Horoscope: ಈ ಬಾರಿಯ ಯುಗಾದಿ ರಾಶಿ ಭವಿಷ್ಯವನ್ನು ಖ್ಯಾತ ಜ್ಯೋತಿಷಿಗಳಾದ ವೇಣುಗೋಪಾಲ ಶರ್ಮ ಅವರು ಹೇಳಿದ್ದು, 12 ರಾಶಿಗಳ ಫಲಾಫಲ ಹೇಗಿದೆ ಎಂದು ವಿವರಿಸಿದ್ದಾರೆ. ಅದರಲ್ಲಿ ಧನಸ್ಸು ರಾಶಿಯವರಿಗೆ ಈ ವರ್ಷ ಹೇಗಿರಲಿದೆ. ಅವರ ಜೀವನದಲ್ಲಿ ಏನೆಲ್ಲಾ ಬದಲಾವಣೆಗಳಾಗಲಿದೆ ಅಂತಾ ತಿಳಿಯೋಣ ಬನ್ನಿ.
ಧನಸ್ಸು ರಾಶಿಯವರು ವಾಹನ ಖರೀದಿಸುವಾಗ ಯಾಮಾರುವ ಸಾಧ್ಯತೆ ಇರುತ್ತದೆ. ವಾಹನ ಖರೀದಿಸಿ, ಪದೇ ಪದೇ ರಿಪೇರಿಗೆ ಕೊಡಬಹುದಾದ ಪರಿಸ್ಥಿತಿ ಬರಬಹುದು. ಹಾಗಾಗಿ ವಾಹನ ಖರೀದಿಗೂ ಮುನ್ನ ಎಚ್ಚರಿಕೆ ವಹಿಸುವುದು ಅತ್ಯಗತ್ಯ.
ಮನಸ್ತಾಾಪಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಧನಸ್ಸು ರಾಶಿಯವರಿಗೆ ಅರ್ಧಾಷ್ಟಮ ಶನಿ ಇರುವ ಕಾರಣ, ಮನಸ್ಸಿಗೆ ಬಂದಂತೆ ಮಾತು ಬರುತ್ತದೆ. ಹಾಗಾಗಿ ತಾಳ್ಮೆ ವಹಿಸಿ, ಸತ್ಯವನ್ನು ಅರಿತು ಮಾತನಾಡುವುದು ಉತ್ತಮ.
ಭೂಮಿ ಖರೀದಿ ವಿಷಯದಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಹಾಗಾಗಿ ಜಾಗದ ಬಗ್ಗೆ ತಿಳಿದುಕೊಂಡು ಬಳಿಕ, ಖರೀದಿಸಿದರೆ ಉತ್ತಮ. ತಾಯಿಯ ವಿಷಯದಲ್ಲೂ ನೀವು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ತಾಯಿಯ ವಿಚಾರದಲ್ಲಿ ಜಗಳವಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.