Horoscope: ಇಂದಿನ ಕಾಲದಲ್ಲಿ ಹಣ ಅಂದ್ರೆ ಸಂಬಂಧ, ಸ್ನೇಹ, ಪ್ರೀತಿ ಅನ್ನೋ ರೀತಿಯಾಗಿದೆ. ಆದ್ರೆ ಈ ಕಾಲದಲ್ಲೂ, ಹಣಕ್ಕಿಂತ ಸಂಬಂಧಕ್ಕೆ, ಪ್ರೀತಿ, ಕಾಳಜಿಗೆ ಹೆಚ್ಚು ಬೆಲೆ ಕೊಡುವ ಜನ ಅಪರೂಪಕ್ಕಾದ್ರೂ ಸಿಗುತ್ತಾರೆ. ಅಂಥ ರಾಶಿಯವರ ಬಗ್ಗೆ ನಾವಿವತ್ತು ಹೇಳಲಿದ್ದೇವೆ.
ಕಟಕ ರಾಶಿ: ಕಟಕ ರಾಶಿಯವರು ಹಣ, ಆಸ್ತಿಗಿಂತ ಹೆಚ್ಚು ಪ್ರೀತಿ, ಕಾಳಜಿಗೆ ಬೆಲೆ ಕೊಡುತ್ತಾರೆ. ಅವರಿಗೋಸ್ಕರ ಅವರ ಪ್ರೀತಿ ಪಾತ್ರರು ಹಣ ಖರ್ಚು ಮಾಡಬೇಕು ಅಂತಿಲ್ಲ. ಬದಲಾಗಿ, ಅವರೊಂದಿಗೆ ಹೆಚ್ಚು ಸಮಯ ಕಳಿಯಬೇಕು. ಪ್ರೀತಿಯಿಂದ ಮಾತನಾಡಬೇಕು ಮತ್ತು ಆರೋಗ್ಯ ಸರಿ ಇಲ್ಲದೇ ಇದ್ದಾಗ, ಕಾಳಜಿಯಿಂದ ನೋಡಬೇಕು.
ಸಿಂಹ ರಾಶಿ: ಸಿಂಹ ರಾಶಿಯವರು ಹಣಕ್ಕೆ ಹೆಚ್ಚು ಬೆಲೆ ಕೊಡುವುದಿಲ್ಲ. ಅವರಿಗೆ ನಂಬರ್ ಒನ್ ಸ್ಥಾನದಲ್ಲಿ ಇರಬೇಕು. ತಾವೇ ಮುಂದಿರಬೇಕು ಅನ್ನೋ ಆಸೆ ಇರುತ್ತದೆ. ಆದರೆ ಪ್ರೀತಿಯ ವಿಷಯ ಬಂದರೆ, ಹಣಕ್ಕಿಂತ ಪ್ರೀತಿಗೆ ಹೆಚ್ಚು ಬೆಲೆ ನೀಡುತ್ತಾರೆ. ಸಂಗಾತಿಯ ಭಾವನೆಯನ್ನು ಗೌರವಿಸುತ್ತಾರೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ಇರುತ್ತದೆ. ಅದೇ ರೀತಿ, ಪ್ರೀತಿ ಪಾತ್ರರಿಗೆ ಏನೂ ಕಡಿಮೆಯಾಗದಂತೆ ನೋಡಿಕೊಳ್ಳಬೇಕು ಅನ್ನುವ ಭಾವನೆ ಇರುತ್ತದೆ. ಬರೀ ಜೀವನ ಸಂಗಾತಿ ಅಷ್ಟೇ ಅಲ್ಲ. ತಂದೆ ತಾಯಿ, ಅಕ್ಕ- ತಂಗಿ, ತಮ್ಮ ಎಲ್ಲರಿಗೂ ಪ್ರೀತಿ, ಕಾಳಜಿಯಿಂದ ನೋಡುತ್ತಾರೆ.
ಕುಂಭ ರಾಶಿ: ಕುಂಭ ರಾಶಿಯವರು ಹಣಕ್ಕೆ ಹೆಚ್ಚು ಬೆಲೆ ಕೊಡುವುದಿಲ್ಲ. ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ನಿಯಮ ಅವರದ್ದು. ಹಾಗಾಗಿಯೇ ಲಕ್ಷ್ಮೀ ತಾನಾಗಿಯೇ ಒಲಿದು ಬರುತ್ತಾಳೆ. ಇನ್ನು ಇವರು ತಮ್ಮವರಿಂದ ಏನನ್ನೂ ಬಯಸದೇ, ಪ್ರೀತಿ ಕಾಳಜಿಯನ್ನಷ್ಟೇ ಬಯಸುವ ಶುದ್ಧ ಮನಸ್ಸಿನವರಾಗಿರುತ್ತಾರೆ.