Horoscope: ಒಂದ“ಂದು ರಾಶಿಯವರದ್ದು ಒಂದ“ಂದು ಸ್ವಭಾವ. ಕೆಲವರಿಗೆ ಕೋಪ ಹೆಚ್ಚು, ಕೆಲವರಿಗೆ ತಾಳ್ಮೆ ಹೆಚ್ಚು, ಕೆಲವರು ಶಾಂತ ಸ್ವಭಾವದವರು, ಇನ್ನು ಕೆಲವರು ಮಾತಿನ ಮಲ್ಲರು. ಅದೇ ರೀತಿ ಇಂದು ನಾವು ಯಾವ ರಾಶಿಯವರು ಅಗತ್ಯಕ್ಕಿಂತ ಯೋಚಿಸುತ್ತಾರೆ ಅಂತಾ ಹೇಳಲಿದ್ದೇವೆ.
ಕರ್ಕ: ಕರ್ಕ ರಾಶಿಯವರು ಅತ್ಯಂತ ಸೂಕ್ಷ್ಮ ಜೀವಿಗಳು. ಪ್ರತಿ ವಿಚಾರವನ್ನು ಹೆಚ್ಚು ಯೋಚಿಸುವ ಗುಣ ಇವರಿಗಿರುತ್ತದೆ. ಆದರೆ ಇವರು ಯೋಚನೆ ಮೂಲಕವೇ ಹೆಚ್ಚು ಸಮಯ ವ್ಯರ್ಥ ಮಾಡುತ್ತಾರೆ. ತಾವು ವ್ಯರ್ಥ ಯೋಚನೆ ಮಾಡಿ, ಸುಮ್ಮನೆ ಸಮಯ ಹಾಳು ಮಾಡಿದ್ದು ಎಂದು ಅರಿಯುವ ವೇಳೆಗೆ, ಕಾಲ ಮಿಂಚಿರುತ್ತದೆ.
ವೃಶ್ಚಿಕ: ವೃಶ್ಚಿಕ ರಾಶಿಯವರು ಗಂಭೀರ ಸ್ವಭಾವದವರು. ಇವರು ಇಲ್ಲ ಸಲ್ಲದ ವಿಷಯಗಳ ಬಗ್ಗೆ ಯೋಚಿಸುವುದಕ್ಕಿಂತಲೂ ಹೆಚ್ಚು, ಜೀವನದ ಬಗ್ಗೆ, ಭವಿಷ್ಯದ ಬಗ್ಗೆ, ರಕ್ಷಣಾತ್ಮಕವಾಗಿ ಹೇಗೆ ಇರಬೇಕು ಎಂಬ ಬಗ್ಗೆ ಹೆಚ್ಚು ಯೋಚಿಸುತ್ತಾರೆ. ಅದರಲ್ಲೇ ಬುದ್ಧವಂತಿಕೆ ತೋರಿಸುತ್ತಾರೆ. ಸಮಯ ವ್ಯರ್ಥ ಮಾಡುವುದಕ್ಕಿಂತ, ಯೋಚಿಸಿದ ರೀತಿ ಇರುವಂತೆ ಇವರು ಪ್ರಯತ್ನಿಸುತ್ತಾರೆ.
ಮಕರ: ಮಕರ ರಾಶಿಯವರ ಯೋಚನೆ ಅತ್ಯುತ್ತಮವಾಗಿರುತ್ತದೆ. ಇವರು ಜೀವನದಲ್ಲಿ ಹೇಗೆ ಯಶಸ್ಸು ಕಾಣಬೇಕು. ಜೀವನವನ್ನು ಇನ್ನಷ್ಟು ಉತ್ತಮವಾಗಿರಿಸಲು ಏನು ಮಾಡಬೇಕು..? ಏನು ಮಾಡಿದರೆ ಯಶಸ್ಸು ಗಳಿಸುವುದು ಸುಲಭವಾಗುತ್ತದೆ ಅನ್ನೋ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ. ಆದರೆ ಸಮಸ್ಯೆ ಏನು ಎಂದರೆ, ಇವರು ಸಂಸಾರಸ್ಥರಾಗಿದ್ದಲ್ಲಿ, ಕೆಲಸದ ಬಗ್ಗೆಯೇ ಹೆಚ್ಚು ಯೋಚಿಸಿ, ಪರಿವಾರಕ್ಕೆ ಸಮಯ ಕಡಿಮೆ ನೀಡುತ್ತಾರೆ.
ಮೀನ: ಮೀನ ರಾಶಿಯವರು ಕೂಡ, ಕರ್ಕ ರಾಶಿಯವರಂತೆ ಸೂಕ್ಷ್ಮ ಮನಸ್ಸಿನವರು. ಯಾರಾದರೂ ಏನಾದರೂ ಹೇಳಿದರೆ, ಅದನ್ನು ಮನಸ್ಸಿಗೆ ಹಚ್ಚಿಕ“ಳ್ಳುವವರು. ಹಾಗಾಗಿ ಇವರು ಕೆಲವು ವಿಚಾರಗಳಿಗೆ ಹೆಚ್ಚು ತಲೆಕೆಡಿಸಿಕ“ಳ್ಳುತ್ತಾರೆ.