Horoscope: ಕೆಲವು ರಾಶಿಯವರಿಗೆ ಕೋಪ ಮಾಡಿಕೊಳ್ಳುವ ಸ್ವಭಾವ. ಮತ್ತೆ ಕೆಲ ರಾಶಿಯವರಿಗೆ ಸದಾ ಕಾಲ ನಗು ನಗುತ್ತಲಿರುವ ಸ್ವಭಾವ, ಇನ್ನು ಕೆಲವರಿಗೆ ಇನ್ನೊಬ್ಬರ ಬಗ್ಗೆ ಬರೀ ನೆಗೆಟಿವ್ ಆಗಿಯೇ ಮಾತನಾಡುವ ಸ್ವಭಾವ. ಹೀಗೆ ಒಂದೊಂದು ರಾಶಿಯವರಿಗೆ ಒಂದೊಂದು ಸ್ವಭಾವವಿರುತ್ತದೆ. ಅದೇ ರೀತಿ ಇಂದು ನಾವು ಯಾವ ರಾಶಿಯವರು ವಿಶೇಷ ವ್ಯಕ್ತಿತ್ವ ಹೊಂದಿರುತ್ತಾರೆ ಎಂದು ಹೇಳಲಿದ್ದೇವೆ.
ಸಿಂಹ: ಸಿಂಹ ರಾಶಿಯವರು ನಾಯಕತ್ವದ ಗುಣ ಹೊಂದಿರುವವರು. ಸ್ವಭಾವದಲ್ಲಿ ಸ್ವಲ್ಪ ಗಾಂಭೀರ್ಯವೇ ಇದ್ದ ಕಾರಣ ಇವರು ವಿಶೇಷ ವ್ಯಕ್ತಿ ಎನ್ನಿಸಿಕೊಳ್ಳುತ್ತಾರೆ. ಅಲ್ಲದೇ, ಸಿಂಹ ರಾಶಿಯವರ ಮುಖ ಕೂಡ ಆಕರ್ಷಕವಾಗಿರುತ್ತದೆ.
ತುಲಾ: ತುಲಾ ರಾಶಿಯವರು ಬೇರೆಯವರನ್ನು ಆಕರ್ಷಿಸುವುದೇ ತಮ್ಮ ಮಾತಿನಿಂದ. ತಮಾಷೆ ಮಾಡುತ್ತ, ಮಾತನಾಡುತ್ತ, ಇನ್ನೊಬ್ಬರ ಮನಸ್ಸಿಗೆ ಹತ್ತಿರವಾಗುವ ಇವರು, ತುಂಬಾ ಸೂಕ್ಷ್ಮ ಸ್ವಭಾವದವರು. ಹಾಗಾಗಿ ಇವರೊಂದಿಗೆ ಮಾತನಾಡುವಾಗ, ಹುಷಾರಾಗಿರಬೇಕು. ನೀವು ಇವರ ತಮಾಷೆಯ ಮಾತು, ಆಕರ್ಷಕ ವ್ಯಕ್ತಿತ್ವವನ್ನು ಕಂಡು ಇವರನ್ನು ಅಷ್ಟು ಸಲೀಸಾಗಿ ತೆಗೆದುಕೊಳ್ಳುವಂತಿಲ್ಲ. ಯಾಕಂದ್ರೆ ಇವರ ಮಾತು, ನಡತೆ ಎಷ್ಟು ಆಕರ್ಷಕವೋ, ಇವರ ಮೌನ ಅದಕ್ಕಿಂತ ಹೆಚ್ಚು ಆಘಾತಕಾರಿಯಾಗಿರುತ್ತದೆ.
ಧನು: ಧನು ರಾಶಿಯವರು ಯಾಕೆ ವಿಶೇಷವೆಂದರೆ, ಇವರಿಗೆ ತಾಳ್ಮೆ ಹೆಚ್ಚು. ಅಲ್ಲದೇ, ತಮ್ಮ ಲೋಕದಲ್ಲೇ ಇವರು ಇರುತ್ತಾರೆ. ಇನ್ನೊಬ್ಬರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಪ್ರಕೃತಿಗೆ ಹೆಚ್ಚು ಹತ್ತಿರವಾಗಿರುವ ಇವರು ಜಾಲಿ ಸ್ವಭಾವದವರು. ಅಲ್ಲದೇ, ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳುವಲ್ಲಿ ಆಸಕ್ತಿ ಹೊಂದಿರುವ ಇವರು, ಬುದ್ಧಿವಂತರಾಗಿರುತ್ತಾರೆ. ಅಲ್ಲದೇ, ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಹಾಗಾಗಿ ವಿಶೇಷರೆನ್ನಿಸಿಕೊಳ್ಳುತ್ತಾರೆ.
ಮೀನ: ಮೌನ ಸ್ವಭಾವದ, ಭಾವನಾತ್ಮಕ ಜೀವಿ ಮೀನ ರಾಶಿಯವರು. ಇನ್ನೊಬ್ಬರ ಮನಸ್ಸಿಗೆ ನೋವು ಮಾಡುವ ಯಾವುದೇ ವಿಷಯ ಇವರಿಗೆ ಹಿಡಿಸುವುದಿಲ್ಲ. ಇವರೊಂದಿಗೆ ಸ್ನೇಹ ಬೆಳೆಸುವವರನ್ನು ಅಥವಾ ಆತ್ಮೀಯವಾಗಿ ಇರುವವರನ್ನು, ಸದಾ ಪ್ರೀತಿ ಕಾಳಜಿಯಿಂದ ನೋಡಿಕೊಳ್ಳುವ ಸ್ವಭಾವ ಮೀನ ರಾಶಿಯವರಿಗೆ ಇರುತ್ತದೆ. ಹಾಗಾಗಿ ಇವರು ವಿಶೇಷ ವ್ಯಕ್ತಿ ಎನ್ನಿಸುತ್ತಾರೆ.