಹೇಳಲಿದ್ದೇವೆ.
ವೃಷಭ: ವೃಷಭ ರಾಶಿಯವರಿಗೆ ಅಡುಗೆ ಮಾಡುವುದೆಂದರೆ ಬಲು ಇಷ್ಟ. ಆದರೆ ಇವರು ಮಾಡರ್ನ್ ಅಡುಗೆಗಿಂತ ಹೆಚ್ಚಾಗಿ ಸಾಂಪ್ರದಾಯಿಕ ಅಡುಗೆಯನ್ನು ಬಲು ರುಚಿಯಾಗಿ ತಯಾರಿಸುತ್ತಾರೆ. ಅದರಲ್ಲೂ ಸಿಹಿ ತಿಂಡಿ ತಯಾರಿಸುವುದರಲ್ಲಿ ಇವರು ನಿಸ್ಸೀಮರು.
ಕರ್ಕ: ಕರ್ಕ ರಾಶಿಯವರು ತಮ್ಮ ಪ್ರೀತಿ ಪಾತ್ರರನ್ನು ಗೆಲ್ಲುವು ಆಹಾರದ ಮೂಲಕ ಎಂಬ ಸತ್ಯವನ್ನು ಅರಿತಿರುತ್ತಾರೆ. ಹಾಗಾಗಿ ಪ್ರೀತಿಯಿಂದ ಅಡುಗೆ ಮಾಡಿ ಬಡಿಸುವ ಮನಸ್ಸು ಇವರದ್ದಾಗಿರುತ್ತದೆ.
ಸಿಂಹ: ಸಿಂಹ ರಾಶಿಯವರು ಕೂಡ ಅಡುಗೆ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ. ಆಹಾರ ಪ್ರಿಯರಾಗಿರುವ ಸಿಂಹ ರಾಶಿಯವರು, ತಮಗೆ ಇಷ್ಟವಾಗುವಂತೆ ಅಲ್ಲದೇ, ಇತರರಿಗೂ ಮೆಚ್ಚುಗೆಯಾಗುವಂಥ ಅಡುಗೆ ತಯಾರಿಸುತ್ತಾರೆ.
ಕನ್ಯಾ: ಕನ್ಯಾ ರಾಶಿಯವರು ಯಾವುದೇ ಕೆಲಸ ಮಾಡಿದ್ರೂ, ಅದರಲ್ಲಿ ಸಕ್ಸಸ್ ಕಾಣಲೇಬೇಕು ಎಂದು ಎಲ್ಲ ಶ್ರಮ ಹಾಕಿ ಕೆಲಸ ಮಾಡುತ್ತಾರೆ. ಅದೇ ರೀತಿ ಅಡುಗೆ ಕಲೆ ಕೂಡ ತುಂಬಾ ಚೆನ್ನಾಗಿ ಕಲಿತಿರುತ್ತಾರೆ.
ತುಲಾ: ತುಲಾ ರಾಶಿಯವರು ಶಿಸ್ತಿನ ಸಿಪಾಯಿಗಳು. ಚಂದವಾಗಿ, ಸರಳವಾಗಿ ರೆಡಿಯಾಗೋದು, ಕ್ಲೀನ್ ಆಗಿರೋದು ಅಂದ್ರೆ ಇವರಿಗೆ ಅಚ್ಚುಮೆಚ್ಚು. ಅದೇ ರೀತಿ ಇವರು ಅಡುಗೆ ಮಾಡುವುದರಲ್ಲೂ ನಿಸ್ಸೀಮರು. ರುಚಿಯಾಗಿ ಅಡುಗೆ ಮಾಡುವ ತುಲಾ ರಾಶಿಯವರು, ಕೇಟರಿಂಗ್ ಬ್ಯುಸಿನೆಸ್ ಮಾಡಿದ್ರೂ ಸಕ್ಸಸ್ ಆಗ್ತಾರೆ.




