Horoscope: ನೀವು ನೋಡಿರಬಹುದು. ಕೆಲವರಿಗೆ ಬೇಗ ದೃಷ್ಟಿಯಾಗುತ್ತದೆ. ಎಲ್ಲಿ ಹೋದ್ರೂ, ಏನು ತಿಂದ್ರೂ, ಹೇಂಗಿದ್ರು ಅವರಿಗೆ ಬೇಗ ಆರೋಗ್ಯ ಹಾಳಾಗುತ್ತದೆ. ಉಡುಪು ಹಾಳಾಗುತ್ತದೆ. ಹೆಚ್ಚು ಜಗಳವಾಗುತ್ತದೆ. ಇದೆಲ್ಲ ಆಗುವುದು ಇನ್ನ“ಬ್ಬರ ದೃಷ್ಟಿ ತಾಕುವ ಕಾರಣಕ್ಕೆ. ಹಾಗಾದ್ರೆ ಯಾವ ರಾಶಿಯವರಿಗೆ ಬೇಗ ದೃಷ್ಟಿಯಾಗುತ್ತದೆ ಅಂತಾ ತಿಳಿಯೋಣ ಬನ್ನಿ..
ವೃಷಭ ರಾಶಿ: ವೃಷಭ ರಾಶಿಯವರಿಗೆ ಹೆಚ್ಚಿನದಾಗಿ ಆರೋಗ್ಯ ಸಮಸ್ಯೆಯೇ ಕಾಡುತ್ತದೆ. ಈ ರಾಶಿಯವರು ಅಂದವಾಗಿರುತ್ತಾರೆ. ಕಪ್ಪಗಿದ್ದರೂ ಲಕ್ಷಣವಾಗಿರುತ್ತಾರೆ. ಇದರಿಂದಲೇ ಇವರಿಗೆ ದೃಷ್ಟಿಯಾಗುವ ಸಾಧ್ಯತೆ ಹೆಚ್ಚು.
ಮಿಥುನ ರಾಶಿ: ಮಿಥುನ ರಾಶಿಯವರಿಗೆ ಶ್ರೀಮಂತಿಕೆಯ ಲುಕ್ ಇರುತ್ತದೆ. ಚೆಂದವಾಗಿ ಡ್ರೆಸ್ ಮಾಡಿಕ“ಂಡರೆ ಇವರು ಶ್ರೀಮಂತರಾಗಿಯೇ ಕಾಣುತ್ತಾರೆ. ಇವರ ಬಳಿ ಹಣ ಇದ್ದರೂ ಇಲ್ಲದಿದ್ದರೂ ಸದಾಕಾಲ ಟಿಪ್‌ಟಾಪ್ ಆಗಿಯೇ ಇರುತ್ತಾರೆ. ಹಾಗಾಗಿ ಜನ ಇವರು ಜಾಲಿ ಮನುಷ್ಯನೆಂದು ಇವರ ಖುಷಿಯ ಮೇಲೆ ದೃಷ್ಟಿ ಹಾಕುತ್ತಾರೆ.
ಸಿಂಹ ರಾಶಿ: ಸಿಂಹ ರಾಶಿಯವರು ನಾಯಕತ್ವ ಗುಣ ಉಳ್ಳವರು. ಹಾಗಾಗಿ ರಾಜರಂತೆ ಇರುತ್ತಾರೆ. ಇವರು ಜೀವಿಸುವ ರೀತಿಗೇ ಜನ ಇವರ ಮೇಲೆ ದೃಷ್ಟಿ ಹಾಕುತ್ತಾರೆ.
ಕನ್ಯಾ ರಾಶಿ: ಕನ್ಯಾ ರಾಶಿಯವರು ಏನು ಇಲ್ಲದಿದ್ದರೂ ಎಲ್ಲವೂ ಇರುವಂತೆ ತೋರಿಸಿಕ“ಳ್ಳುತ್ತಾರೆ. ಎಲ್ಲರೆದುರು, ತಾನು ಖುಷಿಯಾಗಿದ್ದೇನೆ ಎಂಬಂತೆ ಇರುತ್ತಾರೆ. ಜೀವನದಲ್ಲಿ ಸಮಸ್ಯೆಯೇ ಇಲ್ಲವೆನ್ನುವ ರೀತಿ ಇರುತ್ತಾರೆ. ಹಾಗಾಗಿ ಇವರ ಮೇಲೆ ಜನರ ದೃಷ್ಟಿ ಬೀಳುವುದು ಹೆಚ್ಚು.
ಕುಂಭ ರಾಶಿ: ಕುಂಭ ರಾಶಿಯವರು ಜೀವನ ಇದ್ದ ಹಾಗೆ ಅಡ್ಜಸ್ಟ್ ಮಾಡಿಕ“ಳ್ಳುತ್ತಾರೆ. ಇದ್ದುದರಲ್ಲೇ ಖುಷಿಯಾಗಿರುತ್ತಾರೆ. ಹಾಗಾಗಿ ಜನ ಇವರು ಜೀವನದಲ್ಲಿ ತುಂಬ ಖುಷಿ ಖುಷಿಯಾಗಿ ಇರುತ್ತಾರೆಂದು ದೃಷ್ಟಿ ಹಾಕುವುದು ಹೆಚ್ಚು.