Friday, December 13, 2024

Latest Posts

Horoscope: ಜೀವನದಲ್ಲಿ ಎಂದಿಗೂ ಸೋಲೋಪ್ಪಿಕೊಳ್ಳದ ರಾಶಿಯವರು ಇವರು

- Advertisement -

Horoscope: ಕೈಯಲ್ಲಿರುವ ಎಲ್ಲ ಬೆರಳುಗಳು ಹೇಗೆ ಸಮಾನವಾಗಿರುವುದಿಲ್ಲವೋ, ಒಂದು ಸಣ್ಣ, ಒಂದು ದೊಡ್ಡದಾಗಿರುತ್ತದೆಯೋ, ಅದೇ ರೀತಿ ಮನುಷ್ಯರೆಲ್ಲರೂ ಒಂದೇ ರೀತಿ ಇರುವುದಿಲ್ಲ. ಒಬ್ಬೊಬ್ಬರ ಗುಣ, ಸ್ವಭಾವ ಒಂದೊಂದು ರೀತಿ ಇರುತ್ತದೆ. ಅದೇ ರೀತಿ ಬೇರೆ ಬೇರೆ ರಾಶಿಯವರದ್ದೂ ಒಂದೊಂದು ಗುಣವಿರುತ್ತದೆ. ಹಾಗಾಗಿ ನಾವಿಂದು ಯಾವ ರಾಶಿಯವರು ಜೀವನದಲ್ಲಿ ಬಹುಬೇಗ ಸೋಲೋಪ್ಪಿಕೊಳ್ಳುವುದಿಲ್ಲ. ಸೋತರೂ ಪದೇ ಪದೇ ಪ್ರಯತ್ನಿಸಿ, ಗೆಲುವಿನೆಡೆಗೆ ಸಾಗುತ್ತಾರೆ ಅಂತಾ ತಿಳಿಯೋಣ ಬನ್ನಿ..

ಜೀವನದಲ್ಲಿ ಬಹುಬೇಗ ಸೋಲನ್ನಪ್ಪಲು ಬಯಸದ ರಾಶಿಯವರು ಕುಂಭ ರಾಶಿಯವರು. ಅದಕ್ಕೆ ಕುಂಭ ರಾಶಿಯವರನ್ನು ಹುಂಬರು ಅಂತಲೂ ಕರೆಯುತ್ತಾರೆ. ಅಂದ್ರೆ ಇವರು ಅದೆಷ್ಟು ಹಠಮಾರಿಗಳು ಎಂದರೆ, ಬಹುಬೇಗ ಸೋಲಲು ಇಚ್ಛಿಸುವುದಿಲ್ಲ. ಮರಳಿ ಪ್ರಯತ್ನವ ಮಾಡು ಎನ್ನವ ಹಾಗೆ, ತಮ್ಮ ಪ್ರಯತ್ನ ತಾವು ಮಾಡುತ್ತಾರೆ.

ಮತ್ತು ಇವರು ಮಾಡುವ ಕೆಲಸದಲ್ಲಿ ಅಷ್ಟೇ ಶ್ರಮವಿರುತ್ತದೆ. ವಿದ್ಯಾಭ್ಯಾಸದಲ್ಲಿ, ಕೆಲಸದ ವಿಷಯದಲ್ಲಿ ಹೀಗೆ ಯಾವುದೇ ವಿಷಯದಲ್ಲಿ ತಮ್ಮಿಂದ ಸಾಧ್ಯವಾದಷ್ಟು ಕಲಿತು, ಮುಂದೆ ಬರಲು ಪ್ರಯತ್ನಿಸುತ್ತಾರೆ. ಆ ಪ್ರಯತ್ನದಲ್ಲಿ ಎಷ್ಟು ಬಾರಿ ಸೋತರೂ, ಗೆಲ್ಲುವವರೆಗೂ ಬಿಡದ ರಾಶಿಯವರು ಅಂದ್ರೆ ಕುಂಭ ರಾಶಿಯವರು.

ಇನ್ನು ಯಾವುದೇ ಕ್ಷೇತ್ರದಲ್ಲಿ ಕುಂಭ ರಾಶಿಯವರಿದ್ದರೆ, ಅವರು ಪದೇ ಪದೇ ಸೋತು, ಅವಮಾನವನ್ನು ಅನುಭವಿಸಿ, ಮುಂದೆ ಸನ್ಮಾನ ಪಡೆಯುವವರಾಗಿರುತ್ತಾರೆ. ಹಾಗಾಗಿ ಎಂದಿಗೂ ಕುಂಭ ರಾಶಿಯವರನ್ನು ಅನುಮಾನಿಸಬೇಡಿ, ಅವಮಾನಿಸಬೇಡಿ.

- Advertisement -

Latest Posts

Don't Miss