Horoscope: 12 ರಾಶಿಗಳಲ್ಲಿ ಕೆಲವು ರಾಶಿಗಳಿಗೆ ಕೆಲವು ಕೆಲಸಗಳು ಸರಿಹೊಂದುತ್ತದೆ. ಅವರಿಗೆ ಹಿಡಿಸದ ಕೆಲಸವನ್ನು ಮಾಡಿದಾಗ, ಆ ರಾಶಿಯವರಿಗೆ ಆ ಕೆಲಸದಿಂದ ಯಾವುದೇ ಲಾಭವಾಗುವುದಿಲ್ಲ. ಹಾಗಾಗಿ ಯಾವುದೇ ಕೆಲಸ ಮಾಡುವ ಮುನ್ನ, ಅಥವಾ ಕಲಿಕೆಗೂ ಮುನ್ನ ಜಾತಕ ನೋಡಿ ಅಂತಾ ಹಿರಿಯರು ಹೇಳ್ತಾರೆ. ಹಾಗಾಗಿ ನಾವಿಂದು ಯಾವ ರಾಶಿಯವರಿಗೆ ಶಿಕ್ಷಕ ವೃತ್ತಿ ಉತ್ತಮವಾಗಿ ಮ್ಯಾಚ್ ಆಗುತ್ತದೆ ಅಂತಾ ಹೇಳಲಿದ್ದೇವೆ.
ಮೇಷ: ಮೇಷ ರಾಶಿಯವರು ಬುದ್ಧಿವಂತಿಕೆಗೆ ಹೆಸರುವಾಸಿ. ಹಾಗಾಗಿ ಇವರು ಮಕ್ಕಳಿಗೆ ಶಿಕ್ಷಕ ನೀಡುವಲ್ಲಿ ಖಂಡಿತ ಯಶಸ್ವಿ ಎನ್ನಿಸಿಕ“ಳ್ಳುತ್ತಾರೆ. ಅಲ್ಲದೇ, 1 ವಿಷಯದ ಬಗ್ಗೆ ವಿವರವಾಗಿ ಜ್ಞಾನ ಹಂಚುವ ಇವರ ಸ್ವಭಾವ ಮಕ್ಕಳಿಗೆ ಖಂಡಿತ ಹಿಡಿಸುತ್ತದೆ.
ಮಿಥುನ: ಮಿಥುನ ರಾಶಿಯವರ ಪ್ರಮುಖ ವಿಚಾಾರ ಅಂದ್ರೆ, ಎದುರಿನವರಿಗೆ ಇವರು ಸುಲಭವಾಗಿ ವಿಷಯವನ್ನು ವಿವರಿಸುತ್ತಾರೆ. ಹಾಗಾಗಿ ವಿದ್ಯಾರ್ಥಿಗಳು ಬೇಗ ವಿಷಯವನ್ನು ಅರ್ಥ ಮಾಡಿಕ“ಳ್ಳುತ್ತಾರೆ. ಹಾಗಾಗಿ ಇವರು ಶಿಕ್ಷಕರಾಗಲು ಸದಾ ಅರ್ಹರು.
ಕನ್ಯಾ: ಕನ್ಯಾ ರಾಶಿಯವರು ಸದಾ ಕಾಲ ಎಲ್ಲೆಡೆಯಿಂದ ಜ್ಞಾನ ಪಡೆಯಲು ಪ್ರಯತ್ನಿಸುತ್ತಲೇ ಇರುತ್ತಾರೆ. ಮತ್ತು ಆ ಬಗ್ಗೆ ವಿವರಿಸುವುದು ಕೂಡ ಇವರಿಗೆ ಇಷ್ಟದ ಕೆಲಸ. ಅಲ್ಲದೇ, ಎದುರಿನವರಿಗೆ ಬೇಗ ತಿಳಿಯುವಂತೆ ಕಲಿಸುವುದು ಕೂಡ ಇವರಿಗೆ ತಿಳಿದಿದೆ.
ತುಲಾ: ತುಲಾ ರಾಶಿಯವರು ತಮ್ಮ ಮಾತಿನಿಂದಲೇ ಎದುರಿನವರ ಗಮನ ಸೆಳೆಯುವವರು. ಹಾಗಾಗಿ ಇವರಿಗೆ ಶಿಕ್ಷಕ ವೃತ್ತಿ ಅತೀ ಉತ್ತಮ ವೃತ್ತಿ ಎನ್ನಬಹುದು. ತಾಳ್ಮೆಯಿಂದ ಹೇಳಿಕ“ಡುವ ಗುಣ ಇವರಿಗಿದ್ದು, ವಿದ್ಯಾರ್ಥಿಗಳ ಜತೆ ಸಾಮರಸ್ಯದಿಂದಿರುತ್ತಾರೆ.
ಧನು: ಧನು ರಾಶಿಯವರು ಬುದ್ಧಿವಂತರಾಗಿದ್ದು ತಾಳ್ಮೆ ಇರುವವರಾಗಿರುತ್ತಾರೆ. ಕೋಪ ಬಂದಾಗ, ಅದನ್ನು ತಡೆಯಲು ಆಗದಿದ್ದರೂ ಸಹ, ಏನಾದರೂ ಕಲಿಸುವ, ಹೇಳಿಕ“ಡುವ ಸಮಯ ಬಂದಾಗ, ಎಲ್ಲವನ್ನೂ ಬದಿಗಿರಿಸಿ, ತಾಳ್ಮೆಯಿಂದ ಕಲಿಸುತ್ತಾರೆ. ಇವರಿಗೆ ಹಲವು ವಿಷಯದ ಬಗ್ಗೆ ಜ್ಞಾನವಿರುವ ಕಾರಣ, ಇವರು ಅತ್ಯುತ್ತಮ ಶಿಕ್ಷಕರಾಗಬಲ್ಲರು.